ETV Bharat / international

ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾದ ಸೀನು: ವಿಮಾನ ಪ್ರಯಾಣ ಅರ್ಧದಲ್ಲೇ ಮೊಟಕು - ಈಗಲ್​- ಕೊಲೊರಾಡೋದಿಂದ ನ್ಯೂಯಾರ್ಕ್​

ಕೊರೊನಾ ವೈರೆಸ್​ ಸಾರ್ವಜನಿಕರಲ್ಲಿ ಎಷ್ಟರ ಮಟ್ಟಿಗೆ ಆತಂಕವನ್ನುಂಟು ಮಾಡಿದೆ ಎಂಬುದಕ್ಕೆ ಇಲ್ಲೊಂದು ಉತ್ತಮ ನಿದರ್ಶನ ದೊರೆತಿದೆ. ಹೌದು ಈಗಲ್​- ಕೊಲೊರಾಡೋದಿಂದ ನ್ಯೂಯಾರ್ಕ್​ ಮತ್ತು ನ್ಯೂ ಜೆರ್ಸಿಗೆ ಹೊರಟಿದ್ದ ವಿಮಾನದಲ್ಲಿ ಕೆಲವರು ಸೀನುವಿಕೆ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದರಿಂದ ಸಹ ಪ್ರಯಾಣಿಕರು ಅಸಮಾಧಾನಗೊಂಡು ಅಮೆರಿಕ ವಿಮಾನವೊಂದು ತುರ್ತು ಲ್ಯಾಂಡಿಂಗ್​ ಮಾಡಿದ ಘಟನೆ ಅಮೆರಿಕದಲ್ಲಿ ನಡೆದಿದೆ.

Coronavirus
ಕೊರೊನಾ ವೈರಸ್
author img

By

Published : Mar 10, 2020, 9:19 AM IST

ಲಾಸ್​​ ಏಂಜಲೀಸ್​: ಕೊರೊನಾ ವೈರಸ್​ ಎಷ್ಟು ಭೀತಿ ಸೃಷ್ಟಿಸಿದೆ ಎಂದರೆ, ಸೀನುವಿಕೆಯೂ ಈಗ ಕಷ್ಟವಾಗಿ ಮಾರ್ಪಟ್ಟಿದೆ. ಕೆಲವರ ಸೀನುವಿಕೆ ಹಾಗೂ ಕೆಮ್ಮಿನಿಂದ ಸಹ ಪ್ರಯಾಣಿಕರು ಅಸಮಾಧಾನಗೊಂಡಿದ್ದರಿಂದ ಅಮೆರಿಕ ವಿಮಾನವೊಂದು ವಾಪಸ್​ ತೆರಳಿ ಸುದ್ದಿಯಾಗಿದೆ.

ಈಗಲ್​- ಕೊಲೊರಾಡೋದಿಂದ ನ್ಯೂಯಾರ್ಕ್​ ಮತ್ತು ನ್ಯೂ ಜೆರ್ಸಿಗೆ ಹೊರಟಿದ್ದ ವಿಮಾನದಲ್ಲಿ ಕೆಲವರು ಸೀನುವಿಕೆ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದರಿಂದ ಸಹ ಪ್ರಯಾಣಿಕರು ಕಿರಿಕಿರಿ ಅನುಭವಿಸಿದರು.

ಹೀಗಾಗಿ ಆ ವಿಮಾನಗಳನ್ನ ಡೆನೋವರ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ಮಾಡಲಾಯಿತು. ಆದರೆ ಈ ಬಗ್ಗೆ ಮಾತನಾಡಿರು ಏರ್​​ಲೈನ್ಸ್ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಿಸುವ ಯಾವುದೇ ಪರಿಸ್ಥಿತಿ ಇರಲಿಲ್ಲ. ಯಾರು ಕೆಮ್ಮು ಮತ್ತು ಸೀನಿನ ಅಲರ್ಜಿಯಿಂದ ಬಳಲುತ್ತಿದ್ದರೋ ಅವರನ್ನ ವಿಮಾನದಲ್ಲಿ ಇರಿಸಲಾಗಿತ್ತು ಎಂದು ಏರ್​ಲೈನ್ಸ್ ಮಾಹಿತಿ ನೀಡಿದೆ. ಈ ಸಂಬಂಧ ಕಾನೂನು ಜಾರಿ ನಿರ್ದೇಶನಾಲಯದ ಗಮನಕ್ಕೆ ತರಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.