ETV Bharat / international

ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್​ಗೆ ಮೊಟ್ಟೆ ಏಟು..!

ಫ್ರಾನ್ಸ್​​​ನ ಆಗ್ನೇಯ ನಗರದಲ್ಲಿ ಸಮಾರಂಭದಲ್ಲಿ ಭಾಗಿಯಾಗಿದ್ದ ಇಮ್ಯಾನುಯೆಲ್ ಮ್ಯಾಕ್ರೋನ್​ ಕೆನ್ನೆಗೆ ಓರ್ವ ವ್ಯಕ್ತಿ ಬಹಿರಂಗವಾಗಿ ಬಾರಿಸಿದ್ದನು. ಈಗ ಮತ್ತೊಂದು ಘಟನೆ ನಡೆದಿದೆ.

author img

By

Published : Sep 28, 2021, 6:48 AM IST

Updated : Sep 28, 2021, 7:24 AM IST

Egg thrown at French President Macron during food trade fair
ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್​ಗೆ ಮೊಟ್ಟೆ ಏಟು..!

ಪ್ಯಾರಿಸ್( ಫ್ರಾನ್ಸ್)​​ : ಅಂತಾರಾಷ್ಟ್ರೀಯ ಆಹಾರ ವ್ಯಾಪಾರ ಮೇಳದಲ್ಲಿ ಭಾಗಿಯಾಗಿದ್ದ ವೇಳೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಮೇಲೆ ವ್ಯಕ್ತಿಯೋರ್ವ ಮೊಟ್ಟೆ ಎಸೆದ ಘಟನೆ ನಡೆದಿದೆ.

ಫ್ರಾನ್ಸ್​ನ ನಗರವಾದ ಲಿಯಾನ್​​ನಲ್ಲಿ ಅಂತಾರಾಷ್ಟ್ರೀಯ ಆಹಾರ ವ್ಯಾಪಾರ ಮೇಳ ನಡೆಯುತ್ತಿದ್ದು, ಈ ವೇಳೆ ವ್ಯಕ್ತಿಯೊಬ್ಬ ಎಸೆದಿರುವ ಮೊಟ್ಟೆಯೊಂದು ಇಮ್ಯಾನುಯೆಲ್ ಮ್ಯಾಕ್ರೋನ್ ಭುಜಕ್ಕೆ ತಗುಲಿದೆ. ಈ ವೇಳೆ, ಇಬ್ಬರು ಅಂಗರಕ್ಷಕರು ಫ್ರಾನ್ಸ್​ ಅಧ್ಯಕ್ಷನ ರಕ್ಷಣೆಗೆ ಧಾವಿಸಿದ್ದಾರೆ.

ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಮೇಲೆ ಮೊಟ್ಟೆ ಎಸೆತ

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆಯುತ್ತಿರುವ ದೃಶ್ಯವೂ ಕೂಡಾ ಸೆರೆಯಾಗಿದೆ. ಸದ್ಯಕ್ಕೆ ಮೊಟ್ಟೆ ಎಸೆದ ವ್ಯಕ್ತಿ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಈ ಘಟನೆಯ ನಂತರ ಇಮ್ಯಾನುಯೆಲ್ ಮ್ಯಾಕ್ರೋನ್ ಪ್ರತಿಕ್ರಿಯೆ ನೀಡಿದ್ದು, ಆ ವ್ಯಕ್ತಿ ನನ್ನ ಬಳಿ ಏನಾದರೂ ಹೇಳಲು ಬಯಸಿದರೆ, ನನ್ನ ಬಳಿ ಬರಬಹುದು ಎಂದಿದ್ದಾರೆ.

ಜೂನ್​​​ನಲ್ಲಿ ಕೆನ್ನೆಗೆ ಬಾರಿಸಿದ್ದ..

ಕಳೆದ ಜೂನ್ ತಿಂಗಳಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು. ಫ್ರಾನ್ಸ್​ನ ಆಗ್ನೇಯ ನಗರದಲ್ಲಿ ಸಮಾರಂಭದಲ್ಲಿ ಭಾಗಿಯಾಗಿದ್ದ ಇಮ್ಯಾನುಯೆಲ್ ಮ್ಯಾಕ್ರೋನ್​ ಕೆನ್ನೆಗೆ ಓರ್ವ ವ್ಯಕ್ತಿ ಬಹಿರಂಗವಾಗಿ ಬಾರಿಸಿದ್ದನು. ಈ ವೇಳೆ, ಇಮ್ಯಾನುಯೆಲ್ ಮ್ಯಾಕ್ರೋನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಕ್ರೌಡ್ ಬಾತ್ ಎಂದರೇನು..?

ರಾಜಕೀಯ ವ್ಯಕ್ತಿಗಳಲ್ಲಿ ಹಲವರು ಸಾಮಾನ್ಯವಾಗಿ ಜನರೊಂದಿಗೆ ಬೆರೆಯಲು ಇಷ್ಟಪಡುತ್ತಾರೆ. ಯಾವಾಗಲೂ ಅವರು ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಹಾತೊರೆಯುತ್ತಿರುತ್ತಾರೆ. ಇಮ್ಯಾನುಯೆಲ್ ಮ್ಯಾಕ್ರೋನ್​ ಸಾಮಾನ್ಯವಾಗಿ ಜನರೊಂದಿಗೆ ಬೆರೆಯಲು ಇಷ್ಟಪಡುತ್ತಾರೆ.

ಈ ರೀತಿಯಾಗಿ ಜನರೊಂದಿಗೆ ಕಾಣಿಸಿಕೊಳ್ಳುವ ಪರಿಯನ್ನು ಫ್ರಾನ್ಸ್​​ ಭಾಷೆಯಲ್ಲಿ ಕ್ರೌಡ್ ಬಾತ್ಸ್​​​​ (crowd baths) ಎಂದು ಕರೆಯುತ್ತಾರೆ. ಕ್ರೌಡ್ ಬಾತ್​ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕಾರಣದಿಂದಲೇ ಇಮ್ಯಾನುಯೆಲ್ ಮ್ಯಾಕ್ರೋನ್​ಗೆ ಇಂತಹ ಪರಿಸ್ಥಿತಿಗಳು ಎದುರಾಗುತ್ತವೆ ಎನ್ನಲಾಗಿದೆ.

ಇದನ್ನೂ ಓದಿ: ದಿನಕ್ಕೊಂದು ರೂಲ್ಸ್.. ಇನ್ಮೇಲೆ ಅಫ್ಘಾನಿಸ್ತಾನದಲ್ಲಿ ಗಡ್ಡದ ಶೇವ್​, ಟ್ರಿಮ್​ ಮಾಡುವುದು ನಿಷಿದ್ಧ..

Last Updated : Sep 28, 2021, 7:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.