ವಾಷಿಂಗ್ಟನ್: ವಿಶ್ವದ ಹಲವು ದೇಶಗಳಲ್ಲಿ ಹರಡುತ್ತಿರುವ ಮಾರಣಾಂತಿಕ ಕೊರೊನಾ ವೈರಸ್ಗೆ ಬಲಿಯಾಗುತ್ತಿರುವವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೊರೊನಾಗೆ ನಿನ್ನೆಯಷ್ಟೇ ಅಮೆರಿಕದಲ್ಲಿ ಮೊದಲ ಬಲಿಯಾಗಿದ್ದು ವರದಿಯಾಗಿತ್ತು. ಆದ್ರೆ ಈಗ ಬಲಿಯಾದವರ ಸಂಖ್ಯೆ 6ಕ್ಕೇರಿದೆ.
ಕಿಂಗ್ ಕೌಂಟಿಯಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವ ಪ್ರಕರಣಗಳು ಪತ್ತೆಯಾಗಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಮಹಿಳೆ ಸಾವನ್ನಪ್ಪಿರುವುದನ್ನ ದೃಢಪಡಿಸಿದ್ದರು. ಅಲ್ಲದೇ ಈಗಾಗಲೇ ಅಮೆರಿಕದಲ್ಲಿ 22 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ನಾವು ಸಿದ್ಧರಿದ್ದೇವೆ. ವೈರಸ್ ವಿರುದ್ಧ ಲಸಿಕೆ ಕಂಡುಹಿಡಿಯಲು ಔಷಧಿ ತಯಾರಿಕಾ ಕಂಪನಿಯೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.
ಇಟಲಿ:
ಇನ್ನು ಇಟಲಿಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 18ರಿಂದ 52ಕ್ಕೆ ಏರಿದೆ. 2000 ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ .
ಈಗಾಗಲೇ ಕೊರೊನಾ ವೈರಸ್ ಪ್ರಕರಣಗಳು ಅಮೆರಿಕ, ಸಿಂಗಾಪುರ್, ಇಟಲಿ, ಫ್ರಾನ್ಸ್, ರಷ್ಯಾ, ಸ್ಪೇನ್ ಮತ್ತು ಭಾರತ ಸೇರಿದಂತೆ 45ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದಿವೆ. ಈ ಮಹಾಮಾರಿಗೆ ಚೀನಾದಲ್ಲಿ ಇಲ್ಲಿಯವರೆಗೆ 2,835ಕ್ಕೂ ಅಧಿಕ ಜನರು ಸಾವನ್ನಪ್ಪಿರುವ ವರದಿಯಾಗಿದೆಎಂದು ತಿಳಿದು ಬಂದಿದೆ.