ETV Bharat / international

ಪ್ರಚೋದನೆ ನೀಡುತ್ತಿದ್ದ 200 ಸೋಷಿಯಲ್ ಮೀಡಿಯಾ ಖಾತೆಗಳನ್ನು ಕಿತ್ತೆಸೆದ ಫೇಸ್​ಬುಕ್​

ಮಿನ್ನಿಯಾಪೋಲಿಸ್​​​ನ ಅಧಿಕಾರಿ ನೀಡಿದ ಹಿಂಸೆಯಿಂದಾಗಿ ಕಪ್ಪುವರ್ಣಿಯ ಜಾರ್ಜ್​ ಫ್ಲಾಯ್ಡ್ ಹತ್ಯೆ ಬಳಿಕ ಅಮೆರಿಕದಾದ್ಯಂತ ಪ್ರತಿಭಟನೆ ಭುಗಿಲೆದ್ದಿದೆ. ಕಪ್ಪು ವರ್ಣೀಯರ ಹತ್ಯೆಗಳ ವಿರುದ್ಧ ಪ್ರತಿಭಟನೆಗಳನ್ನು ನಡೆಸಲು ಪ್ರಚೋದನೆ ನೀಡುತ್ತಿದ್ದ ಸುಮಾರು 200 ಸೋಷಿಯಲ್ ಮೀಡಿಯಾ ಖಾತೆಗಳನ್ನು ಫೇಸ್​ಬುಕ್​ ತೆಗೆದುಹಾಕಿದೆ.

FacebFacebook removes nearly 200 accounts tied to hate groupsook
ಫೇಸ್​ಬುಕ್​
author img

By

Published : Jun 6, 2020, 12:08 PM IST

ಸ್ಯಾನ್ ಫ್ರಾನ್ಸಿಸ್ಕೋ: ಕಪ್ಪು ವರ್ಣೀಯರ ಹತ್ಯೆಗಳ ವಿರುದ್ಧ ಪ್ರತಿಭಟನೆಗಳನ್ನು ನಡೆಸಲು ಪ್ರಚೋದನೆ ನೀಡುತ್ತಿದ್ದ ಸುಮಾರು 200 ಸೋಷಿಯಲ್ ಮೀಡಿಯಾ ಖಾತೆಗಳನ್ನು ಫೇಸ್​ಬುಕ್​ ತೆಗೆದುಹಾಕಿದೆ.

ಮಿನ್ನಿಯಾಪೊಲೀಸ್​​ನ ಅಧಿಕಾರಿ ನೀಡಿದ ಹಿಂಸೆಯಿಂದಾಗಿ ಕಪ್ಪುವರ್ಣಿಯ ಜಾರ್ಜ್​ ಫ್ಲಾಯ್ಡ್ ಮೃತಪಟ್ಟ ಬಳಿಕ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕೊರೊನಾ ಭೀತಿಯ ನಡುವೆಯೂ ಅಮೆರಿಕದಾದ್ಯಂತ ಪ್ರತಿಭಟನೆ ಭುಗಿಲೆದ್ದಿದೆ. ಇದನ್ನೇ ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕೆಲವು ಸೋಷಿಯಲ್ ಮೀಡಿಯಾ ಖಾತೆಗಳ ಅಡ್ಮಿನ್​ಗಳು ತಮ್ಮ ಗುಂಪಿನ ಸದಸ್ಯರಿಗೆ, ಇತರರಿಗೆ ಪ್ರತಿಭಟನೆ ನಡೆಸಲು ಪ್ರಚೋದನೆ ನೀಡುತ್ತಿದ್ದಾರೆ.

ಇನ್ನೂ ಕೆಲವರು ಆಯುಧಗಳನ್ನು ಬಳಸಿ ಹಿಂಸಾತ್ಮಕ ಹೋರಾಟ ನಡೆಸಲು ಸೂಚಿಸುತ್ತಿದ್ದಾರೆ. ಅಂತಹ ಖಾತೆಗಳ ಮೇಲ್ವಿಚಾರಣೆಯನ್ನು ಅಧಿಕಾರಿಗಳು ಮಾಡುತ್ತಿದ್ದು, ಅವುಗಳನ್ನು ರದ್ದುಗೊಳಿಸುತ್ತಿದ್ದಾರೆ ಎಂದು ಫೇಸ್​ಬುಕ್​ನ ಭಯೋತ್ಪಾದನಾ ನಿಗ್ರಹ ಮತ್ತು ಅಪಾಯಕಾರಿ ಸಂಘಟನಾ ನೀತಿ ವಿಭಾಗದ ನಿರ್ದೇಶಕ ಬ್ರಿಯಾನ್ ಫಿಶ್ಮನ್ ತಿಳಿಸಿದ್ದಾರೆ.

ದ್ವೇಷವನ್ನು ಬಿತ್ತುತ್ತಿದ್ದ ಪ್ರೌಡ್ ಬಾಯ್ಸ್ ಮತ್ತು ಅಮೆರಿಕನ್​ ಗಾರ್ಡ್‌ ಎಂಬ ಗ್ರೂಪ್​ಗಳನ್ನು ಈಗಾಗಲೇ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ ಕಿತ್ತೆಸೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.