ETV Bharat / international

ನಾಸಾ: ಫೆಬ್ರವರಿಗೆ 2ನೇ ಹಂತದ ಎಸ್‌ಎಲ್‌ಎಸ್ ಹಾಟ್-ಫೈರ್ ಪರೀಕ್ಷೆ - ಬಾಹ್ಯಾಕಾಶ ಉಡಾವಣಾ ವ್ಯವಸ್ಥೆ

ನಾಸಾ ಮತ್ತು ಕೋರ್ ಹಂತದ ಗುತ್ತಿಗೆದಾರ ಬೋಯಿಂಗ್​ ಪ್ರತಿಕ್ರಿಯಿಸಿದ್ದು, ನಾವೀಗಾಗಲೇ ಮೊದಲ ಹಂತದ ಹಾಟ್​ ಫೈರ್ ಪರೀಕ್ಷೆ ನಡೆಸಿದ್ದೇವೆ. ಅದರಲ್ಲಿ ಆಗಿದ್ದ ಅಪಾಯಗಳು ಮರುಕಳಿಸದಂತೆ ಎಚ್ಚರ ವಹಿಸಿದ್ದೇವೆ. ಈ ಬಾರಿ, ದೀರ್ಘವಾದ ಹಾಟ್​ ಫೈರ್ ಪರೀಕ್ಷೆ ನಡೆಸಲಿದ್ದು, ಆರ್ಟೆಮಿಸ್​ ಐ ಕೋರ್​ ಕನಿಷ್ಠ ಅಪಾಯವನ್ನುಂಟು ಮಾಡುವ ಸಾಧ್ಯತೆಯಿದೆ ಎಂದರು.

NASA
ರೀಕ್ಷೆ
author img

By

Published : Jan 30, 2021, 7:42 PM IST

ವಾಷಿಂಗ್ಟನ್: ನಾಸಾ ತನ್ನ ಮೊದಲ ಬಾಹ್ಯಾಕಾಶ ಉಡಾವಣಾ ವ್ಯವಸ್ಥೆ (ಎಸ್‌ಎಲ್‌ಎಸ್) ಮೆಗಾ ರಾಕೆಟ್‌ಗಾಗಿ ಫೆಬ್ರವರಿಯಲ್ಲಿ ಎರಡನೇ ಹಂತದ ಹಾಟ್​ ಫೈರ್​ ಪರೀಕ್ಷೆಯನ್ನು ನಡೆಸಲಿದೆ. ಜನವರಿಯಲ್ಲಿ ನಡೆದಿದ್ದ ಮೊದಲ ಹಂತದ ಪರೀಕ್ಷೆ ವಿಫಲವಾಗಿತ್ತು. ಆರ್ಟೆಮಿಸ್​​ ಐ ಮಿಷನ್​ ಅನ್ನು ಚಂದ್ರನಿಗೆ ಉಡಾವಣೆ ಮಾಡುವ ಎಸ್‌ಎಲ್‌ಎಸ್ ರಾಕೆಟ್​​​ ಅನ್ನು ಫೆಬ್ರವರಿ ನಾಲ್ಕನೇ ವಾರದಲ್ಲಿ ಪರೀಕ್ಷಿಸಲಾಗುತ್ತದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಹಾಟ್-ಫೈರ್ ಪರೀಕ್ಷೆಯು ನಾಲ್ಕು ಆರ್​ಎಸ್​​-25 ಎಂಜಿನ್‌ಗಳನ್ನು ಮೊದಲ ಬಾರಿಗೆ ಒಟ್ಟಿಗೆ ಹಾರಿಸಲಾಗುತ್ತಿದ್ದು, ಇದೊಂದು ಮಹತ್ವದ ಮೈಲಿಗಲ್ಲಾಗಲಿದೆ. ಈ ಬಗ್ಗೆ ನಾಸಾ ಮತ್ತು ಕೋರ್ ಹಂತದ ಗುತ್ತಿಗೆದಾರ ಬೋಯಿಂಗ್​ ಪ್ರತಿಕ್ರಿಯಿಸಿದ್ದು, ನಾವೀಗಾಗಲೇ ಮೊದಲ ಹಂತದ ಹಾಟ್​ ಫೈರ್ ಪರೀಕ್ಷೆ ನಡೆಸಿದ್ದೇವೆ. ಅದರಲ್ಲಿ ಆಗಿದ್ದ ಅಪಾಯಗಳು ಮರುಕಳಿಸದಂತೆ ಎಚ್ಚರ ವಹಿಸಿದ್ದೇವೆ. ಈ ಬಾರಿ, ದೀರ್ಘವಾದ ಹಾಟ್​ ಫೈರ್ ಪರೀಕ್ಷೆ ನಡೆಸಲಿದ್ದು, ಆರ್ಟೆಮಿಸ್​ ಐ ಕೋರ್​ ಕನಿಷ್ಠ ಅಪಾಯವನ್ನುಂಟು ಮಾಡುವ ಸಾಧ್ಯತೆಯಿದೆ ಎಂದರು.

ಎರಡನೇ ಹಂತದ ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ ನಡೆದಿದೆ. ಎಸ್‌ಎಲ್‌ಎಸ್ ರಾಕೆಟ್‌ಗಳು ಒಂದೇ ಕೋರ್ ಹಂತದ ವಿನ್ಯಾಸವನ್ನು ಬಳಸುತ್ತವೆ. ಆದ್ದರಿಂದ ಎರಡನೇ ಗ್ರೀನ್ ರನ್ ಹಾಟ್​ ಫೈರ್​ ಆರ್ಟೆಮಿಸ್ ಐ ಗೆ ಮಾತ್ರವಲ್ಲ, ಭವಿಷ್ಯದ ಎಲ್ಲಾ ಎಸ್‌ಎಲ್‌ಎಸ್ ಕಾರ್ಯಾಚರಣೆಗಳಿಗೂ ಇದು ಅಪಾಯವನ್ನು ಕಡಿಮೆ ಮಾಡುತ್ತದೆ. ಗ್ರೀನ್ ರನ್ ಸರಣಿಯ ಪರೀಕ್ಷೆಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು.

ಹಾಟ್-ಫೈರ್ ಪರೀಕ್ಷೆಯು ಅಂತಿಮ ಗ್ರೀನ್ ರನ್ ಪರೀಕ್ಷೆಯಾಗಿದ್ದು, ಮುಂದಿನ ವರ್ಷಗಳಲ್ಲಿ ಯುಎಸ್ ಬಾಹ್ಯಾಕಾಶ ಪರಿಶೋಧನಾ ಕಾರ್ಯಾಚರಣೆಗಳಿಗೆ ಅಪಾಯವನ್ನು ಕಡಿಮೆ ಮಾಡುವ ಅಮೂಲ್ಯವಾದ ದತ್ತಾಂಶವನ್ನು ಒದಗಿಸುತ್ತದೆ. ಹಾಟ್-ಫೈರ್ ಪರೀಕ್ಷೆಯನ್ನು ಸುಮಾರು ಎಂಟು ನಿಮಿಷಗಳ ಕಾಲ ನಡೆಸಲು ಯೋಜಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.