ದೋಹಾ (ಕತಾರ್): ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ ಆಸ್ಟಿನ್ ಕತಾರ್ನ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿಯನ್ನು ದೋಹಾದಲ್ಲಿ ಭೇಟಿಯಾಗಿದ್ದಾರೆ. ಇನ್ನು "ಅಮೆರಿಕನ್ನರು, ಅಫ್ಘನ್ನರು ಸೇರಿ ಇತರೆ ದೇಶದ ವಲಸಿಗರನ್ನು ಸುರಕ್ಷಿತವಾಗಿ ಕರೆತರಲು ಕತಾರ್ ನೀಡಿದ ಸಹಕಾರಕ್ಕೆ ನಮ್ಮ ಕೃತಜ್ಞತೆ" ಎಂದು ಬ್ಲಿಂಕನ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಅಮೆರಿಕದ ನಾಗರಿಕರು ಮತ್ತು ಆಫ್ಘನ್ನರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲು ಅತ್ಯುತ್ತಮ ಬೆಂಬಲ ನೀಡಿದ್ದಕ್ಕಾಗಿ ಸರ್ಕಾರಿ ಅಧಿಕಾರಿಗಳಿಗೆ ವೈಯಕ್ತಿಕವಾಗಿ ಧನ್ಯವಾದ ಸಲ್ಲಿಸಲು ಬ್ಲಿಂಕನ್ ಸೆಪ್ಟೆಂಬರ್ 6 ರಿಂದ 8ರವರೆಗೆ ಕತಾರ್‌ಗೆ ಪ್ರಯಾಣ ಬೆಳೆಸಿದ್ದಾರೆ.
-
Honored to meet with Qatari Amir Al Thani today in Doha with @SecDef Austin. I expressed our gratitude for Qatar’s remarkable support of the safe transit of hundreds of U.S. citizens and tens of thousands of Afghans and other evacuees from Afghanistan.
— Secretary Antony Blinken (@SecBlinken) September 6, 2021 " class="align-text-top noRightClick twitterSection" data="
">Honored to meet with Qatari Amir Al Thani today in Doha with @SecDef Austin. I expressed our gratitude for Qatar’s remarkable support of the safe transit of hundreds of U.S. citizens and tens of thousands of Afghans and other evacuees from Afghanistan.
— Secretary Antony Blinken (@SecBlinken) September 6, 2021Honored to meet with Qatari Amir Al Thani today in Doha with @SecDef Austin. I expressed our gratitude for Qatar’s remarkable support of the safe transit of hundreds of U.S. citizens and tens of thousands of Afghans and other evacuees from Afghanistan.
— Secretary Antony Blinken (@SecBlinken) September 6, 2021
ಉಪ ಪ್ರಧಾನಮಂತ್ರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್ ಥಾನಿ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದ್ದು, ಕತಾರ್ನ ಉದಾರ ಬೆಂಬಲಕ್ಕಾಗಿ ಧನ್ಯವಾದ ಸಲ್ಲಿಸಲಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಈ ಹಿಂದೆ ತಿಳಿಸಿದ್ದರು.
ಅಫ್ಘಾನಿಸ್ತಾನದಿಂದ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯಾಚರಣೆಗೆ ಸಹಕರಿಸಿದ ದೇಶಗಳಲ್ಲಿ ಭಾರತವು ಸೇರಿತ್ತು. ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಹಲವಾರು ದೇಶಗಳಿಗೆ ಯುನೈಟೆಡ್ ಸ್ಟೇಟ್ಸ್ ಸರ್ಕಾರ ಧನ್ಯವಾದ ಸಲ್ಲಿಸಿದೆ.