ETV Bharat / international

ಕೊರೊನಾ ಕ್ರೌರ್ಯ: ಲಕ್ಷ ದಾಟಿತು ಸಾವಿನ ಸಂಖ್ಯೆ; ಇಟಲಿಯನ್ನು ಮೀರಿಸುವತ್ತ ಅಮೆರಿಕ - ಕೊರೊನಾ ಅಪ್ಡೇಟ್​

ಅಮೆರಿಕದಲ್ಲಿ ಸಾವಿನ ಸಂಖ್ಯೆ ಹಾಗೂ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಭಾರಿ ಏರಿಕೆಯಾಗುತ್ತಿದೆ. ಇಲ್ಲಿ ಒಂದೇ ದಿನ ಸುಮಾರು 2,000 ಜನ ಸಾವನ್ನಪ್ಪಿದ್ದಾರೆ. ದೇಶದ ಒಟ್ಟು ಸಾವಿನ ಸಂಖ್ಯೆ 18,747ಕ್ಕೇರಿದೆ. ಇಟಲಿಯ ನಂತರ ಹೆಚ್ಚು ಜನ ಸಾವನ್ನಪ್ಪಿದ ರಾಷ್ಟ್ರ ಅಮೆರಿಕವಾಗಿದೆ. ಸದ್ಯ ಇಟಲಿಯಲ್ಲಿ 18,849 ಜನ ಸಾವನ್ನಪ್ಪಿದ್ದು, ಅಮೆರಿಕ ಇಟಲಿಯನ್ನೂ ಮೀರಿಸುವಂತಿದೆ.

Covid-19
ಲಕ್ಷ ಗಡಿ ದಾಟಿದ ಜಾಗತಿಕ ಸಾವಿನ ಸಂಖ್ಯೆ
author img

By

Published : Apr 11, 2020, 10:03 AM IST

Updated : Apr 11, 2020, 10:45 AM IST

ವಾಷಿಂಗ್ಟನ್​: ಮಹಾಮಾರಿ ಕೊರೊನಾ ಅಟ್ಟಹಾಸಕ್ಕೆ ಜಗತ್ತಿನಾದ್ಯಂತ ಸಾವನ್ನಪ್ಪಿದವರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ. ಈವರೆಗೆ ಜಗತ್ತಿನಾದ್ಯಂತ 1,02,734 ಜನ ಮಾರಕ ಸೋಂಕಿಗೆ ಬಲಿಯಾಗಿದ್ದು, ಸುಮಾರು 17 ಲಕ್ಷ ಜನ ಸೋಂಕಿಗೊಳಗಾಗಿದ್ದಾರೆ.

ವಿಶ್ವದಲ್ಲಿ ಈವರೆಗೆ 16,99,632ಕ್ಕೂ ಹೆಚ್ಚು ಜನ ಸೋಂಕಿಗೊಳಗಾಗಿದ್ದಾರೆ. ಇದರಲ್ಲಿ 3,76,330 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಅಮೆರಿಕದಲ್ಲಿ ಸಾವಿನ ಸಂಖ್ಯೆ ಹಾಗೂ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಭಾರಿ ಏರಿಕೆಯಾಗುತ್ತಿದ್ದು, ಇಲ್ಲಿ ಒಂದೇ ದಿನ ಸರಿಸುಮಾರು 2,000 ಜನ ಸಾವನ್ನಪ್ಪಿದ್ದಾರೆ. ದೇಶದ ಒಟ್ಟು ಸಾವಿನ ಸಂಖ್ಯೆ 18,747ಕ್ಕೇರಿದ್ದು, ಇಟಲಿ ನಂತರ ಹೆಚ್ಚು ಜನ ಸಾವನ್ನಪ್ಪಿದ ರಾಷ್ಟ್ರ ಅಮೆರಿಕವಾಗಿದೆ. ಸದ್ಯ ಇಟಲಿಯಲ್ಲಿ 18,849 ಜನ ಸಾವನ್ನಪ್ಪಿದ್ದು, ಅಮೆರಿಕ ಇಟಲಿಯನ್ನೂ ಮೀರಿಸುವಂತಿದೆ.

ಅಮೆರಿಕದಲ್ಲಿ 5,02,876 ಜನರನ್ನು ಸೋಂಕು ಬಾಧಿಸಿದ್ದು, ಇಟಲಿಯಲ್ಲಿ 147,577 ಜನ ಸೋಂಕಿಗೊಳಗಾಗಿದ್ದಾರೆ.

ಸ್ಪೇನ್​ನಲ್ಲೂ ಕೊರೊನಾ ಸಾವು-ನೋವು ಹೆಚ್ಚುತ್ತಿದ್ದು, ಈವರೆಗೆ ದೇಶದಲ್ಲಿ 16,081 ಜನ ಸಾವನ್ನಪ್ಪಿದ್ದರೆ, 1,58,273 ಸೋಂಕಿಗೊಳಗಾಗಿದ್ದಾರೆ. ಅತ್ತ ಫ್ರಾನ್ಸ್​ನಲ್ಲಿ 13,197, ಬ್ರಿಟನ್​ 8,958, ಇರಾನ್​ 4,232 ಹಾಗೂ ಚೀನಾದಲ್ಲಿ 3,339 ಜನ ಸಾವನ್ನಪ್ಪಿದ್ದಾರೆ.

Last Updated : Apr 11, 2020, 10:45 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.