ETV Bharat / international

IHU Variant: ಹೊಸದಾಗಿ ಪತ್ತೆಯಾದ ಐಹೆಚ್​ಯು ಕೊರೊನಾ ರೂಪಾಂತರಿ ವೈರಸ್ ಅಪಾಯಕಾರಿಯೇ?

ಕೆಲವೇ ದಿನಗಳ ಹಿಂದೆ ಪತ್ತೆಯಾದ ಐಹೆಚ್​ಯು ಕೊರೊನಾ ರೂಪಾಂತರಿ ವೈರಸ್ ಅಷ್ಟೇನೂ ಅಪಾಯಕಾರಿಯಲ್ಲ ಎಂದು ವಿಶ್ವ ಆರೋಗ್ಯ ಸಂಘಟನೆ ಸ್ಪಷ್ಟಪಡಿಸಿದೆ.

Explained: What is IHU, the new Covid variant discovered in France
IHU Variant: ಹೊಸದಾಗಿ ಪತ್ತೆಯಾದ ಐಹೆಚ್​ಯು ಕೊರೊನಾ ರೂಪಾಂತರಿ ವೈರಸ್ ಅಪಾಯಕಾರಿಯೇ?
author img

By

Published : Jan 6, 2022, 11:35 AM IST

ನವದೆಹಲಿ: ಕೊರೊನಾ ದಿನಕ್ಕೊಂದು ಬಣ್ಣ ಬದಲಾಯಿಸುವಂತಿದೆ. ಇತ್ತೀಚೆಗಷ್ಟೇ ಒಮಿಕ್ರಾನ್ ಕಾಣಿಸಿಕೊಂಡು, ಜಗತ್ತಿನಾದ್ಯಂತ ಭೀತಿ ಸೃಷ್ಟಿಸುತ್ತಿದೆ. ಈ ಮಧ್ಯೆ ಡೆಲ್ಟಾ ಮತ್ತು ಒಮಿಕ್ರಾನ್ ಮಿಶ್ರಣವಾದ ಡೆಲ್ಮಿಕ್ರಾನ್ ಯೂರೋಪ್​ ಮತ್ತು ಅಮೆರಿಕದ ಹಲವು ಭಾಗಗಳಲ್ಲಿ ಪತ್ತೆಯಾಗಿದ್ದು, ಕೆಲವೇ ದಿನಗಳ ಹಿಂದೆ ಐಹೆಚ್​ಯು ಎಂಬ ಹೊಸ ಕೊರೊನಾ ವೇರಿಯಂಟ್​ ಅನ್ನು ಫ್ರಾನ್ಸ್​ ತಜ್ಞರು ಪತ್ತೆ ಹಚ್ಚಿದ್ದಾರೆ.

ಐಹೆಚ್​ಯು ಎಂದರೆ ಯುನಿವರ್ಸಿಟಿ ಹಾಸ್ಪಿಟಲ್ ಇನ್ಸ್​​ಟಿಟ್ಯೂಟ್ (IHU-University Hospital Institutes)ಎಂದರ್ಥ. ಫ್ರಾನ್ಸ್​ನ ಯುನಿವರ್ಸಿಟಿ ಹಾಸ್ಪಿಟಲ್ ಇನ್ಸ್​​ಟಿಟ್ಯೂಟ್ಸ್​ನ ತಜ್ಞರು ಈ ರೂಪಾಂತರಿಯನ್ನು ಪತ್ತೆ ಹಚ್ಚಿದ ಕಾರಣದಿಂದ ತಾತ್ಕಾಲಿಕವಾಗಿ ಈ ವೈರಸ್​ಗೆ ಐಹೆಚ್​ಯು ಎಂದು ಹೆಸರಿಟ್ಟಿದ್ದಾರೆ.

