ETV Bharat / international

ಮುಂದಿನ ವರ್ಷದ ದ್ವಿತಿಯಾರ್ಧದೊಳಗೆ ಐ ಪ್ಯಾಡ್ ಏರ್ ಒಎಲ್ಇಡಿ ಡಿಸ್​​ಪ್ಲೆಗಳಾಗಿ ಪರಿವರ್ತನೆ: ಕುವೊ - ಒಎಲ್ಇಡಿ ಡಿಸ್​ಪ್ಲೇ

ಐ ಪ್ಯಾಡ್ ಏರ್ ಅನ್ನು ಒಎಲ್ಇಡಿ (ಆರ್ಗ್ಯಾನಿಕ್ ಲೈಟ್ ಎಮಿಟಿಂಗ್ ಡಯೋಡ್​) ಡಿಸ್​​ಪ್ಲೆಗಳಾಗಿ ಮುಂದಿನ ವರ್ಷದ ದ್ವಿತಿಯಾರ್ಧದೊಳಗೆ ಪರಿವರ್ತನೆ ಮಾಡಲಾಗುತ್ತದೆ ಎಂದು ಆ್ಯಪಲ್ ವಿಶ್ಲೇಷಕ ಮಿಂಗ್-ಚಿ ಕುವೊ ಹೇಳಿದ್ದಾರೆ.

Apple may launch iPad Air with OLED display in 2022
ಒಎಲ್ಇಡಿ ಡಿಸ್​ಪ್ಲೆ
author img

By

Published : Mar 20, 2021, 1:42 PM IST

ಸ್ಯಾನ್ ಫ್ರಾನ್ಸಿಸ್ಕೋ: ಐಫೋನ್ ಇತ್ತೀಚಿಗೆ ತನ್ನ ಉತ್ಪನ್ನಗಳಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ವರ್ಷಗಳ ಹಿಂದೆ ಬಿಡುಗಡೆ ಮಾಡಲಾಗಿದ್ದ ಐ ಪ್ಯಾಡ್ ಏರ್ ಅನ್ನು ಒಎಲ್ಇಡಿ (ಆರ್ಗ್ಯಾನಿಕ್ ಲೈಟ್ ಎಮಿಟಿಂಗ್ ಡಯೋಡ್​) ಡಿಸ್​​ಪ್ಲೆ ಗಳಾಗಿ ಮುಂದಿನ ವರ್ಷದ ದ್ವಿತಿಯಾರ್ಧದೊಳಗೆ ಪರಿವರ್ತನೆ ಮಾಡಲಾಗುತ್ತದೆ ಎಂದು ಆ್ಯಪಲ್ ವಿಶ್ಲೇಷಕ ಮಿಂಗ್-ಚಿ ಕುವೊ ಹೇಳಿದ್ದಾರೆ.

ಆ್ಯಪಲ್ ಐಪಾಡ್​ನಲ್ಲಿ ಈಗಾಗಲೇ ಮಿನಿ- ಎಲ್​ಇಡಿ ಡಿಸ್​ಪ್ಲೆ ಇದ್ದು, 2022ರಲ್ಲಿ ಈ ಡಿಸ್​​ಪ್ಲೇಯನ್ನು ಒಎಲ್ಇಡಿ ಆಗಿ ಬದಲಾವಣೆ ಮಾಡಿದಾಗಲೂ ಕೂಡಾ ಮಿನಿ- ಎಲ್​ಇಡಿ ಡಿಸ್​ಪ್ಲೆ ತನ್ನ ಟ್ಯಾಬ್ಲೆಟ್​ಗಳಿಗೆ ಮಾತ್ರವೇ ಮೀಸಲಾಗಿದ್ದು, ಎಕ್ಸ್​ಕ್ಲೂಸಿವ್ ಆಗಿರಲಿದೆ ಎಂಬ ನಂಬಿಕೆಯಿದೆ ಎಂದು ಮ್ಯಾಕ್​​​ ರೂಮರ್ಸ್​ ಹೇಳಿಕೆಯನ್ನು ಮಿಂಗ್-ಚಿ ಕುವೊ ಉಲ್ಲೇಖಿಸಿದ್ದಾರೆ.

ಆ್ಯಪಲ್ ಉತ್ಪನ್ನಗಳಲ್ಲಿ ಪ್ರಸ್ತುತ ಆಪಲ್ ವಾಚ್ ಮತ್ತು ಐಫೋನ್‌ನಲ್ಲಿ ಒಎಲ್ಇಡಿ ಡಿಸ್​ಪ್ಲೆಗಳನ್ನು ಬಳಸುತ್ತಿದ್ದರೆ, ಮ್ಯಾಕ್ಸ್ ಮತ್ತು ಐಪ್ಯಾಡ್​ಗಳು ಇನ್ನೂ ಹಳೆಯ ಎಲ್‌ಸಿಡಿ ತಂತ್ರಜ್ಞಾನವನ್ನೇ ಬಳಸಿಕೊಳ್ಳುತ್ತಿದೆ.

ಒಎಲ್ಇಡಿ ಡಿಸ್​ಪ್ಲೆಗಳನ್ನು ಹೊಂದಿರುವ ಕೆಲವು ಸಾಧನಗಳಲ್ಲಿ 12.9 ಇಂಚಿನ ಐಪ್ಯಾಡ್ ಪ್ರೊ ಮತ್ತು 16-ಇಂಚಿನ ಮ್ಯಾಕ್​ ಬುಕ್ ಪ್ರೊಮ ಕೂಡಾ ಸೇರಿವೆ. ಆಪಲ್ ಐಪ್ಯಾಡ್ ಮಿನಿ ಪ್ರೊ ಈ ವರ್ಷದ ದ್ವಿತೀಯಾರ್ಧದಲ್ಲಿ ಮಾರುಕಟ್ಟೆಗೆ ಬರಬಹುದು ಎಂದು ವರದಿಗಳು ತಿಳಿಸಿವೆ.

ಐಪ್ಯಾಡ್ ಮಿನಿ ಪ್ರೊ 8.7 ಇಂಚಿನ ಡಿಸ್​ಪ್ಲೆಯನ್ನು ಹೊಂದಿದೆ ಎಂದು ವರದಿಯಾಗಿದೆ ಮತ್ತು ಇದರ ಅಗಲವು 2019ರಲ್ಲಿ ಬಿಡುಗಡೆಯಾದ ಐಪ್ಯಾಡ್ ಮಿನಿ ಗಿಂತ ಹೆಚ್ಚಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:'ಭಾರತೀಯ ಕಂಪನಿಯಲ್ಲಿ ಅನಿವಾಸಿ ಭಾರತೀಯರು ಹೂಡಿಕೆ ದೇಶೀಯ ಇನ್ಸೆಸ್ಟ್​ ಅಲ್ಲ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.