ಬ್ರೆಸಿಲಿಯಾ(ಬ್ರೆಜಿಲ್): ಕೋವಿಡ್ ಮೃತರ ಸಂಖ್ಯೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ ನಿನ್ನೆ ಒಂದೇ ದಿನ 1,386 ಮಂದಿ ಬಲಿಯಾಗಿದ್ದಾರೆ. ಈವರೆಗೆ ದೇಶದಲ್ಲಿ 2,54,221 ಜನರು ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ 61,602 ಕೇಸ್ಗಳು ಪತ್ತೆಯಾಗಿದ್ದು, ಒಟ್ಟು 1,05,17,232 ಮಂದಿಗೆ ವೈರಸ್ ಅಂಟಿದಂತಾಗಿದೆ. ಬ್ರೆಜಿಲ್ನಲ್ಲಿ 6.4 ಮಿಲಿಯನ್ ಜನರಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡಲಾಗಿದ್ದು, 1.8 ಮಿಲಿಯನ್ ಜನರು ಎರಡೂ ಡೋಸ್ಗಳನ್ನ ಪಡೆದಿದ್ದಾರೆ.
ಇದನ್ನೂ ಓದಿ: ಇಂದು ಅಂತಾರಾಷ್ಟ್ರೀಯ ಅಪರೂಪದ ರೋಗ ದಿನ: ಈವರೆಗೆ ಎಷ್ಟೆಲ್ಲಾ ಕಾಯಿಲೆಗಳು ದೃಢಪಟ್ಟಿವೆ?
ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 2,92,02,824 ಇದ್ದು, ಮೃತರ ಸಂಖ್ಯೆ 5,24,669ಕ್ಕೆ ಏರಿಕೆಯಾಗಿದೆ.
ಒಟ್ಟಾರೆ ಪ್ರಪಂಚದಾದ್ಯಂತ ಬರೋಬ್ಬರಿ 11,43,75,487 ಜನರಿಗೆ ಮಹಾಮಾರಿ ಕೊರೊನಾ ತಗುಲಿದ್ದು, 25,37,537 ಸೋಂಕಿತರು ಮೃತಪಟ್ಟಿದ್ದಾರೆ. 8,99,27,900 ಮಂದಿ ಗುಣಮುಖರಾಗಿದ್ದಾರೆ.