ಬ್ಯೂನಸ್ ಏರೀಸ್ (ಅರ್ಜೆಂಟಿನಾ): ರೊಸಾರಿಯೋದಲ್ಲಿರುವ ಮಾರ್ಕ್ಸ್‌ವಾದಿ ಕ್ರಾಂತಿಕಾರಿ ಚೆ ಗುವಾರ ಅವರ ಬಾಲ್ಯದ ಮನೆಯನ್ನು ಮಾರಾಟಕ್ಕೆ ಇಡಲಾಗಿದೆ.
ಚೆ ಗುವಾರ ಅವರ ಪರಂಪರೆಯ ಬಲದ ಮೇಲೆ ಮನೆಯ ವಿವಿಧ ಮಾಲೀಕರು ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.
200 ಚದರ ಮೀಟರ್ ಮನೆಗೆ $400,000( 2.99 ಕೋಟಿ ರೂ.) ಬೆಲೆ ನಿಗದಿಡಿಸಲಾಗಿದೆ ಎಂದು ವರದಿ ಮಾಡಲಾಗಿದೆ. ಈ ಮನೆ ಹಲವು ದಶಕಗಳಿಂದ ವಿವಿಧ ಮಾಲೀಕರನ್ನು ಹೊಂದಿದೆ.
ಪ್ರಸ್ತುತ ಮಾಲೀಕರಲ್ಲಿ ಒಬ್ಬರಾದ ಉದ್ಯಮಿ ಫ್ರಾನ್ಸಿಸ್ಕೊ ಫರುಗ್ಗಿಯಾ, ತಾವು ಈಗಾಗಲೇ ಮನೆ ಮಾರಾಟ ಮಾಡಲು ಯೋಜಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಚೆ ಗುವಾರ 1928ರಲ್ಲಿ ಇಲ್ಲಿ ಜನಿಸಿದ್ದು, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದಲ್ಲಿ ಅನೇಕ ಕ್ರಾಂತಿಗಳನ್ನು ಮುನ್ನಡೆಸಿದ್ದರು. 1967ರಲ್ಲಿ ಅವರನ್ನು ಬೊಲಿವಿಯಾದಲ್ಲಿ ಬೊಲಿವಿಯನ್ ಮಿಲಿಟರಿ ಗಲ್ಲಿಗೇರಿಸಿತ್ತು.