ಸಿನ್ಸಿನಾಟಿ: ಸಿನ್ಸಿನಾಟಿಗೆ ಭೇಟಿ ನೀಡಿರುವ ಯುಎಸ್ ಅಧ್ಯಕ್ಷ ಜೋ ಬೈಡನ್ ತಮ್ಮ ಆರ್ಥಿಕ ಕಾರ್ಯಸೂಚಿಗೆ ಬೆಂಬಲವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದಾರೆ. ಇನ್ನು ಈ ಪ್ರವಾಸದ ಸಂದರ್ಭದಲ್ಲಿ ಸಿಎನ್ಎನ್ ಟೌನ್ ಹಾಲ್ ಮುಂಭಾಗದ ಯೂನಿಯನ್ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಮೂಲಸೌಕರ್ಯ ಪ್ರಸ್ತಾಪವು ಸ್ಪಷ್ಟವಾಗಿಲ್ಲವಾದ್ದರಿಂದ ಬುಧವಾರ ನಡೆದ ಪ್ರಮುಖ ಕೀ ಟೆಸ್ಟ್ ವೋಟಿಂಗ್ನಲ್ಲಿ ಸೆನೆಟ್ ರಿಪಬ್ಲಿಕನ್ 1 ಟ್ರಿಲಿಯನ್ ಯುಎಸ್ಡಿ ನೀಲನಕ್ಷೆಯನ್ನು ತಿರಸ್ಕರಿಸಿತು. ಈ ಬಳಿಕ ಅಧ್ಯಕ್ಷ ಜೋ ಬೈಡನ್ ಪ್ರವಾಸ ಕೈಗೊಂಡಿದ್ದು, ಆರ್ಥಿಕ ಕಾರ್ಯಸೂಚಿಗೆ ಬೆಂಬಲವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದಾರೆ.
ಈ ವೇಳೆ ಮೂಲಸೌಕರ್ಯಗಳ ಬಗ್ಗೆ ಒಪ್ಪಂದ ಮಾಡಿಕೊಳ್ಳುತ್ತೀರಾ ಎಂದು ಕೇಳಿದಾಗ "ಹೌದು, ನಾವು ಮಾಡುತ್ತೇವೆ" ಎಂದು ಬೈಡನ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಬೈಡನ್ ಅವರ ಅಧ್ಯಕ್ಷತೆಯ ಮೊದಲ ಆರು ತಿಂಗಳಲ್ಲಿ ದೇಶವು ಕಂಡ ಆರ್ಥಿಕ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಸುಮಾರು 4 ಟ್ರಿಲಿಯನ್ ಯುಎಸ್ಡಿ ಪ್ಯಾಕೇಜ್ ಅಗತ್ಯವಿದೆ.
ಮೊದಲಿಗೆ, ಬೈಡೆನ್ ಸಿನ್ಸಿನಾಟಿಯ ಪಶ್ಚಿಮ ಭಾಗದಲ್ಲಿರುವ ಐಬಿಡಬ್ಲ್ಯೂ / ಎನ್‌ಇಸಿಎ ವಿದ್ಯುತ್ ತರಬೇತಿ ಕೇಂದ್ರದಲ್ಲಿ ಪ್ರವಾಸ ಕೈಗೊಂಡರು. ಐದು ವರ್ಷಗಳ ಅಪ್ರೆಂಟಿಸ್‌ಶಿಪ್‌ಗಳ ಮೂಲಕ ಕೆಲಸ ಮಾಡುವ ಪ್ರಶಿಕ್ಷಣಾರ್ಥಿಗಳ ಬಗ್ಗೆ ಒಂದು ಸೂಕ್ಷ್ಮ ನೋಟವನ್ನು ಪಡೆಯಲು ಅವರಿಗೆ ಈ ಮೂಲಕ ಅವಕಾಶ ಸಿಕ್ಕಿತು.