ಹೈದರಾಬಾದ್: ಕೋವಿಡ್ ಸೋಂಕಿತ ತಾಯಿ ಹಾಗೂ ಸೋಂಕಿನ ವಿರುದ್ಧ ರಕ್ಷಣೆಗೆ ಲಸಿಕೆ ಪಡೆದಿರುವ ತಾಯಿಯ ಎದೆ ಹಾಲಿನಲ್ಲಿ ಸಕ್ರಿಯ SARS-CoV-2 ವಿರುದ್ಧದ ಪ್ರತಿಕಾಯಗಳು ಇವೆ ಎಂದು ಅಧ್ಯಯನವೊಂದು ಹೇಳಿದೆ.
ಜರ್ನಲ್ ಜಮಾ ಪೀಡಿಯಾಟ್ರಿಕ್ಸ್‌ನಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಅಧ್ಯಯನವು, ಎದೆ ಹಾಲಿನ ಪ್ರತಿಕಾಯಗಳು ಚಿಕ್ಕ ಮಕ್ಕಳಿಗೆ ಕೋವಿಡ್ ವಿರುದ್ಧ ರಕ್ಷಣೆ ನೀಡಬಹುದು ಎಂದು ಸೂಚಿಸಿಲ್ಲ ಅಂತ ಹೇಳಿದೆ. ಎದೆ ಹಾಲಿನಲ್ಲಿರುವ ಪ್ರತಿಕಾಯಗಳ ಮಟ್ಟವನ್ನು ನಿರ್ಧರಿಸಲು 47 ಸೋಂಕಿತರು ಹಾಗೂ 30 ಲಸಿಕೆ ಪಡೆದಿದ್ದ ಒಟ್ಟು 77 ಮಂದಿ ತಾಯಂದಿರಿಂದ ಮಾದರಿಗಳನ್ನು ಸಂಗ್ರಹಿಸಿದ್ದ ಸಂಶೋಧಕರು ಈ ವರದಿಯನ್ನು ನೀಡಿದ್ದಾರೆ.
ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಕೊರೊನಾ ಸೋಂಕಿತ ತಾಯಂದಿರ ಎದೆ ಹಾಲಿನಲ್ಲಿ ವೈರಸ್ ವಿರುದ್ಧ ಹೆಚ್ಚಿನ ಮಟ್ಟದ ಇಮ್ಯುನೊಗ್ಲಾಬ್ಯುಲಿನ್ A (IgA) ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಲಸಿಕೆ ಪಡೆದರಲ್ಲೂ ರೋಗನಿರೋಧಕ ಶಕ್ತಿಯು ದೃಢವಾದ ಇಮ್ಯುನೊಗ್ಲಾಬ್ಯುಲಿನ್ G (IgG) ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಎರಡೂ ಪ್ರತಿಕಾಯಗಳು SARS-CoV-2ಅನ್ನು ತಟಸ್ಥಗೊಳಿಸುವಿಕೆಯನ್ನು ಒದಗಿಸಿವೆ. ಮೊದಲ ಬಾರಿಗೆ IgA ಮತ್ತು IgG ಪ್ರತಿಕಾಯಗಳಿಗೆ ಇಂತಹ ಪುರಾವೆಗಳನ್ನು ಕಂಡುಹಿಡಿಯಲಾಗಿದೆ.
ತಟಸ್ಥಗೊಳಿಸುವ ಪ್ರತಿಕಾಯವು ಜೈವಿಕವಾಗಿ ಸಾಂಕ್ರಾಮಿಕ ಕಣದಿಂದ ಜೀವಕೋಶವನ್ನು ರಕ್ಷಿಸುತ್ತದೆ. ಪ್ರತಿಕಾಯ ಸಾಂದ್ರತೆಯನ್ನು ಅಳೆಯುವುದು ಒಂದು ವಿಷಯ. ಆದರೆ ಪ್ರತಿಕಾಯಗಳು ಕ್ರಿಯಾತ್ಮಕವಾಗಿದ್ದು, SARS-CoV-2 ವೈರಸ್ ಅನ್ನು ತಟಸ್ಥಗೊಳಿಸಬಹುದು ಎಂದು ಅಮೆರಿಕದ ರೋಚೆಸ್ಟರ್ ವೈದ್ಯಕೀಯ ಕೇಂದ್ರ ವಿಶ್ವವಿದ್ಯಾಲಯದ (URMC) ಸಹಾಯಕ ಪ್ರಾಧ್ಯಾಪಕ, ಅಧ್ಯಯನದ ಸಹ-ಲೇಖಕ ಬ್ರಿಡ್ಜೆಟ್ ಯಂಗ್ ಹೇಳಿದ್ದಾರೆ.
ಈ ಕೆಲಸದಲ್ಲಿನ ಒಂದು ರೋಮಾಂಚಕಾರಿ ಸಂಶೋಧನೆಯೆಂದರೆ ಕೋವಿಡ್ ಸೋಂಕಿತ ಇಬ್ಬರು ತಾಯಂದಿರಿಂದ ಎದೆ ಹಾಲು ಹಾಗೂ ವ್ಯಾಕ್ಸಿನ್ ಪಡೆದಿದ್ದ ತಾಯಂದಿರಿಂದ ಈ ಸಕ್ರಿಯ ಪ್ರತಿಕಾಯಗಳು ವೈರಸ್ ಅನ್ನು ತಟಸ್ಥಗೊಳಿಸಲು ಸಮರ್ಥವಾಗಿವೆ ಎಂದು ಯಂಗ್ ತಿಳಿಸಿದ್ದಾರೆ.