ETV Bharat / international

ಕೊರೊನಾ​ ಮಾಹಿತಿಗೆ ವಿಭಿನ್ನ ಮೂಲಗಳನ್ನು ತಡಕಾಡುವ ಅಮೆರಿಕನ್ನರು !! - ಫುಡ್​ ಆ್ಯಂಡ್ ಡ್ರಗ್ ಆ್ಯಡ್ಮಿನಿಸ್ಟ್ರೇಷನ್

ಅಮೆರಿಕ ನಾಗರಿಕ ಸಶಸ್ತ್ರ ಪಡೆಯ ಯೋಧ ಜಾನ್ ಮ್ಯಾನ್ಲೆ ಎಂಬುವರು ಕೊರೊನಾ ವೈರಸ್ ಪಾಸಿಟಿವ್​ ಆದಾಗ, ಆತನ ಸಹೋದರಿಯು ಮಲೇರಿಯಾ ಔಷಧಿ ಸೇವಿಸುವಂತೆ ಸಲಹೆ ನೀಡಿದ್ದಳಂತೆ. ಕೊರೊನಾ ಹೋರಾಟದಲ್ಲಿ ಮಲೇರಿಯಾ ಔಷಧಿ ಬಹಳ ಪರಿಣಾಮಕಾರಿಯಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿದ್ದನ್ನು ಫಾಕ್ಸ್​ ನ್ಯೂಸ್​ ಚಾನೆಲ್​ನಲ್ಲಿ ಆಕೆ ನೋಡಿದ್ದರಿಂದ ಈ ಸಲಹೆ ನೀಡಿದ್ದಳು.

Americans trust different sources for virus info

author img

By

Published : Apr 30, 2020, 5:42 PM IST

ವಾಶಿಂಗ್ಟನ್: ಕೊರೊನಾ ವೈರಸ್​ನಿಂದ ಅತಿ ಹೆಚ್ಚು ಬಾಧಿತವಾಗಿರುವ ಅಮೆರಿಕದಲ್ಲಿ ಕೊರೊನಾ ವೈರಸ್​ ಕುರಿತಾದ ತಾಜಾ ಮಾಹಿತಿಗೆ ಸುದ್ದಿಯ ಯಾವ ಮೂಲಗಳನ್ನು ಹೆಚ್ಚು ನಂಬಬಹುದು ಎಂಬ ಬಗ್ಗೆ ವಿಮರ್ಶೆ ಆರಂಭವಾಗಿದೆ.

ಮೂರರಲ್ಲಿ ಒಬ್ಬರು ಮಾತ್ರ ತಮ್ಮ ಪರಿಚಯದವರು ಅಥವಾ ಬಂಧು ಬಳಗದವನ್ನು ಈ ವಿಷಯದಲ್ಲಿ ನಂಬುತ್ತಾರೆ ಎಂದು ಸಮೀಕ್ಷೆಯೊಂದರಲ್ಲಿ ತಿಳಿದು ಬಂದಿದೆ. ಅಸೋಸಿಯೇಟ್​ ಪ್ರೆಸ್-ಎನ್​ಒರಸಿ ಸೆಂಟರ್ ಫಾರ್ ಪಬ್ಲಿಕ್ ಅಫೇರ್ಸ್​ ರಿಸರ್ಚ್​ ಸಂಸ್ಥೆ ಏಪ್ರಿಲ್​ ಮಧ್ಯಭಾಗದಲ್ಲಿ ಕೈಗೊಂಡ ಸಮೀಕ್ಷೆಯಲ್ಲಿ ಕೆಲ ಕುತೂಹಲಕರ ವಿಷಯ ಬಹಿರಂಗವಾಗಿವೆ.

ಅಮೆರಿಕ ನಾಗರಿಕ ಸಶಸ್ತ್ರ ಪಡೆಯ ಯೋಧ ಜಾನ್ ಮ್ಯಾನ್ಲೆ ಎಂಬುವರು ಕೊರೊನಾ ವೈರಸ್ ಪಾಸಿಟಿವ್​ ಆದಾಗ, ಆತನ ಸಹೋದರಿಯು ಮಲೇರಿಯಾ ಔಷಧಿ ಸೇವಿಸುವಂತೆ ಸಲಹೆ ನೀಡಿದ್ದಳಂತೆ. ಕೊರೊನಾ ಹೋರಾಟದಲ್ಲಿ ಮಲೇರಿಯಾ ಔಷಧಿ ಬಹಳ ಪರಿಣಾಮಕಾರಿಯಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿದ್ದನ್ನು ಫಾಕ್ಸ್​ ನ್ಯೂಸ್​ ಚಾನೆಲ್​ನಲ್ಲಿ ಆಕೆ ನೋಡಿದ್ದರಿಂದ ಈ ಸಲಹೆ ನೀಡಿದ್ದಳು.

ಆದರೆ, ದೇಶದ ಫುಡ್​ ಅಂಡ್ ಡ್ರಗ್ ಆ್ಯಡ್ಮಿನಿಸ್ಟ್ರೇಷನ್ ಈ ಔಷಧಿಯನ್ನು ಪ್ರಮಾಣೀಕರಿಸಿಲ್ಲ ಎಂಬುದು 58 ವರ್ಷದ ಮ್ಯಾನ್ಲೆಗೆ ತಿಳಿದಿದ್ದರಿಂದ ಆತ ಮಲೇರಿಯಾ ಔಷಧಿ ತೆಗೆದುಕೊಳ್ಳಲಿಲ್ಲ ಎಂಬುದು ಬೇರೆ ಮಾತು.

ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಕುರಿತಾಗಿ ವೈಟ್​ಹೌಸ್​ ನೀಡುವ ಮಾಹಿತಿಗಳನ್ನು ಕೇವಲ ಶೇ.23ರಷ್ಟು ಅಮೆರಿಕನ್ನರು ಮಾತ್ರ ನಂಬುತ್ತಾರೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ. ಇನ್ನು ಶೇ.66 ರಷ್ಟು ಜನ ಕೊರೊನಾ ಬಗ್ಗೆ ವೈದ್ಯಕೀಯ ಪರಿಣಿತರು ನೀಡುವ ಸಲಹೆಗಳನ್ನು ಮಾತ್ರ ಸ್ವೀಕರಿಸುತ್ತಾರಂತೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.