ETV Bharat / international

ಅಮೆಜಾನ್ ಅರಣ್ಯದಲ್ಲಿ ಬೊಲಿವಿಯಾ ಸೇನಾ ವಿಮಾನ ಪತನ, 6 ಸಾವು - air force plane in bolivia

ಅಮೆಜಾನ್ ಅರಣ್ಯದಲ್ಲಿ ಬೊಲಿವಿಯಾ ದೇಶದ ವಾಯುಪಡೆ ವಿಮಾನ ಪತನಗೊಂಡಿದೆ.

Bolivia: 6 killed in air force plane crash in Amazon jungle
ಅಮೆಜಾನ್ ಅರಣ್ಯದಲ್ಲಿ ಬೊಲಿವಿಯಾ ಸೇನಾ ವಿಮಾನ ಪತನ, ಆರು ಮಂದಿ ದುರ್ಮರಣ
author img

By

Published : Oct 10, 2021, 8:01 AM IST

ಲಾ ಪಾಝ್(ಬೊಲಿವಿಯಾ): ವಾಯುಪಡೆಯ ವಿಮಾನ ಪತನವಾಗಿ ಸುಮಾರು 6 ಮಂದಿ ಸಾವನ್ನಪ್ಪಿರುವ ಘಟನೆ ವಾಯವ್ಯ ಬೊಲಿವಿಯಾದ ಅಮೆಜಾನ್ ಕಾಡಿನಲ್ಲಿ ಶನಿವಾರ ಸಂಭವಿಸಿದೆ.

ಬೆನಿ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ವಿಮಾನದಲ್ಲಿ ಇಬ್ಬರು ಮಿಲಿಟರಿ ಪೈಲೆಟ್​ಗಳು ಹಾಗೂ ನಾಲ್ವರು ಪ್ರಯಾಣಿಕರಿದ್ದರು ಎಂದು ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಮೆಜಾನ್​ನ ದಟ್ಟ ಅರಣ್ಯದಲ್ಲಿ ವಿಮಾನ ಬಿದ್ದ ನಂತರ ಬೆಂಕಿ ಹೊತ್ತಿಕೊಂಡಿದೆ. ಈ ಸಂದರ್ಭದಲ್ಲಿ ಸಮೀಪದಲ್ಲಿದ್ದ ಅಗುವಾ ಡಲ್ಸೆ ಸಮುದಾಯದ ಜನರು ಬೆಂಕಿ ನಂದಿಸಿದ್ದಾರೆ. ದುರಂತದ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಮಾದಕ ವ್ಯಸನಿಗಳಲ್ಲಿ ಕೆಲವರು ಸತ್ರೆ ಏನೂ ಆಗಲ್ಲ.. ಇತರರು ಗುಣಮುಖರಾಗ್ತಾರೆ: ತಾಲಿಬಾನ್ ಖಡಕ್​​ ಎಚ್ಚರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.