ಯುನಿವರ್ಸಿಟಿ ಹಾಸ್ಪಿಟಲ್ ಇನ್ಸ್​​ಟಿಟ್ಯೂಟ್ಸ್​ ಅಡಿ ಬರುವ ಮರ್ಸಿಲ್ಲಿಯಲ್ಲಿರುವ ಮೆಡಿಟರೇನಿ ಇನ್​ಫೆಕ್ಷನ್ ಸಂಸ್ಥೆಯ ಸಂಶೋಧಕರು ಈ ವೈರಸ್ ಅನ್ನು ಕಂಡು ಹಿಡಿದಿದ್ದಾರೆ. ಈ ಹೊಸ ರೂಪಾಂತರಿ ವೈರಸ್​ ಅನ್ನು B.1.640.2 ಎಂದು ವರ್ಗೀಕರಣ ಮಾಡಲಾಗಿದೆ.

ಆಗ್ನೇಯ ಫ್ರಾನ್ಸ್‌ನಲ್ಲಿ ಒಂದೇ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಸುಮಾರು 12 ಮಂದಿ ಕೊರೊನಾ ಸೋಂಕಿತರಲ್ಲಿನ ವೈರಸ್ ಅನ್ನು ಪರೀಕ್ಷೆಗೆ ಒಳಪಡಿಸಿದಾಗ ಆ ವೈರಸ್ ವಿಭಿನ್ನ ಸಂರಚನೆಯನ್ನು ತೋರಿಸಿತ್ತು ಎಂದು ಮೆಡಿಟರೇನಿ ಇನ್​ಫೆಕ್ಷನ್ ಸಂಸ್ಥೆಯ ತಜ್ಞ ಫಿಲಿಪ್ ಕೋಲ್ಸನ್ ಸ್ಪಷ್ಟನೆ ನೀಡಿದ್ದಾರೆ.

ಐಹೆಚ್​ಯು ಮೊದಲು ಕಂಡು ಬಂದಿದ್ದು..

ಮಧ್ಯ ಆಫ್ರಿಕಾದ ಕ್ಯಾಮರೂನ್‌ಗೆ ಪ್ರವಾಸ ತೆರಳಿದ್ದ ಮಧ್ಯವಯಸ್ಸಿನ ವ್ಯಕ್ತಿಯೊಬ್ಬ ಫ್ರಾನ್ಸ್‌ಗೆ ಮರಳಿದ್ದನು. ಈತನ ಸೋಂಕು ಪರೀಕ್ಷೆಯಲ್ಲಿ ಕೊರೊನಾ ಇರುವುದು ದೃಢಪಟ್ಟಿತ್ತಾದರೂ, ಅದು ಯಾವ ರೂಪಾಂತರ ಎಂದು ಗುರುತಿಸಲು ಕಷ್ಟವಾಗಿತ್ತು. ನಂತರ ಅದು ಹೊಸ ರೂಪಾಂತರಿ ಎಂದು ಘೋಷಣೆ ಮಾಡಲಾಯಿತು.

ಈ ರೂಪಾಂತರ ಅಪಾಯಕಾರಿಯೇ?

ಐಹೆಚ್​ಯು ವೈರಸ್ ಪತ್ತೆಯಾದ ನಂತರ ವಿಶ್ವ ಆರೋಗ್ಯ ಸಂಘಟನೆ (WHO) ಪ್ರತಿಕ್ರಿಯೆ ನೀಡಿದ್ದು, ಈ ರೂಪಾಂತರಿ ವೈರಸ್ ಅಷ್ಟೇನೂ ಅಪಾಯಕಾರಿಯಲ್ಲ ಎಂದಿದೆ. ಈ ವೈರಸ್​ನ ಮೇಲೆ ಅನೇಕ ಪ್ರಯೋಗಗಳು ನಡೆಯುತ್ತಿವೆ ಎಂದು ವಿಶ್ವ ಆರೋಗ್ಯ ಸಂಘಟನೆಯ ಅಧಿಕಾರಿಯಾದ ಅಬ್ದಿ ಮಹಮುದ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಒಮಿಕ್ರಾನ್​ ಬೆನ್ನಲ್ಲೇ ಮತ್ತೊಂದು ಆತಂಕ: ಕೋವಿಡ್​ನ ಹೊಸ ರೂಪಾಂತರಿ 'IHU' ಫ್ರಾನ್ಸ್‌ನಲ್ಲಿ ಪತ್ತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.