ETV Bharat / international

ಕೋವಿಡ್ ಮಾರ್ಗಸೂಚಿಗಳ ವಿರುದ್ಧ ಭಾರಿ ಪ್ರತಿಭಟನೆ : ಕೆನಡಾದ ಪ್ರಧಾನಿ ರಹಸ್ಯ ಸ್ಥಳಕ್ಕೆ ರವಾನೆ - ಕೆನಡಾದಲ್ಲಿ ಕೋವಿಡ್ ವ್ಯಾಕ್ಸಿನ್ ವಿರುದ್ಧ ಪ್ರತಿಭಟನೆ

ಜಸ್ಟಿನ್ ಟ್ರುಡೊ ಸರ್ಕಾರದ ಕೊರೊನಾ ವೈರಸ್‌ ಮಾರ್ಗಸೂಚಿಗಳ ವಿರುದ್ಧ ಸಣ್ಣ ಪ್ರಮಾಣದ ಹೋರಾಟ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಕೊರೊನಾ ಲಸಿಕೆ ಕಡ್ಡಾಯ ಹಾಗೂ ಇತರ ನಿರ್ಬಂಧಗಳನ್ನು ತೆಗೆದು ಹಾಕುವಂತೆ ಸರ್ಕಾರವನ್ನು ಒತ್ತಾಯಿಸಿ ಸಾವಿರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ..

Canadian PM moved to secret location as anti-COVID rules protests flare-up
ಕೋವಿಡ್ ಮಾರ್ಗಸೂಚಿಗಳ ವಿರುದ್ಧ ಭಾರಿ ಪ್ರತಿಭಟನೆ:ಕೆನಡಾದ ಪ್ರಧಾನಿ ರಹಸ್ಯ ಸ್ಥಳಕ್ಕೆ ರವಾನೆ
author img

By

Published : Jan 30, 2022, 1:52 PM IST

ಟೊರೊಂಟೋ,ಕೆನಡಾ : ಕೊರೊನಾ ವೈರಸ್ ಎಲ್ಲಾ ದೇಶಗಳನ್ನು ಬಾಧಿಸುತ್ತಿದೆ. ಕೋವಿಡ್ ಲಸಿಕೆಯಿಂದ ಅಪಾಯದ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆಯನ್ನು ಕಡ್ಡಾಯ ಮಾಡಿದ ಕೆನಡಾ ಸರ್ಕಾರದ ವಿರುದ್ಧ ಜನಾಕ್ರೋಶ ಮುಗಿಲುಮುಟ್ಟಿದೆ.

ಕೋವಿಡ್ ಲಸಿಕೆ ವಿರುದ್ಧ ಜನರ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದಂತೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಅವರ ಕುಟುಂಬವು ದೇಶದ ರಾಜಧಾನಿಯಲ್ಲಿದ್ದ ತಮ್ಮ ನಿವಾಸವನ್ನು ಬಿಟ್ಟು ಬೇರೊಂದು ರಹಸ್ಯ ಸ್ಥಳಕ್ಕೆ ಸ್ಥಳಾಂತರಗೊಂಡಿದೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.

ಜಸ್ಟಿನ್ ಟ್ರುಡೊ ಸರ್ಕಾರದ ಕೊರೊನಾ ವೈರಸ್‌ ಮಾರ್ಗಸೂಚಿಗಳ ವಿರುದ್ಧ ಸಣ್ಣ ಪ್ರಮಾಣದ ಹೋರಾಟ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಕೊರೊನಾ ಲಸಿಕೆ ಕಡ್ಡಾಯ ಹಾಗೂ ಇತರ ನಿರ್ಬಂಧಗಳನ್ನು ತೆಗೆದು ಹಾಕುವಂತೆ ಸರ್ಕಾರವನ್ನು ಒತ್ತಾಯಿಸಿ ಸಾವಿರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಈ ಮೊದಲು 'ಫ್ರೀಡಮ್ ಕಾನ್ವಾಯ್' ಎಂಬ ಹೆಸರಲ್ಲಿ ಈ ಪ್ರತಿಭಟನೆಯನ್ನು ಟ್ರಕ್ ಚಾಲಕರು ಹಮ್ಮಿಕೊಂಡಿದ್ದರು. ಈಗ ಅದೇ ಪ್ರತಿಭಟನೆ ದೊಡ್ಡದಾಗಿದೆ. ಈಗ ನಡೆಯುತ್ತಿರುವ ದೊಡ್ಡ ಪ್ರತಿಭಟನೆಗೆ ಭಾರಿ ಪ್ರಮಾಣದ ಜನರು ಸೇರುತ್ತಿದ್ದಾರೆ ಎಂದು ಕೆನಡಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ.

ಪ್ರತಿಭಟನಾಕಾರು ಮಾತ್ರವಲ್ಲದೇ, ಅವರ ಕುಟುಂಬವೂ ಪ್ರತಿಭಟನೆಯಲ್ಲಿ ಭಾಗಿಯಾಗಿದೆ. ವೃದ್ಧರು ಮತ್ತು ಅಂಗವಿಕಲರು ಕೂಡ ಪ್ರತಿಭಟನೆಯಲ್ಲಿ ಇದ್ದಾರೆ ಎಂದು ದ ಗ್ಲೋಬ್ ಅಂಡ್ ಮೇಲ್ ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

ಇದನ್ನೂ ಓದಿ: ಮಹಾತ್ಮನ ಸ್ಮರಣೆ : ತಮ್ಮ ಸಾವನ್ನು ಊಹಿಸಿದ್ದರಾ ಗಾಂಧೀಜಿ?.. ಕೊನೇ ದಿನದ ಸನ್ನಿವೇಶಗಳು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.