ರಿಯೊ ಡಿ ಜನೈರೊ: ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಪತ್ರಕರ್ತರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರಿಗೆ ‘ನಿಮ್ಮ ಮುಖ ಸಲಿಂಗಕಾಮಿಯಂತೆ ಕಾಣುತ್ತಿದೆ’ ಅಂತಾ ಹೇಳಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ಸುದ್ದಿಗೋಷ್ಠಿಯಲ್ಲಿ ಅಸಮಾಧಾನಗೊಂಡ ಬೋಲ್ಸನಾರೊ, ನನ್ನ ಮಗ ಸೆನಡಾರ್ ಫ್ಲೇವಿಯೊ ಬೋಲ್ಸನಾರೊ ವಿರುದ್ಧ ಪಕ್ಷಪಾತ ಮಾಡಿದ್ದಾರೆ. ಕಿರಿಯ ಬೋಲ್ಸನಾರೊ ರಾಜ್ಯದ ಶಾಸಕರಾಗಿದ್ದಾಗ ಯಾವುದೇ ಕರ್ತವ್ಯವಿಲ್ಲದೆ ನೌಕರರನ್ನು ನೇಮಿಸಿಕೊಂಡಿದ್ದರು ಎಂಬ ಆರೋಪವಿದೆ. ಈ ಬಗ್ಗೆ ರಿಯೊ ಡಿ ಜನೈರೊದಲ್ಲಿನ ಪ್ರಾಸಿಕ್ಯೂಟರ್‌ಗಳು ತನಿಖೆ ನಡೆಸುತ್ತಿದ್ದಾರೆ ಎಂದರು.
ನಿಮ್ಮ ಹೆಂಡತಿಯ ಬ್ಯಾಂಕ್ ಖಾತೆಗೆ ಅನುಮಾನಾಸ್ಪದ ಠೇವಣಿ ಇರುವುದು ಕೇವಲ ಸಾಲವನ್ನು ಮರುಪಾವತಿಸುವುದಕ್ಕೆ ಅಂತಾ ಪುರಾವೆ ಇದೆಯೇ ಎಂದು ಪ್ರರ್ತಕರ್ತರೊಬ್ಬರು ಕೇಳಿದಾಗ, ‘ನಿಮ್ಮ ತಾಯಿಗೆ ನಿಮ್ಮ ತಂದೆ ರಶೀದಿ ನೀಡಿದ್ದಾರಾ ಎಂದು ಕೇಳಿ‘. ಅಥವಾ ನಿಮ್ಮ ಬೂಟುಗಳಿಗೆ ರಶೀದಿ ಇದೆಯೇ?. ‘ ನಿಮ್ಮ ಬಳಿ ಇಲ್ವಲ್ಲ’.. ಇದು ಹಾಗೇ ಎಂದು ಅಧ್ಯಕ್ಷ ಬೋಲ್ಸನಾರೋ ವರದಿಗಾರರ ವಿರುದ್ಧ ಹರಿಹಾಯ್ದರು.
ಬೆಳಗ್ಗೆ ನಡೆದ ಪತ್ರಕರ್ತರೊಂದಿಗಿನ ಸಭೆಯಲ್ಲಿ, ನನ್ನನ್ನು ಜನಾಂಗೀಯ ಮತ್ತು ಪರಿಸರ ವಿರೋಧಿ ಎಂದು ಮಾಧ್ಯಮಗಳು ವರದಿ ಮಾಡಿದ್ದಾವೆ ಎಂದು ಅಧ್ಯಕ್ಷ ಜೈರ್ ಬೋಲ್ಸನಾರೊ ದೂರಿದರು. ವರದಿಗಾರರೊಬ್ಬರಿಗೆ ‘ನಿಮ್ಮ ಮುಖವು ಸಲಿಂಗಕಾಮಿಯಂತೆ ಕಾಣುತ್ತಿದೆ. ಆದರೆ, ನೀವು ಸಲಿಂಗಕಾಮಿ ಅಂತಾ ಹೇಳಲು ನನ್ನ ಬಳಿ ಪುರಾವೆ ಇಲ್ಲ’ವೆಂದು ಎಂದು ಹೇಳಿದರು. ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ.