ETV Bharat / international

ಅಮೆರಿಕಾದಲ್ಲಿ 3 ಒಮಿಕ್ರೋನ್ ಕೇಸ್ ಪತ್ತೆ: ಸಮುದಾಯಕ್ಕೆ ಹರಡಿರುವ ಶಂಕೆ

author img

By

Published : Dec 3, 2021, 5:01 AM IST

ಕೋವಿಡ್ ರೂಪಾಂತರಿ 'ಒಮಿಕ್ರೋನ್' ಅಮೆರಿಕಾದಲ್ಲಿ ಹರಡುತ್ತಿದೆ, ಇದೀಗ 3ನೇ ಕೇಸ್ ಪತ್ತೆಯಾಗಿದೆ.

ಅಮೆರಿಕಾದಲ್ಲಿ ಒಮಿಕ್ರೋನ್ ಕೇಸ್ ಪತ್ತೆ,Omicron variant of coronavirus in United States
ಅಮೆರಿಕಾದಲ್ಲಿ 3 ಒಮಿಕ್ರೋನ್ ಕೇಸ್ ಪತ್ತೆ

ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ ರೂಪಾಂತರಿ 'ಒಮಿಕ್ರೋನ್' ಅಮೆರಿಕಾದಲ್ಲಿ ಹರಡುತ್ತಿದೆ. ದೇಶದಲ್ಲಿ ಈವರೆಗೆ 3 ಒಮಿಕ್ರೋನ್ ಪ್ರಕರಣಗಳು ಪತ್ತೆಯಾಗಿವೆ ಎಂದು ಅಮೆರಿಕ ಆರೋಗ್ಯ ಇಲಾಖೆ ಖಚಿತ ಪಡಿಸಿದೆ.

ಬುಧವಾರವಷ್ಟೇ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಮೊದಲ ಒಮಿಕ್ರೋನ್ ಪ್ರಕರಣ ಪತ್ತೆಯಾಗಿತ್ತು. ಬಳಿಕ ಮಿನ್ನೆಸೋಟಾದಲ್ಲಿ ಎರಡನೇ ಪ್ರಕರಣ ಹಾಗೂ ಸದ್ಯ ಕೊಲೊರಾಡೋದಲ್ಲಿ 3ನೇ ಪ್ರಕರಣ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಮಿನ್ನೆಸೋಟಾದಲ್ಲಿ ಪತ್ತೆಯಾದ ಸೋಂಕಿತ ಎರಡು ದಿನಗಳ ಹಿಂದೆಯಷ್ಟೇ ನ್ಯೂಯಾರ್ಕ್​ ನಗರದಲ್ಲಿ ಆಯೋಜಿಸಿದ್ದ ಕಾನ್ಫರನ್ಸ್​ವೊಂದರಲ್ಲಿ ಭಾಗಿಯಾಗಿದ್ದ. ಈ ಮೂಲಕ ಸಮುದಾಯಕ್ಕೆ ಹರಡಿರುವ ಶಂಕೆ ವ್ಯಕ್ತವಾಗಿದೆ. ಆದ್ದರಿಂದ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಕಾನ್ಪರನ್ಸ್​ಗೆ ಆಗಮಿಸಿದ್ದವರನ್ನು ಟೆಸ್ಟ್​ಗೆ ಒಳಪಡಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಇನ್ನು ಕೊಲೊರಾಡೋದಲ್ಲಿ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದು, ಇತ್ತೀಚೆಗಷ್ಟೇ ಆಫ್ರಿಕಾ ಟ್ರಿಪ್​ನಿಂದ ಆಗಮಿಸಿದ್ದರು ಎಂದು ​ಮೂಲಗಳು ತಿಳಿಸಿವೆ.

ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದ ಕ್ಯಾಲಿಫೋರ್ನಿಯಾ ವ್ಯಕ್ತಿಯಲ್ಲಿ ಬುಧವಾರ ಒಮಿಕ್ರೋನ್ ಪತ್ತೆಯಾಗಿತ್ತು. ಇದು ಅಮೆರಿಕಾದಲ್ಲಿ ಪತ್ತೆಯಾದ ಮೊದಲ ಹೊಸ ರೂಪಾಂತರಿ ಕೇಸ್ ಆಗಿತ್ತು. ಕಳೆದ ತಿಂಗಳ ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪಾಂತರಿ ಮೊದಲ ಬಾರಿಗೆ ಕಂಡು ಬಂದಿದ್ದು, ಇದೀಗ ಅಮೆರಿಕಾ ಮತ್ತು ಭಾರತದಲ್ಲೂ ಪತ್ತೆಯಾಗಿದೆ. ಈ ಮೂಲಕ ಆತಂಕ ಎದುರಾಗಿದೆ.

(ಇದನ್ನೂ ಓದಿ: ಭಾರತಕ್ಕೆ ಲಗ್ಗೆ ಹಾಕಿದ ರೂಪಾಂತರಿ: ಕರ್ನಾಟಕದಲ್ಲಿ ಎರಡು ಒಮಿಕ್ರೋನ್ ಕೇಸ್​​​ ಪತ್ತೆ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.