ETV Bharat / international

ಒಂದೇ ಟ್ವೀಟ್​ನಿಂದ ಕರಗಿತು ಶ್ರೀಮಂತ ವ್ಯಕ್ತಿ ಸಂಪತ್ತು.. ಟೆಸ್ಲಾ ಷೇರು ಮಾರಾಟ ಮಾಡಿದ ಎಲಾನ್ ಮಸ್ಕ್​

ವಿಶ್ವದ ಶ್ರೀಮಂತ ವ್ಯಕ್ತಿ ಹಾಗೂ ತನ್ನದೇ ಬಾಹ್ಯಕಾಶ ಸಂಸ್ಥೆ (SpaceX) ಹೊಂದಿರುವ ಎಲಾನ್ ಮಾಸ್ಕ್ ತಮ್ಮ ಎಲೆಕ್ಟ್ರಿನ್ ವಾಹನ ಟೆಸ್ಲಾದ ಷೇರು ಮಾರಾಟ ಮಾಡಿ ಸುದ್ದಿಯಾಗಿದ್ದಾರೆ. ಟ್ವಿಟರ್​​​ನಲ್ಲಿ ನೀಡಿದ್ದ ಹೇಳಿಕೆಯಂತೆ ಅವರು ತಮ್ಮ ಷೇರುಗಳ ಮಾರಾಟ ಮಾಡಿದ್ದು ಕೋಟಿ ಕೋಟಿ ಸಂಪತ್ತು ಕರಗಿದೆ.

Musk sells USD 1.1B in Tesla shares to pay taxes
ಟೆಸ್ಲಾ ಷೇರು ಮಾರಾಟ ಮಾಡಿದ ಎಲಾನ್ ಮಸ್ಕ್​
author img

By

Published : Nov 11, 2021, 10:16 AM IST

ಡೆಟ್ರಾಯಿಟ್ (ಅಮೆರಿಕ): ವಿಶ್ವದ ಶ್ರೀಮಂತ ವ್ಯಕ್ತಿ ಟೆಸ್ಲಾ ಮತ್ತು ಸ್ಪೇಸ್​​ ಎಕ್ಸ್​ ಸಂಸ್ಥಾಪಕ ಎಲಾನ್ ಮಸ್ಕ್ (Tesla CEO Elon Musk) ಆಸ್ತಿ ಒಂದೇ ದಿನದಲ್ಲಿ ಕುಸಿತ ಕಂಡಿದೆ. ಎಲೆಕ್ಟ್ರಿಕ್ ಕಾರು (Electric Vehicle) ತಯಾರಕರ ಸ್ಟಾಕ್‌ನ ಸುಮಾರು 9,00,000 ಷೇರುಗಳನ್ನು ಮಾರಾಟ ಮಾಡಿದ ಹಿನ್ನೆಲೆ ಈ ಪ್ರಮಾದ ಉಂಟಾಗಿದೆ.

ಟೆಸ್ಲಾ ಕಾರಿನ (Tesla Car) ಶೇ.10ರಷ್ಟು ಷೇರನ್ನು ತೆರಿಗೆ ರೂಪದಲ್ಲಿ ನೀಡಿದ ಪರಿಣಾಮ ಸುಮಾರು 1.1 ಶತಕೋಟಿ ಯುಎಸ್ ಡಾಲರ್ ಸಂಪತ್ತು ಅವರ ಖಾತೆಯಿಂದ ಕರಗಿದಂತಾಗಿದೆ.

