ವಾಷಿಂಗ್ಟನ್: ಕೊರೊನಾ ವೈರಸ್ ಎಲ್ಲೆಡೆ ಹಬ್ಬುತ್ತಿದ್ದು,ಇದರಿಂದ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಜನರ ಈ ಆತಂಕವನ್ನೇ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ತಡೆಯಲು ಮಾಸ್ಕ್ ಕುರಿತ ಜಾಹೀರಾತನ್ನು ತಾತ್ಕಾಲಿಕವಾಗಿ ನಿಷೇಧಿಸಲು ಫೇಸ್‌ಬುಕ್ ಮುಂದಾಗಿದೆ
ಮುಂದಿನ ಕೆಲವೇ ದಿನಗಳಲ್ಲಿ ಈ ನಿಯಮವನ್ನು ಜಾರಿಗೆ ತರುವುದಾಗಿ ಫೇಸ್‌ಬುಕ್ ತಿಳಿಸಿದೆ.
ನಮ್ಮ ತಂಡ COVID-19 ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಒಂದು ವೇಳೆ ಯಾರಾದ್ರೂ ಜಾಹೀರಾತು ಮೂಲಕ ಇದನ್ನು ದುರ್ಬಳಕೆ ಮಾಡುತ್ತಿರುವುದು ಕಂಡು ಬಂದರೆ, ನಮ್ಮ ನೀತಿಗಳಲ್ಲಿ ಅಗತ್ಯವಾದ ಬದಲಾವಣೆ ಮಾಡುವ ಅವಶ್ಯಕತೆ ಇದ್ದರೆ ಮಾಡುತ್ತೇವೆ. ಈ ಹಿಂದೆ ನಾವು ಆರೋಗ್ಯ ಉತ್ಪನ್ನಗಳ ಕುರಿತ ಜಾಹೀರಾತನ್ನು ನಿಷೇಧಿಸುವುದಾಗಿ ಹೇಳಿದ್ದೇವೆ ಎಂದು ಫೇಸ್‌ಬುಕ್‌ನ ಉತ್ಪನ್ನ ನಿರ್ವಹಣೆಯ ನಿರ್ದೇಶಕ ರಾಬ್ ಲೆದರ್ನ್ ತಿಳಿಸಿದ್ದಾರೆ.
ಕೆಲವು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಮುಖವಾಡಗಳನ್ನು(ಮಾಸ್ಕ್) ಖರೀದಿಸುವುದನ್ನು ನಿಲ್ಲಿಸುವಂತೆ ಜನರನ್ನು ಒತ್ತಾಯಿಸಿದ್ದಾರೆ. ಯುಎಸ್ ಸರ್ಜನ್ ಜನರಲ್ ಡಾ. ಜೆರೋಮ್ ಎಮ್. ಆಡಮ್ಸ್ ಫೆಬ್ರವರಿ 29 ರಂದು ಮಾಡಿದ ಟ್ವೀಟ್‌ನಲ್ಲಿ ಸಾರ್ವಜನಿಕರನ್ನು ರಕ್ಷಿಸುವಲ್ಲಿ ಮುಖವಾಡಗಳು ಪರಿಣಾಮಕಾರಿಯಾಗಿಲ್ಲ ಎಂದು ಹೇಳಿದ್ದರು.