ವಾಷಿಂಗ್ಟನ್: ಅಮೆರಿಕಾಗೆ ವಲಸೆ ಬಂದವರು ಆರೋಗ್ಯ ವಿಮೆ ಪಡೆಯಬಹುದೆಂದು ಅಥವಾ ಆರೋಗ್ಯ ರಕ್ಷಣೆಗಾಗಿ ಪಾವತಿಸುವಷ್ಟು ಸದೃಢರಾಗಿದ್ದಾರೆಂದು ಸಾಬೀತುಪಡಿಸದ ಹೊರತು ಅವರಿಗೆ ಪ್ರವೇಶವಿಲ್ಲ ಎಂದು ಘೋಷಿಸಿದ್ದ ಮಾಜಿ ಅಧ್ಯಕ್ಷ ಟ್ರಂಪ್ ಆದೇಶವನ್ನು ಜೋ ಬೈಡನ್ ರದ್ದು ಮಾಡಿದ್ದಾರೆ.
2019ರಲ್ಲಿ ಡೊನಾಲ್ಡ್ ಟ್ರಂಪ್ ವಲಸಿಗರ ಮೇಲೆ ಕಠಿಣ ನಿಯಮ ಜಾರಿ ಮಾಡುವ ವೇಳೆ ಈ ಘೋಷಣೆ ಮಾಡಿದ್ದರು. ಈ ಘೋಷಣೆ ಯುಎಸ್ನ ಹಿತಾಸಕ್ತಿಯ ಭಾಗವಾಗಿಲ್ಲ ಎಂದು ಬೈಡನ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನನ್ನ ಆಡಳಿತವು ಗುಣಮಟ್ಟದ, ಕೈಗೆಟುಕುವ ಆರೋಗ್ಯ ಸೇವೆಗೆ ಪ್ರವೇಶವನ್ನು ವಿಸ್ತರಿಸಲು ಬದ್ಧವಾಗಿದೆ. ಆದಾಗ್ಯೂ ಈ ದೇಶಕ್ಕೆ ಕಾನೂನುಬದ್ಧವಾಗಿ ವಲಸೆ ಬರಲು ಬಯಸುವ ಆದರೆ ಗಮನಾರ್ಹ ಹಣಕಾಸಿನ ಮಾರ್ಗಗಳಿಲ್ಲದ ಅಥವಾ ಆರೋಗ್ಯ ವಿಮಾ ರಕ್ಷಣೆಯನ್ನು ಖರೀದಿಸದ ನಾಗರಿಕರ ಪ್ರವೇಶವನ್ನು ತಡೆಯದೆ ಅವರ ಉದ್ದೇಶ ಈಡೇರಿಸುವುದಾಗಿದೆ ಎಂದಿದ್ದಾರೆ.
ಇದಕ್ಕೂ ಮುನ್ನ, ಬೈಡನ್ ಸರ್ಕಾರವು ಕಳೆದ ವರ್ಷ ಟ್ರಂಪ್ ಘೋಷಿಸಿದ್ದ ‘ನ್ಯಾಷನಲ್ ಗಾರ್ಡನ್ ಆಫ್ ಅಮೆರಿಕನ್ ಹೀರೋಸ್‘ ಪ್ರತಿಮೆಗಳ ಸಾಲು ನಿರ್ಮಿಸುವ ಆದೇಶವನ್ನೂ ರದ್ದುಪಡಿಸಿತ್ತು.