ETV Bharat / international

ಮಾರಕ ಡೆಲ್ಟಾ ರೂಪಾಂತರಿ ಭೀತಿ: ಯುಎಸ್‌ ಪ್ರಜೆಗಳು ಲಸಿಕೆ ಪಡೆಯುವಂತೆ ಅಧ್ಯಕ್ಷ ಬೈಡನ್‌ ಕರೆ

ತುಂಬಾ ದೊಡ್ಡ ಪ್ರಮಾಣದಲ್ಲಿ ಯುವ ಜನತೆಗೆ ಮಾರಕ ಡೆಲ್ಟಾ ರೂಪಾಂತರಿ ಕೋವಿಡ್‌ ವೈರಸ್‌ ಭೀತಿ ಎದುರಾಗಿದ್ದು, ಅಮೆರಿಕದ ಎಲ್ಲಾ ಪ್ರಜೆಗಳು ಎಷ್ಟು ಸಾಧ್ಯವೋ ಅಷ್ಟು ಬೇಗ ಲಸಿಕೆ ಪಡೆಯಬೇಕು ಎಂದು ಅಧ್ಯಕ್ಷ ಜೋ ಬೈಡನ್‌ ಕರೆ ನೀಡಿದ್ದಾರೆ.

COVID-19:Biden warns of 'potentially deadlier' delta variant, urges public to get vaccinated
ಮಾರಕ ಡೆಲ್ಟಾ ರೂಪಾಂತರಿ ಭೀತಿ; ಯುಎಸ್‌ ಪ್ರಜೆಗಳು ಲಸಿಕೆ ಪಡೆಯುವಂತೆ ಅಧ್ಯಕ್ಷ ಬೈಡನ್‌ ಕರೆ
author img

By

Published : Jun 19, 2021, 7:46 AM IST

ವಾಷಿಂಗ್ಟನ್‌: ಭಾರತದಲ್ಲಿ ಪತ್ತೆಯಾಗಿದ್ದ ಡೆಲ್ಟಾ ಕೋವಿಡ್‌ ರೂಪಾಂತರಿ ವೈರಸ್‌ ತಳಿ ಈಗ ವಿಶ್ವವ್ಯಾಪಿಯಾಗಿ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ತಮ್ಮ ದೇಶದ ಪ್ರಜೆಗಳಿಗೆ ಸೋಂಕಿನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ತುಂಬಾ ದೊಡ್ಡ ಪ್ರಮಾಣದಲ್ಲಿ ಅದರಲ್ಲೂ ಯುವ ಜನತೆಗೆ ಮಾರಕ ಡೆಲ್ಟಾ ರೂಪಾಂತರಿ ಕೋವಿಡ್‌ ವೈರಸ್‌ ಭೀತಿ ಎದುರಾಗಿರುವುದರಿಂದ ಅಮೆರಿಕದ ಎಲ್ಲಾ ಪ್ರಜೆಗಳು ಎಷ್ಟು ಸಾಧ್ಯವೋ ಅಷ್ಟು ಬೇಗ ಲಸಿಕೆ ಪಡೆಯಬೇಕು ಎಂದು ಅಧ್ಯಕ್ಷ ಜೋ ಬೈಡನ್‌ ಕರೆ ನೀಡಿದ್ದಾರೆ.

ವೈಟ್‌ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದೊಂದು ತಿಂಗಳಿನಿಂದ ಲಸಿಕೆ ಪಡೆಯದವರನ್ನು ಹೊಸ ರೂಪಾಂತರಿ ಕಾಡುತ್ತಿದೆ. ಇದು ಅತ್ಯಂತ ಗಂಭೀರ ವಿಚಾರವಾಗಿದ್ದು, ಡೆಲ್ಟಾ ವೈರಸ್‌ ಅತಿ ಸುಲಭವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಿದೆ. ವಿಶೇಷವಾಗಿ ಯುವ ಜನತೆಗೆ ಹೆಚ್ಚು ಮಾರಕವಾಗಿರುವುದಾಗಿ ತಜ್ಞರು ತಿಳಿಸಿದ್ದಾರೆ ಎಂದರು.

ಇದನ್ನೂ ಓದಿ: ಕೋವಿಡ್ ಅಬ್ಬರ, ಲಾಕ್‌ಡೌನ್​ ಹೊರತಾಗಿಯೂ ಹೂಡಿಕೆದಾರರಿಗೆ ಕರುನಾಡೇ ಅಚ್ಚುಮೆಚ್ಚು!

ಕಳೆದ 150 ದಿನಗಳಲ್ಲಿ 300 ಮಿಲಿಯನ್‌ ಕೋವಿಡ್‌ ಲಸಿಕೆ ನೀಡಲಾಗಿದೆ. ನಾನು ಅಧಿಕಾರ ಸ್ವೀಕರಿಸಿದಾಗ ದೇಶ ತುಂಬಾ ಬಿಕ್ಕಿಟ್ಟಿನಲ್ಲಿತ್ತು. ವೈರಸ್‌ನಿಂದಾಗಿ ಆದೇಶದ ಆರ್ಥಿಕತೆಗೆ ಹೊಡೆತ ಬಿದ್ದಿರುವುದಿಲ್ಲದೆ ಉದ್ಯೋಗದಲ್ಲಿನ ಬೆಳವಣಿಗೆಯಲ್ಲಿ ಎಲ್ಲಾ ದಾಖಲೆಗಳನ್ನು ಕೆಡವಿ ಹಾಕಿತ್ತು. ಇದೆಲ್ಲಾ ಕೆಲವೇ ತಿಂಗಳುಗಳ ಅಂತರದಲ್ಲಿ ನಡೆದು ಹೋಗಿದೆ ಎಂದು ಬೈಡನ್‌ ವಿವರಿಸಿದ್ದಾರೆ.

ಭಾರತದಲ್ಲಿ ಮೊದಲು ಪತ್ತೆಯಾಗಿದ್ದ ಡೆಲ್ಟಾ ಕೋವಿಡ್‌ ರೂಪಾಂತರಿ ವೈರಲ್‌ ತಳಿ ವಿಶ್ವವ್ಯಾಪಿಯಾಗಿ ಆತಂಕ ಉಂಟು ಮಾಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.