ETV Bharat / international

ಈ ನಗರದ ಪೊಲೀಸ್​ ಆಯುಕ್ತರ ವಾಹನದ ಮೇಲೆ ದಾಳಿ:  ಶವ ಎಸೆದ ದುಷ್ಕರ್ಮಿಗಳು - ಬಂದೂಕುಧಾರಿಗಳ ಧಾಳಿ

ಮೆಕ್ಸಿಕೊ ನಗರದ ಪೊಲೀಸ್ ಮುಖ್ಯಸ್ಥರು ಇದ್ದ ಶಸ್ತ್ರಸಜ್ಜಿತ ವಾಹನವದ ಮೇಲೆ ಬಂದೂಕುಧಾರಿಗಳು ಗುಂಡು ಹಾರಿಸಿದ್ದಾರೆ. ಅಷ್ಟೇ ಅಲ್ಲ ಕಂಬಳಿ ಹಾಗೂ ಟೇಪ್‌ನಿಂದ ಸುತ್ತಿ ಶವಗಳನ್ನೂ ಎಸೆಯಲಾಗಿದೆ.

deady body found
deady body found
author img

By

Published : Jun 27, 2020, 8:08 AM IST

ಮೆಕ್ಸಿಕೋ(ಯು.ಎಸ್): ಮೆಕ್ಸಿಕೊದಲ್ಲಿ ಸಂಘಟಿತ ಅಪರಾಧ ಹಿಂಸಾಚಾರವು ಹೆಚ್ಚುತ್ತಿದ್ದು, ಉತ್ತರ - ಮಧ್ಯ ರಾಜ್ಯವಾದ ಝಕಾಟೆಕಾಸ್​ನ ಫ್ರೆಸ್ನಿಲ್ಲೊ ನಗರದ ಸಮೀಪ ರಸ್ತೆ ಬದಿಯಲ್ಲಿ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೆಕ್ಸಿಕೊ ನಗರದ ಪೊಲೀಸ್ ಮುಖ್ಯಸ್ಥರನ್ನು ಹೊತ್ತೊಯ್ಯುತ್ತಿದ್ದ ಶಸ್ತ್ರಸಜ್ಜಿತ ವಾಹನವದ ಮೇಲೆ ಬಂದೂಕುಧಾರಿಗಳು ಗುಂಡು ಹಾರಿಸಿದ್ದಾರೆ.

ಝಕಾಟೆಕಾಸ್ ರಾಜ್ಯ ಪೊಲೀಸರು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆದರೆ, ಕಂಬಳಿ ಹಾಗೂ ಟೇಪ್‌ನಿಂದ ಸುತ್ತಿ ಶವಗಳನ್ನ ಎಸೆಯಲಾಗಿದೆ.

ಸುಮಾರು 24 ಬಂದೂಕುಧಾರಿಗಳು ಮೆಕ್ಸಿಕೊ ನಗರ ಪೊಲೀಸ್ ಮುಖ್ಯಸ್ಥರ ವಾಹನ ಬರುವುದನ್ನೇ ಕಾದು ಕುಳಿತು ಅವರ ವಾಹನದ ಮೇಲೆ 50 ಕ್ಯಾಲಿಬರ್ ಸ್ನೈಪರ್ ರೈಫಲ್‌ಗಳು ಮತ್ತು ಗ್ರೆನೇಡ್‌ಗಳ ಮೂಲಕ ದಾಳಿ ನಡೆಸಿದ್ದಾರೆ.

ಪೊಲೀಸ್​​ ಮುಖ್ಯಸ್ಥ ಒಮರ್ ಗಾರ್ಕಾ ಹಾರ್ಫುಚ್ ಮೇಲೆ ಮೂರು ಬುಲೆಟ್ ಬಿದ್ದಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರ ಮಾಹಿತಿಯನ್ನು ಪೊಲೀಸರು ಇನ್ನಷ್ಟೇ ನೀಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.