ETV Bharat / international

ಆಕ್ರಮಣಕಾರಿ ಕ್ರಮಗಳ ಮೂಲಕ ಚೀನಾ ವಿವಾದಗಳನ್ನ ಪ್ರಚೋದಿಸುತ್ತಿದೆ: ಮೈಕ್ ಪೊಂಪಿಯೊ - ಚೀನಾ ಆಕ್ರಮಣಕಾರಿ ಕ್ರಮ

ನಾನು ಚೀನಾದ ಆಕ್ರಮಣಕಾರಿ ಕ್ರಮಗಳ ಕುರಿತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಹಲವು ಬಾರಿ ಚರ್ಚಿಸಿದ್ದೇನೆ. ಚೀನಾದ ಆಕ್ರಮಣಕಾರಿ ಕ್ರಮಕ್ಕೆ ಭಾರತವು ಉತ್ತಮ ಪ್ರತಿಕ್ರಿಯೆ ನೀಡುತ್ತಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ.

pompeo
pompeo
author img

By

Published : Jul 9, 2020, 12:15 PM IST

ವಾಷಿಂಗ್ಟನ್: ಚೀನಾದ ಆಕ್ರಮಣಕಾರಿ ಕ್ರಮಗಳಿಗೆ ಪ್ರತ್ಯುತ್ತರ ನೀಡಲು ಭಾರತೀಯರು ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿದ್ದಾರೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ.

ಚೀನಾ ವಿವಾದಗಳನ್ನು ಪ್ರಚೋದಿಸುವ ಯತ್ನವನ್ನ ಮಾಡುತ್ತಲೇ ಇರುತ್ತೆ. ಅವರ ಬೆದರಿಕೆಗಳಿಗೆ ಜಗತ್ತು ಅನುಮತಿಸಬಾರದು ಎಂದು ಅವರು ಇದೇ ವೇಳೆ ಮನವಿ ಮಾಡಿದರು.

"ನಾನು ಚೀನಾದ ಆಕ್ರಮಣಕಾರಿ ಕ್ರಮಗಳ ಕುರಿತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಹಲವು ಬಾರಿ ಚರ್ಚಿಸಿದ್ದೇನೆ. ಚೀನಾದ ಆಕ್ರಮಣಕಾರಿ ಕ್ರಮಕ್ಕೆ ಭಾರತವು ಉತ್ತಮ ತಿರುಗೇಟು ನೀಡುತ್ತಿದೆ" ಎಂದು ಅವರು ಹೇಳಿದರು.

ಗಾಲ್ವಾನ್ ಕಣಿವೆಯ ಘರ್ಷಣೆಯ ನಂತರ ಭಾರತ - ಚೀನಾ ಗಡಿಯಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಎರಡೂ ಕಡೆಯವರು ಎಲ್‌ಎಸಿಯ ಉದ್ದಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ತಮ್ಮ ನಿಯೋಜನೆಯನ್ನು ಗಮನಾರ್ಹವಾಗಿ ಹೆಚ್ಚಿಸಿದ್ದಾರೆ ಎಂದರು.

ಚೀನಾವು ಭೂತಾನ್ ಜೊತೆ ಜಾಗತಿಕ ಪರಿಸರ ಸೌಲಭ್ಯದ ಸಭೆಯಲ್ಲಿಯೂ ಗಡಿ ವಿವಾದ ಸೃಷ್ಟಿಸಿತ್ತು. ಈ ಬೆದರಿಸುವಿಕೆಯನ್ನು ಜಗತ್ತು ಅನುಮತಿಸಬಾರದು ಎಂದು ಪೊಂಪಿಯೊ ಇತರ ರಾಷ್ಟ್ರಗಳ ನಾಯಕರಿಗೆ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.