ETV Bharat / international

ಬ್ರೆಜಿಲ್​ನಲ್ಲಿ ಭೂಕುಸಿತ, ಪ್ರವಾಹ: 117 ಮಂದಿ ದುರ್ಮರಣ - ಬ್ರೆಜಿಲ್​ನಲ್ಲಿ ಪ್ರವಾಹದಿಂದ ನೂರಾರು ಮಂದಿ ಸಾವು

ಬ್ರೆಜಿಲ್​ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ಸುಮಾರು 700ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದು ಸ್ಥಳೀಯ ಶಾಲೆಗಳು, ತಾತ್ಕಾಲಿಕ ಶಿಬಿರಗಳಲ್ಲಿ ವಸತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

Brazil landslide and flood: 117 died
ಬ್ರೆಜಿಲ್​ನಲ್ಲಿ ಭೂಕುಸಿತ, ಪ್ರವಾಹ: 117 ಮಂದಿ ದುರ್ಮರಣ
author img

By

Published : Feb 18, 2022, 8:11 AM IST

ಬ್ರೆಸಿಲಿಯಾ(ಬ್ರೆಜಿಲ್): ಶತಮಾನದ ಮಳೆಗೆ ದಕ್ಷಿಣ ಅಮೆರಿಕ ಖಂಡದಲ್ಲಿರುವ ದೇಶ ಬ್ರೆಜಿಲ್ ಕಂಗೆಟ್ಟಿದೆ. ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತ ಸುಮಾರು 117 ಮಂದಿಯನ್ನು ಈಗಾಗಲೇ ಬಲಿ ತೆಗೆದುಕೊಂಡಿದೆ. ಪೆಟ್ರೋಪೋಲಿಸ್ ನಗರ ವರುಣಾರ್ಭಟಕ್ಕೆ ತತ್ತರಿಸಿದೆ. ಇಲ್ಲಿ ಅಂದಾಜಿಸಲಾಗಷ್ಟು ಹಾನಿ ಸಂಭವಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ರಿಯೊ ಡಿ ಜನೈರೊ ನಗರದ ಉತ್ತರಕ್ಕಿರುವ ಪೆಟ್ರೋಪೊಲಿಸ್‌ನಲ್ಲಿ ಕನಿಷ್ಠ 60 ಮನೆಗಳು ನಾಶಗೊಂಡಿವೆ. ಇನ್ನೂ ಸಾಕಷ್ಟು ಮಂದಿ ಅವಶೇಷಗಳ ಅಡಿಯಲ್ಲೇ ಸಿಲುಕಿರುವ ಸಾಧ್ಯತೆ ಇದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ನಾಗರಿಕ ರಕ್ಷಣಾ ಸೇವೆಯ ಸಿಬ್ಬಂದಿ ಜನರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ರಷ್ಯಾದ ನ್ಯೂಸ್​ ಏಜೆನ್ಸಿ ವರದಿಯಲ್ಲಿ ಉಲ್ಲೇಖಿಸಿದೆ.

ದೇಶದ ಹಲವು ಭಾಗಗಳಲ್ಲಿ ಕೆಲವು ದಿನಗಳಿಂದ ಮಳೆ ಸುರಿಯುತ್ತಿದೆ. ಫೆಬ್ರವರಿ 17ರ ಮಧ್ಯಾಹ್ನ ಮಳೆ ತೀವ್ರಗೊಂಡಿದೆ. ಪೆಟ್ರೊಪೊಲಿಸ್ ನಗರವೊಂದರಲ್ಲೇ 6 ಸೆಂಟಿಮೀಟರ್ ಮಳೆ ಸುರಿದಿದೆ. ಇದು ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಗಿದೆ.

ಸುಮಾರು 700ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದು ಸ್ಥಳೀಯ ಶಾಲೆಗಳು ಮತ್ತು ಸರ್ಕಾರ ಸ್ಥಾಪಿಸಿರುವ ತಾತ್ಕಾಲಿಕ ವಸತಿ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇದು ಥೇಟ್ ಯುದ್ಧದ ಹಾನಿಯಿಂದಾದ ಪ್ರದೇಶದಂತೆ ಕಾಣುತ್ತಿದೆ ಎಂದು ರಿಯೊ ಡಿ ಜನೈರೊ ರಾಜ್ಯಪಾಲ ಕ್ಲಾಡಿಯೊ ಕ್ಯಾಸ್ಟ್ರೊ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಉಕ್ರೇನ್​ನಲ್ಲಿ ಆಕ್ರಮಣದ ಉದ್ವಿಗ್ನತೆ : AK-47 ಹಿಡಿದು ನನ್ನ ನೆಲ ರಕ್ಷಣೆಗೆ ನಾನು ಸಿದ್ಧ ಎಂದ 79ರ ಅಜ್ಜಿ !

ಈವರೆಗೆ ದುರಂತದಲ್ಲಿ ಮೃತಪಟ್ಟವರ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ಸದ್ಯಕ್ಕೆ 117 ಮಂದಿಯ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದೇ ವೇಳೆ, ನೂರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.