ETV Bharat / international

ಬ್ರೆಜಿಲ್​ನಲ್ಲಿ ಕೊರೊನಾ ಮರಣ ಮೃದಂಗ: ತಿಂಗಳಲ್ಲಿ ಲಕ್ಷ ಜನ ಸೋಂಕಿಗೆ ಬಲಿ - ಬ್ರೆಜಿಲ್​ ಕೋವಿಡ್ -19 ಲೇಟೆಸ್ಟ್ ನ್ಯೂಸ್

ಇಡೀ ವಿಶ್ವವೇ ಕೋವಿಡ್​ ಸೋಂಕಿನಿಂದ ತತ್ತರಿಸಿದೆ. ಇದಕ್ಕೆ ಬ್ರೆಜಿಲ್ ದೇಶ ಸಹ ಹೊರತಾಗಿಲ್ಲ. ಕಳೆದೊಂದು ತಿಂಗಳಲ್ಲಿ ಒಂದು ಲಕ್ಷ ಸಾವಿನೊಂದಿಗೆ ದೇಶದಲ್ಲಿ ಕೋವಿಡ್​ನಿಂದ ಮೃತಪಟ್ಟವರ ಸಂಖ್ಯೆ 4 ಲಕ್ಷದ ಗಟಿ ದಾಟಿದೆ.

Brazil tops 400,000 virus deaths amid fears of renewed surge
ಬ್ರೆಜಿಲ್​ನಲ್ಲಿ ಕೊರೊನಾ ಮರಣ ಮೃದಂಗ
author img

By

Published : Apr 30, 2021, 7:43 AM IST

ಸಾವೊ ಪಾಲೊ (ಬ್ರೆಜಿಲ್): ಕೊರೊನಾ ಸಾಂಕ್ರಾಮಿಕ ರೋಗದಿಂದ ಬ್ರೆಜಿಲ್​ ತೀವ್ರ ಸಂಕಷ್ಟ ಅನುಭವಿಸುತ್ತಿದೆ. ಕಳೆದ ಒಂದು ತಿಂಗಳಲ್ಲಿ ಸುಮಾರು ಒಂದು ಲಕ್ಷ ಜನ ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 4,00,000 ದ ಗಟಿ ದಾಟಿದೆ.

ಕೋವಿಡ್ ಸೋಂಕಿತರಿಂದ ಕಿಕ್ಕಿರಿದ ಆಸ್ಪತ್ರೆಗಳಲ್ಲಿ ಪ್ರತಿದಿನ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದೇಶದ ಆರೋಗ್ಯ ಸಚಿವಾಲಯವು ತಿಂಗಳ ಆರಂಭದಲ್ಲಿ ಎರಡು ದಿನಗಳಲ್ಲಿ 4,000 ಕ್ಕೂ ಹೆಚ್ಚು ಸಾವುಗಳನ್ನು ದಾಖಲಿಸಿದೆ. ಏಳು ದಿನಗಳ ಸರಾಸರಿ 3,100 ಕ್ಕಿಂತ ಹೆಚ್ಚಾಗಿದೆ. ಬ್ರೆಜಿಲ್​ನ ಒಟ್ಟು ಸಾವಿನ ಸಂಖ್ಯೆ 4,01,186 ಕ್ಕೆ ಏರಿದೆ.

ಡಿಸೆಂಬರ್‌ನಲ್ಲಿ ಇಲ್ಲಿನ ಮನೌಸ್‌ನಲ್ಲಿ ಮತ್ತು ನಗರದ ಸುತ್ತಮುತ್ತ ಹೊರಹೊಮ್ಮಿದ ರೂಪಾಂತರ ಕೊರೊನಾ ವೈರಸ್‌ನ "ಬ್ರೆಜಿಲ್ ರೂಪಾಂತರ"ದ ಇತ್ತೀಚಿನ ಉಲ್ಬಣವನ್ನು ತಜ್ಞರು ದೂಷಿಸಿದ್ದಾರೆ.

ಇದನ್ನೂ ಓದಿ: ಇಸ್ರೇಲ್​ನಲ್ಲಿ ಕಾಲ್ತುಳಿತಕ್ಕೆ 28 ಮಂದಿ ಬಲಿ; 50 ಜನರಿಗೆ ಗಾಯ

ಬ್ರೆಜಿಲ್​ನಲ್ಲಿ ಸುಮಾರು 28 ಮಿಲಿಯನ್ ಜನರು ಮೊದಲ ಕೋವಿಡ್ ಲಸಿಕೆ ಪಡೆದಿದ್ದಾರೆ. ಇದು ದೇಶದ ಒಟ್ಟು ಜನಸಂಖ್ಯೆಯ ಶೇ.13ರಷ್ಟಾಗುತ್ತದೆ. ಸುಮಾರು 12.7 ಮಿಲಿಯನ್ ಜನರು ಸೆಕೆಂಡ್ ಡೋಸ್​ ಲಸಿಕೆ ಪಡೆದಿದ್ದಾರೆ. ಆದರೆ ಬ್ರೆಜಿಲ್‌ನ 27 ರಾಜ್ಯಗಳಲ್ಲಿ 14 ನಗರಗಳು ಲಸಿಕೆ ಕೊರತೆಯಿಂದಾಗಿ ಎರಡನೇ ಡೋಸ್​ ವ್ಯಾಕ್ಸಿನೇಷನ್ ಸ್ಥಗಿತಗೊಳಿಸಬೇಕಾಯಿತು ಎಂದು ಇಲ್ಲಿನ ಟಿವಿ ಗ್ಲೋಬೊ ತಿಳಿಸಿದೆ.

ರಾಷ್ಟ್ರಾಧ್ಯಕ್ಷ ಜೈರ್ ಬೋಲ್ಸನಾರೊ ಆಡಳಿತವು ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ನಿರ್ಲಕ್ಷ್ಯ ತೋರಿದೆಯೇ? ಎಂಬ ಬಗ್ಗೆ ಸೆನೆಟ್ ಮಂಗಳವಾರ ತನಿಖೆ ಆರಂಭಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.