ಮಸ್ಕ್ (Elon Mask) ಇನ್ನೂ ಸುಮಾರು 170 ಮಿಲಿಯನ್ ಟೆಸ್ಲಾ ಷೇರುಗಳನ್ನು (Tesla's largest shareholder) ಹೊಂದಿದ್ದಾರೆ. ಡೇಟಾ ಪೂರೈಕೆದಾರ ಫ್ಯಾಕ್ಟ್‌ಸೆಟ್ ಪ್ರಕಾರ, ಮಸ್ಕ್ ಜೂನ್‌ನಲ್ಲಿ ಟೆಸ್ಲಾದ ಅತಿದೊಡ್ಡ ಷೇರುದಾರರಾಗಿದ್ದರು, ಕಂಪನಿಯ ಸುಮಾರು ಶೇ.17ರಷ್ಟು ಷೇರು ಹೊಂದಿದ್ದಾರೆ. ಅವರು ಫೋರ್ಬ್ಸ್ (Forbes) ನಿಯತಕಾಲಿಕೆ ಪ್ರಕಾರ, ಸುಮಾರು 282 ಶತಕೋಟಿ ಯುಎಸ್​ ಡಾಲರ್ ಮೌಲ್ಯದ ಆಸ್ತಿ ಹೊಂದಿರುವ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ (World's Richest Man).

ಹಣ ಕಸಿದಿದ್ದು ಒಂದು ಟ್ವೀಟ್​​..!

ಟ್ವೀಟ್​ನಲ್ಲಿ ಎಲಾನ್ ಮಸ್ಕ್ (Elon Mask) ಟೆಸ್ಲಾ ಕಂಪನಿಯ (Tesla Company) ಶೇ.10ರಷ್ಟು ಷೇರುಗಳನ್ನ ತೆರಿಗೆ ರೂಪದಲ್ಲಿ ಮಾರಾಟ ಮಾಡಲು ನಿರ್ಧರಿಸಿದ್ದೇನೆ. ಈ ನಿರ್ಧಾರಕ್ಕೆ ನಿಮ್ಮ ಅಭಿಪ್ರಾಯವೇನು.? ಎಂದು ಪ್ರಶ್ನಿಸಿ ಟ್ವಿಟರ್​​​ನಲ್ಲಿ ಪೋಲಿಂಗ್ (Twitter Polling) ನಡೆಸಿದ್ದರು. ದುರಾದೃಷ್ಟವಶಾತ್ ಅವರ ಈ ಟ್ವೀಟ್​ಗೆ ಶೇ.57.9ರಷ್ಟು ಮಂದಿ ಬೆಂಬಲ ಸೂಚಿಸಿದ್ದರೆ, ಇನ್ನುಳಿದ 42.1 ಮಂದಿ ಬೆಂಬಲ ನೀಡಿರಲಿಲ್ಲ. ಆದರೆ, ಕೊಟ್ಟ ಮಾತಿನಂತೆ ಎಲಾನ್ ಮಸ್ಕ್ ತೆರಿಗೆ ಪಾವತಿಗಾಗಿ ಷೇರು ಮಾರಾಟ ಮಾಡಿದ್ದಾರೆ.

  • Much is made lately of unrealized gains being a means of tax avoidance, so I propose selling 10% of my Tesla stock.

    Do you support this?

    — Elon Musk (@elonmusk) November 6, 2021 " class="align-text-top noRightClick twitterSection" data=" ">

ಜೊತೆಗೆ ಇನ್ನೊಂದು ಟ್ವೀಟ್​​ನಲ್ಲಿ ‘ಗಮನಿಸಿ, ನಾನು ಎಲ್ಲಿಂದಲಾದರೂ ಸಂಬಳ ಅಥವಾ ಬೋನಸ್ ತೆಗೆದುಕೊಳ್ಳುವುದಿಲ್ಲ. ನನ್ನ ಬಳಿ ಸ್ಟಾಕ್ ಮಾತ್ರ ಇದೆ, ಹೀಗಾಗಿ ನನಗೆ ವೈಯಕ್ತಿಕವಾಗಿ ತೆರಿಗೆ ಪಾವತಿಸುವ ಏಕೈಕ ಮಾರ್ಗವೆಂದರೆ ಷೇರುಗಳನ್ನು ಮಾರಾಟ ಮಾಡುವುದು ಎಂದಿದ್ದಾರೆ.

ಇದನ್ನೂ ಓದಿ: ಗ್ಲಾಸ್ಗೋ ಶೃಂಗಸಭೆ: ಎಲೆಕ್ಟ್ರಿಕ್ ವಾಹನದ ‘ಇ-ಅಮೃತ್’ ಪೋರ್ಟಲ್ ಆರಂಭಿಸಿದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.