ಸಾವೊ ಪಾಲೊ (ಬ್ರೆಜಿಲ್): ಸಾವೊ ಪಾಲೊದ ಸಾಕರ್ ಕ್ರೀಡಾಂಗಣದಲ್ಲಿ ಸ್ಥಾಪಿಸಲಾದ ಮನರಂಜನಾ ಡ್ರೈವ್-ಇನ್ ಸಂಸ್ಕೃತಿ ತನ್ನ ವ್ಯಾಪ್ತಿಯನ್ನ ಹೆಚ್ಚಿಸಿಕೊಳ್ಳುತ್ತಿದೆ. ಕೋವಿಡ್-19 ಬಿಕ್ಕಟ್ಟಿನ ನಡುವೆಯೂ ಬ್ರೆಜಿಲಿಯನ್ನರಲ್ಲಿ ಮನೋಸ್ಥೈರ್ಯವನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ.
ಈ ಕಾರ್ಯಕ್ರಮದಲ್ಲಿ ಜನ ಕಾರಿನಲ್ಲಿ ಕುಳಿಕೊಂಡೇ, ಬೃಹತ್ ಪರದೆಯ ಮೇಲೆ ಚಲನಚಿತ್ರ ವೀಕ್ಷಿಸಬಹುದಾಗಿದೆ.
ಪಾಲ್ಮೇರಾಸ್‌ನ ಸಾಕರ್ ಕ್ಲಬ್ ಪಿಚ್ನಲ್ಲಿ ಉತ್ತಮ ಧ್ವನಿ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ಇದು 300 ಕಾರುಗಳನ್ನು ಏಕಕಾಲದಲ್ಲಿ ನಿಲ್ಲಿಸುವ ಸಾಮರ್ಥ್ಯ ಹೊಂದಿದೆ.
ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲೂ ಅದರ ಚಟುವಟಿಕೆಗಳನ್ನು ನಿಲ್ಲಿಸದೇ, ಆರ್ಥಿಕತೆಗೆ ಸಹಾಯ ಮಾಡುವಲ್ಲಿ ಮನರಂಜನಾ ಉದ್ಯಮವು ಕೊಡುಗೆ ನೀಡುತ್ತಿದೆ.
"ಯಾವುದೇ ಸಮಯದಲ್ಲಿ ಏನು ಬೇಕಾದರೂ ಸಂಭವಿಸಬಹುದು ಮತ್ತು ನಾವು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು ಜೊತೆಗೆ ಹೊಂದಿಕೊಂಡು ಹೋಗಬೇಕು ಎಂದು ಕೊರೊನಾ ವೈರಸ್ ತಿಳಿಸಿದೆ" ಎಂದು ನಿವಾಸಿಯೊಬ್ಬರು ಹೇಳಿದ್ದಾರೆ.
ಕಾರ್ಯಕ್ರಮವು ಕ್ಲಾಸಿಕ್ ಚಲನಚಿತ್ರಗಳು, ಪ್ರದರ್ಶನಗಳು, ಸ್ಟ್ಯಾಂಡ್ - ಅಪ್ ಕಾಮಿಡಿ ಮತ್ತು ಮಕ್ಕಳ ರಂಗಮಂದಿರಗಳ ಪ್ರದರ್ಶನವನ್ನು ಒಳಗೊಂಡಿದೆ.
ಈ ಸ್ಥಳವು ಜೂನ್ 24ರಂದು ತೆರೆಯಲ್ಪಟ್ಟಿದ್ದು, ಜುಲೈ 19ರವರೆಗೆ ತನ್ನ ಕಾರ್ಯವನ್ನ ಮುಂದುವರೆಸಲಿದೆ. ಗರಿಷ್ಠ ನಾಲ್ಕು ಜನರಿರುವ ಒಂದು ಕಾರಿನ ಟಿಕೆಟ್ ಬೆಲೆ 23 ರಿಂದ 100 ಡಾಲರ್‌ಗಳವರೆಗೆ ಇರಲಿದೆ.