ETV Bharat / international

ಅಮೆರಿಕದಲ್ಲಿ ವರ್ಣ ಸಂಘರ್ಷ: ಪ್ರತಿಭಟನೆಯ ಕಿಚ್ಚು ಆರಿಸಲು 40 ನಗರಗಳಲ್ಲಿ ಕರ್ಫ್ಯೂ - African-American man

ಅಮೆರಿಕ ಪೊಲೀಸರ ಮೇಲೆ ಜನಾಂಗೀಯ ತಾರತಮ್ಯ ಆರೋಪ ಕೇಳಿಬರುತ್ತಿದ್ದು, ಇದನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್​ ಓಬ್ರಿಯನ್ ತಳ್ಳಿಹಾಕಿದ್ದಾರೆ.

curfew
ಕರ್ಫ್ಯೂ
author img

By

Published : Jun 1, 2020, 11:01 AM IST

ವಾಷಿಂಗ್ಟನ್​ : ಮಿನ್ನಿಯಾ ಪೊಲೀಸ್​ ನಗರದಲ್ಲಿ ಕಪ್ಪು ವರ್ಣೀಯನ ಸಾವಿನ ನಂತರ ಭುಗಿಲೆದ್ದ ಪ್ರತಿಭಟನೆ ರಾಜಧಾನಿ ವಾಷಿಂಗ್ಟನ್​ ಸೇರಿದಂತೆ ಹಲವು ಕಡೆ ಹಬ್ಬಿದ್ದು, ಅಮೆರಿಕದ 40 ನಗರಗಳಲ್ಲಿ ಕರ್ಫ್ಯೂ ಹೇರಲಾಗಿದೆ.

ಪ್ರತಿಭಟನೆ ಹತ್ತಿಕ್ಕಲು ಸುಮಾರು 5 ಸಾವಿರ ರಾಷ್ಟ್ರೀಯ ರಕ್ಷಣಾ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ. ವಾಷಿಂಗ್ಟನ್​ನಲ್ಲಿ ಸುಮಾರು 2 ಸಾವಿರ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಅನಿವಾರ್ಯತೆಯಿದ್ದರೆ ಇನ್ನೂ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ ಎಂದು ನ್ಯಾಷನಲ್​ ಗಾರ್ಡ್​ ಬ್ಯೂರೋದ ಮುಖ್ಯಸ್ಥ ಜನರಲ್​ ಲೆನ್ಗೈಲ್​ ಹೇಳಿದ್ದಾರೆ.

ಅಮೆರಿಕ ಪೊಲೀಸರ ಮೇಲೆ ಜನಾಂಗೀಯ ತಾರತಮ್ಯ ಆರೋಪ ಕೇಳಿಬರುತ್ತಿದ್ದು, ಇದನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್​ ಓಬ್ರಿಯನ್ ತಳ್ಳಿಹಾಕಿದ್ದಾರೆ.

ಮಿನ್ನಿಯಾ ಪೊಲೀಸ್​ ನಗರದಲ್ಲಿ ಕಳ್ಳತನ ಆರೋಪದ ಮೇಲೆ ಜಾರ್ಜ್​ ಫ್ಲೋಯ್ಡ್​ ಎಂಬ 46 ವರ್ಷದ ಆಫ್ರಿಕನ್- ಅಮೆರಿಕನ್​ ವ್ಯಕ್ತಿಯನ್ನು ಪೊಲೀಸರು ಬಂಧಿಸುವ ವೇಳೆ ಆತನನ್ನು ಹಿಂಸಿಸಲಾಗಿತ್ತು. ಆ ನಂತರ ಆತ ಸಾವಿಗೀಡಾಗಿದ್ದ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.