ವಾಷಿಂಗ್ಟನ್: ಐಸಿಸ್ ಭಯೋತ್ಪಾದಕ ಸಂಘಟನೆಯನ್ನು ಕಟ್ಟಿ ಬೆಳೆಸಿ ಸಾವಿರಾರು ಅಮಾಯಕರ ಸಾವಿಗೆ ಕಾರಣವಾಗಿದ್ದ ಅಬು ಬಕರ್ ಅಲ್ ಬಗ್ದಾದಿಯನ್ನು ಕೊನೆಗೂ ಅಮೆರಿಕ ಸೇನೆ ಹೊಡೆದುರುಳಿಸಿದೆ.
ಅಮೆರಿಕ ಸೇನೆಯ ರಹಸ್ಯ ಕಾರ್ಯಾಚರಣೆಯಲ್ಲಿ ಬಗ್ದಾದಿ ರಣಹೇಡಿಯಂತೆ ಸತ್ತುಬಿದ್ದ ಎಂದು ಅಧ್ಯಕ್ಷ ಟ್ರಂಪ್ ತಮ್ಮ ಸೇನೆಯ ಆಪರೇಷನ್ ಬಗ್ಗೆ ಭಾನುವಾರ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಈ ವೇಳೆ ಬಗ್ದಾದಿ ಸಾವಿಗೆ ಕಾರಣ ಒಂದು ನಾಯಿ ಎನ್ನುವ ವಿಚಾರವನ್ನು ಟ್ರಂಪ್ ಉಲ್ಲೇಖ ಮಾಡಿದ್ದರು.
ಜಗತ್ತನ್ನೇ ನಡುಗಿಸಿದ ಉಗ್ರ ರಣಹೇಡಿಯಂತೆ ಸಾವು...! ಅಮೆರಿಕ ಸೇನೆಯ ರೋಚಕ ಕಾರ್ಯಾಚರಣೆ ಹೀಗಿತ್ತು...
ಜಗತ್ತಿನ ಹಲವೆಡೆ ಅಮಾಯಕರನ್ನು ಭಯಬೀತರನ್ನಾಗಿಸಿ ತಮ್ಮ ಅಜೆಂಡಾವನ್ನು ಸ್ಥಾಪಿಸಲು ಹೊರಟಿದ್ದ ಬಗ್ದಾದಿಯನ್ನೇ ಭಯಗೊಳಿಸಿ ಸಾವಿಗೆ ಕಾರಣವಾದ ಅಮೆರಿಕ ಸೇನೆಯ ನಾಯಿಯ ಫೋಟೋವನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಟ್ವೀಟ್ ಮಾಡಿದ್ದಾರೆ.
-
We have declassified a picture of the wonderful dog (name not declassified) that did such a GREAT JOB in capturing and killing the Leader of ISIS, Abu Bakr al-Baghdadi! pic.twitter.com/PDMx9nZWvw
— Donald J. Trump (@realDonaldTrump) October 28, 2019 " class="align-text-top noRightClick twitterSection" data="
">We have declassified a picture of the wonderful dog (name not declassified) that did such a GREAT JOB in capturing and killing the Leader of ISIS, Abu Bakr al-Baghdadi! pic.twitter.com/PDMx9nZWvw
— Donald J. Trump (@realDonaldTrump) October 28, 2019We have declassified a picture of the wonderful dog (name not declassified) that did such a GREAT JOB in capturing and killing the Leader of ISIS, Abu Bakr al-Baghdadi! pic.twitter.com/PDMx9nZWvw
— Donald J. Trump (@realDonaldTrump) October 28, 2019
ಬಗ್ದಾದಿ ಸಾವಿಗೆ ಕಾರಣವಾದ ಶ್ವಾನದ ಫೋಟೋವನ್ನು ಟ್ರಂಪ್ ಸೋಮವಾರ ಟ್ವೀಟ್ ಮಾಡಿ ಶ್ವಾನದ ಅದ್ಭುತ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ನಾಯಿಯ ಹೆಸರನ್ನು ಉಲ್ಲೇಖಿಸದೆ ಬಗ್ದಾದಿ ಸಾವಿಗೆ ಈತನೇ ಕಾರಣ ಎಂದಿದ್ದಾರೆ.
'ಆತ ನಾಯಿಯಂತೆ ಸತ್ತಿದ್ದಾನೆ' ಐಸಿಸ್ ನಾಯಕ ಬಗ್ದಾದಿ ಹತ್ಯೆ ಖಚಿತಪಡಿಸಿದ ಟ್ರಂಪ್!
ಲಾಡೆನ್ ಮಾದರಿಯಲ್ಲಿ ಬಗ್ದಾದಿ ಅಂತ್ಯಕ್ರಿಯೆ:
ಕೆಲ ವರ್ಷಗಳ ಹಿಂದೆ ಜಾಗತಿಕ ಉಗ್ರ ಒಸಾಮಾ ಬಿನ್ ಲಾಡೆನ್ನನ್ನು ಆತನ ಮನೆ ಮೇಲೆ ದಾಳಿ ನಡೆಸಿ ಅಮೆರಿಕ ಸೇನೆ ಹತ್ಯೆ ಮಾಡಿತ್ತು. ಆ ಬಳಿಕ ಆತನ ಶವವನ್ನು ಸಮುದ್ರಕ್ಕೆಸೆಯಲಾಗಿತ್ತು.
ಪ್ರಸ್ತುತ ಬಗ್ದಾದಿಯ ಶವಕ್ಕೂ ಇದೇ ರೀತಿಯ ಅಂತ್ಯ ನೀಡಲಾಗಿದೆ ಎಂದು ಅಮೆರಿಕ ಸೇನೆ ಮಾಹಿತಿ ನೀಡಿದೆ.