ETV Bharat / international

ಆ 2 ಔಷಧಗಳ ಸಂಯೋಜನೆ ಬಳಸಿದರೆ ಹೃದಯಕ್ಕೆ ಅಪಾಯ: ಸಂಶೋಧನೆ - ಹೈಡ್ರಾಕ್ಸಿಕ್ಲೋರೋಕ್ವಿನ್ ಲೇಟೆಸ್ಟ್ ನ್ಯೂಸ್

ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ಮಲೇರಿಯಾ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಜೊತೆಗೆ ಪ್ರತಿಜೀವಕ ಅಜಿಥ್ರೊಮೈಸಿನ್ ಅನ್ನು ಬಳಸುವುದರಿಂದ ಹೃದಯದ ತೊಂದರೆಗಳು ಹೆಚ್ಚಾಗಬಹುದು ಎಂದು ವರದಿಯೊಂದು ತಿಳಿಸಿದೆ.

hydroxychloroquine azinthromycin mix
2 ಔಷಧಿಗಳ ಸಂಯೋಜನೆ ಬಳಸಿದರೆ ಹೃದಯಕ್ಕೆ ಅಪಾಯ
author img

By

Published : Apr 24, 2020, 5:48 PM IST

ಕೊರೊನಾ ಸಾಂಕ್ರಾಮಿಕ ರೋಗದಿಂದ ವಿಶ್ವದಾದ್ಯಂತ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಸೋಂಕಿತರ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ಕೆಲವು ವೈದ್ಯರು ನಂಬಿದ್ದಾರೆ. ಆದರೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಜೊತೆಗೆ ಪ್ರತಿಜೀವಕ ಅಜಿಥ್ರೊಮೈಸಿನ್ ಸೇವಿಸುವುದರಿಂದ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ ಎಂದು ವರದಿಯು ಎಚ್ಚರಿಸಿದೆ. ಈ ಔಷಧಿಗಳನ್ನು ಬಳಸುವಾಗ ಜಾಗರೂಕರಾಗಿರಿ, ಇಲ್ಲದಿದ್ದರೆ ಹೃದಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಎಚ್ಚರಿಸಲಾಗಿದೆ.

'ಕೋವಿಡ್ -19 ಚಿಕಿತ್ಸೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೊಮೈಸಿನ್ ಪರಿಣಾಮದ ಬಗ್ಗೆ ಪ್ರಸ್ತುತ ಹೆಚ್ಚಿನ ಮಾಹಿತಿ ಇಲ್ಲ. ಆದಾಗ್ಯೂ, ಕೆಲವು ವೈದ್ಯರು ಕೊರೊನಾ ವೈರಸ್ ಚಿಕಿತ್ಸೆಗೆ ಇದನ್ನು ಬಳಸಲು ಯೋಚಿಸುತ್ತಿದ್ದಾರೆ. ಕೊರೊನಾ ರೋಗಿಗಳಿಗೆ ಈ ಔಷಧಗಳನ್ನು ಬಳಸಲು ಬಯಸುವ ವೈದ್ಯರು ಅಡ್ಡಪರಿಣಾಮಗಳನ್ನು ತಿಳಿದುಕೊಳ್ಳಿ ಎಂದು ಕೇಳಿಕೊಳ್ಳುತ್ತಿದ್ದೇನೆ' ಎಂದು ಒಎಚ್‌ಎಸ್‌ಯು ಸಹಾಯಕ ಪ್ರಾಧ್ಯಾಪಕ ಎರಿಕ್ ಸ್ಟೆಕರ್ ಹೇಳಿದ್ದಾರೆ

ಈ ಔಷಧಗಳನ್ನು ಬಳಸಲು ರೋಗಿಗಳ ಹೃದಯ ಬಡಿತಗಳಲ್ಲಿನ ಬದಲಾವಣೆಗಳನ್ನು ಗಮನಿಸಬೇಕು ಎಂದು ತಜ್ಞರು ಸೂಚಿಸುತ್ತಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದಶಕಗಳಷ್ಟು ಹಳೆಯದಾದ ಮಲೇರಿಯಾ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರೊನಾ ಸೋಂಕಿತ ರೋಗಿಗಳ ಮೇಲೆ ಭರವಸೆಯ ಫಲಿತಾಂಶಗಳನ್ನು ತೋರಿಸಿದೆ. ಇದು ಅಸಾಮಾನ್ಯ ವಿಷಯ ಎಂದು ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.