ವಾಷಿಂಗ್ಟನ್: ಅರಬ್ಬೀ ಸಮುದ್ರದಲ್ಲಿ ರಷ್ಯಾ ನೌಕೆಯು ನಮ್ಮ ಸೇನೆಯ ನೌಕೆಯ ಮೇಲೆ ಆಕ್ರಮಣವೆಸಗಲು ಯತ್ನಿಸಿದೆ. ಅವರ ಹಡಗು ನಮ್ಮ ನೌಕೆಕೆ ಡಿಕ್ಕಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ ಎಂದು ಅಮೆರಿಕ ಆರೋಪಿಸಿದೆ.
ರಷ್ಯಾದ ಹಡಗು ಅಮೆರಿಕಾ ನೌಕೆ ನೀಡಿದ ಅಪಘಾತ ಎಚ್ಚರಿಕೆ ಸೂಚನೆಗಳನ್ನು ನಿರ್ಲಕ್ಷಿಸಿದೆ. ಅಲ್ಲದೇ ನೌಕೆಯಿಂದ ದೂರ ಹೋಗುವ ಬದಲು ಬಹಳ ಹತ್ತಿರಕ್ಕೆ ಬಂದು, ಕಡಿಮೆ ಅಂತರದಲ್ಲಿ ಅಪಘಾತ ತಪ್ಪಿದೆ ಎಂದು ಅಮೆರಿಕ ಸೇನೆ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ ಆರೋಪ ಮಾಡಿದೆ.
"ರಷ್ಯಾ ಹಡಗು ಕ್ರಮ ಕೈಗೊಂಡರೆ, ಆಕ್ರಮಣಕಾರಿ ವಿಧಾನವನ್ನು ಮಾಡುವಾಗ ಅಂತಾರಾಷ್ಟ್ರೀಯ ನಿಯಮಗಳನ್ನು ಪಾಲಿಸುವಲ್ಲಿನ ಆರಂಭಿಕ ವಿಳಂಬವು ಘರ್ಷಣೆಯ ಅಪಾಯವನ್ನು ಹೆಚ್ಚಿಸಿತು"ಎಂದು ಅಮೆರಿಕಾ ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.
ರಷ್ಯಾದ ಹಡಗು ಅಮೆರಿಕ ಯುದ್ಧನೌಕೆಯತ್ತ ವೇಗದಿಂದ ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅಮೆರಿಕ ನೌಕೆಯ ಕೇವಲ ಹತ್ತು ಮೀಟರ್ ಅಂತರದಲ್ಲಿ ಅಪಾಯ ತಪ್ಪಿದೆ.
ಅಮೆರಿಕ ನೌಕಾಪಡೆಯು ಜಾಗರೂಕರಾಗಿ ಮುಂದುವರಿಯುತ್ತದೆ. ಅಲ್ಲದೆ ವೃತ್ತಿಪರವಾಗಿ ಕಾರ್ಯನಿರ್ವಹಿಸಲು ತರಬೇತಿ ಪಡೆದಿದೆ ಎಂದು ಅಮೆರಿಕ ಸೇನೆ ತಿಳಿಸಿದೆ.