ವಾಷಿಂಗ್ಟನ್(ಅಮೆರಿಕ): ಅಫ್ಘಾನಿಸ್ತಾನದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದ್ದು, ಚೀನಾ ತಾಲಿಬಾನ್ನೊಂದಿಗೆ ಕೆಲವೊಂದು ವಿಚಾರಗಳನ್ನು 'ವರ್ಕೌಟ್' ಮಾಡಿಕೊಳ್ಳಲು ಯತ್ನಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ತಾಲಿಬಾನ್ನಲ್ಲಿ ಆಂತರಿಕ ಸರ್ಕಾರ ರಚನೆಯಾದ ಬಳಿಕ ಶ್ವೇತಭವನದಲ್ಲಿ ಮಾತನಾಡಿದ ಜೋ ಬೈಡನ್ ಇದೇ ರೀತಿ ಪಾಕಿಸ್ತಾನ, ರಷ್ಯಾ, ಇರಾನ್ ದೇಶಗಳೂ ಕೂಡಾ ತಾಲಿಬಾನ್ನೊಂದಿಗೆ ತಮ್ಮ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳುವುದಕ್ಕೆ ಯತ್ನಿಸುತ್ತಿವೆ ಎಂದು ಬೈಡನ್ ಅಭಿಪ್ರಾಯಪಟ್ಟಿದ್ದಾರೆ.
ಎಲ್ಲರೂ ತಮ್ಮ ತಮ್ಮ ಹಿತಾಸಕ್ತಿಗಳಿಗಾಗಿ ಯತ್ನಿಸುತ್ತಿದ್ದು, ಮುಂದೆ ಏನಾಗುತ್ತದೆ ಎಂಬುದನ್ನು ಕಾದುನೋಡೋಣ. ಮುಂದೆ ನಡೆಯುವುದೆಲ್ಲವೂ ಕುತೂಹಲಕಾರಿಯಾಗಿರುತ್ತದೆ ಎಂದು ವರದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಬೈಡನ್ ಉತ್ತರಿಸಿದ್ದಾರೆ.
ಈ ಮಧ್ಯೆ ವಿಶ್ವಸಂಸ್ಥೆಯ ಮಾಜಿ ಯುಎಸ್ ರಾಯಭಾರಿ ನಿಕ್ಕಿ ಹ್ಯಾಲೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ನೀಡಬಾರದು ಎಂದು ಅಮೆರಿಕ ಸರ್ಕಾರವನ್ನು ಒತ್ತಾಯಿಸಿ, ಆನ್ಲೈನ್ ಪಿಟಿಷನ್ ಆರಂಭಿಸಿದ್ದಾರೆ.
-
I can't believe this is even necessary to say, but under this administration, it is: America must not recognize the Taliban as the legitimate government of Afghanistan.
— Nikki Haley (@NikkiHaley) September 7, 2021 " class="align-text-top noRightClick twitterSection" data="
Sign this petition if you agree:https://t.co/vxA1AIwjc6
">I can't believe this is even necessary to say, but under this administration, it is: America must not recognize the Taliban as the legitimate government of Afghanistan.
— Nikki Haley (@NikkiHaley) September 7, 2021
Sign this petition if you agree:https://t.co/vxA1AIwjc6I can't believe this is even necessary to say, but under this administration, it is: America must not recognize the Taliban as the legitimate government of Afghanistan.
— Nikki Haley (@NikkiHaley) September 7, 2021
Sign this petition if you agree:https://t.co/vxA1AIwjc6
ಅಫ್ಘಾನಿಸ್ತಾನದ ಕಾನೂನುಬದ್ಧ ಸರ್ಕಾರ ಎಂದು ತಾಲಿಬಾನ್ ಅನ್ನು ಅಮೆರಿಕ ಗುರುತಿಸಬಾರದು ಎಂದು ಹ್ಯಾಲೆ ಟ್ವೀಟ್ನಲ್ಲಿ ಮನವಿ ಮಾಡಿದ್ದು, ತಾಲಿಬಾನ್ ನಿಯಂತ್ರಣದಲ್ಲಿರುವ ಅಫ್ಘಾನಿಸ್ತಾನದ ನೂತನ ಸರ್ಕಾರದ ಗೃಹ ಸಚಿವರು ಎಫ್‌ಬಿಐನ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮಂಗಳವಾರ ತಾಲಿಬಾನ್ ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್ ನೇತೃತ್ವದ ಮಧ್ಯಂತರ ಸರ್ಕಾರವನ್ನು ಸ್ಥಾಪನೆ ಮಾಡಿದೆ. ಭಯೋತ್ಪಾದಕ ಸಂಘಟನೆಯಾದ ಹಕ್ಕಾನಿ ನೆಟ್ವರ್ಕ್ನ ಸಿರಾಜುದ್ದೀನ್ ಹಕ್ಕಾನಿ ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡಿದ್ದಾನೆ .
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಘೋಷಿಸಿದ ತಾಲಿಬಾನ್: ಸರ್ಕಾರದಲ್ಲಿ ಅಮೆರಿಕ ಷೋಷಿತ ಉಗ್ರನಿಗೆ ಸ್ಥಾನ