ನೈಟರಾಯ್(ಬ್ರೆಜಿಲ್): ಗುರುವಾರ ನೈಟರಾಯ್ ನಗರದಲ್ಲಿ ನೂರಾರು ಜನರು ಬ್ರೆಜಿಲ್ ನ ವರ್ಣಭೇದ ನೀತಿ ಮತ್ತು ಪೊಲೀಸ್ ಹಿಂಸಾಚಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ತಮ್ಮ ಮುಷ್ಠಿಯನ್ನು ಮೇಲಕ್ಕೆತ್ತಿ "ಬ್ಲ್ಯಾಕ್ ಲೈವ್ಸ್ ಮ್ಯಾಟರ್" ಎಂಬ ಬ್ಯಾನರ್‌ಗಳನ್ನು ಹಿಡಿದು ವರ್ಣಭೇದ ನೀತಿಯನ್ನು ಕೊನೆಗೊಳಿಸಬೇಕೆಂದು ಮತ್ತು ಅಧ್ಯಕ್ಷ ಜೈರ್ ಬೋಲ್ಸನಾರೊ ನೀತಿಗಳಿಗೆ ವಿರುದ್ಧವಾಗಿ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಪೊಲೀಸರಿಂದ ಕೊಲ್ಲಲ್ಪಟ್ಟರು ಎನ್ನಲಾಗಿರುವ ಕೆಲವು ಯುವಕ ಯುವತಿಯರ ತಾಯಂದಿರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅವರು ಪ್ರದರ್ಶನ ವೇಳೆ ತಮ್ಮ ಮಕ್ಕಳ ಫೋಟೋ ಇರುವ ಬ್ಯಾನರ್‌ಗಳನ್ನು ಹೊತ್ತು ಸಾಗಿದರು. ಮಾದಕವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದನೆಂದು ಆರೋಪಿಸಿ ಮಾರ್ಕೋಸ್‌ನನ್ನು ಪೊಲೀಸರು 2018 ರಲ್ಲಿ ಗಲ್ಲಿಗೇರಿಸಿದರು. ಹೀಗಾಗಿ ನಾನು ನನ್ನ ಮಗನ ಸಾವಿಗೆ ನ್ಯಾಯ ದೊರಕಬೇಕೆಂದು ಹೋರಾಡುತ್ತಿದ್ದೇನೆ ಎಂದು ಮಾರ್ಕೋಸ್ ಡಿ ಸೂಸಾ ಅವರ ತಾಯಿ ಬ್ರೂನಾ ಮೊಝೀ ಹೇಳಿದ್ದಾರೆ.