ವಾಷಿಂಗ್ಟನ್ : 21 ನೇ ಶತಮಾನದಲ್ಲಿಯೂ ಚೀನಾ ಇತರ ದೇಶಗಳಿಗೆ ಬೆದರಿಕೆಯೊಡ್ಡುತ್ತಿದೆ ಎಂದು ಯುಎಸ್ ಇಂಡೋ-ಪೆಸಿಫಿಕ್ ಕಮಾಂಡರ್ ಅಡ್ಮಿರಲ್ ಫಿಲ್ ಡೇವಿಡ್ಸನ್ ಆರೋಪಿಸಿದ್ದಾರೆ.
ಶಸ್ತ್ರ ಸೇವೆಗಳ ಸಮಿತಿ ಸಭೆಯಲ್ಲಿ ಮಾತನಾಡಿದ ಆವರು, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವು ನಮ್ಮ ಕಾನೂನುಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಸರ್ವಾಧಿಕಾರಿ ಧೋರಣೆಯನ್ನು ಉತ್ತೇಜಿಸುತ್ತದೆ. ಜೊತೆಗೆ ಚೀನಾವಿ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಸೈನಿಕರನ್ನು ಹೆಚ್ಚಿಸುತ್ತಿರುವುದರಿಂದ ಇಂಡೋ - ಪೆಸಿಫಿಕ್‌ನಲ್ಲಿನ ಮಿಲಿಟರಿ ಸಮತೋಲನವು ಯುನೈಟೆಡ್ ಸ್ಟೇಟ್ಸ್ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಹೆಚ್ಚು ಪ್ರತಿಕೂಲವಾಗುತ್ತದೆ ಎಂದು ಡೇವಿಡ್ಸನ್ ಹೇಳಿದ್ದಾರೆ.
ಚೀನಾ ಸೇರಿದಂತೆ ಎಲ್ಲ ರಾಷ್ಟ್ರಗಳನ್ನು ಅವರ ಎಲ್ಲ ನೆರೆಹೊರೆಯವರೊಂದಿಗೆ ಶಾಂತಿಯುತ ಸಂಬಂಧವನ್ನು ಕಾಪಾಡಿಕೊಂಡು ಹೋಗುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಕೆಲವೊಮ್ಮೆ ಚೀನಾವು ಅತ್ಯಂತ ವಿನಾಶಕಾರಿ ವಿಧಾನವನ್ನು ಪ್ರದರ್ಶಿಸಲು ಮುಂದಾಗುತ್ತಿದೆ. ಹೀಗಾಗಿ ಇಂಡೋ-ಪೆಸಿಫಿಕ್‌ನಲ್ಲಿ ಯುಎಸ್ ಮತ್ತು ಅದರ ಮಿತ್ರ ರಾಷ್ಟ್ರಗಳು ಹೆಚ್ಚು ಮಿಲಿಟರಿ ಪಡೆಯನ್ನು ಆಯೋಜಿಸಿ, ಚೀನಾಕ್ಕೆ ಭಯ ಹುಟ್ಟಿಸುವಂತಹ ಕೆಲಸಮಾಡಬೇಕಿದೆ ಎಂದರು.