ETV Bharat / international

ಶಿಕ್ಷಕರನ್ನು ಕರೆದೊಯ್ಯುತ್ತಿದ್ದ ಬಸ್​ಗೆ ಅಪಘಾತ: 10 ಮಂದಿ ಸಾವು, 25 ಜನರಿಗೆ ಗಾಯ - ಕ್ಯೂಬಾ ರಾಜಧಾನಿ ಹವಾನಾ

ಕ್ಯೂಬಾ ರಾಜಧಾನಿ ಹವಾನಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಮೃತಪಟ್ಟಿದ್ದು, 25 ಜನರು ಗಾಯಗೊಂಡಿದ್ದಾರೆ.

10 dead, 25 injured after bus crashes in Cuba
ಶಿಕ್ಷಕರನ್ನು ಕರೆದೊಯ್ಯುತ್ತಿದ್ದ ಬಸ್​ಗೆ ಅಪಘಾತ
author img

By

Published : Jan 31, 2021, 10:45 AM IST

ಹವಾನಾ (ಕ್ಯೂಬಾ): ಶಿಕ್ಷಕರನ್ನು ಕರೆದೊಯ್ಯುತ್ತಿದ್ದ ಬಸ್​ವೊಂದು ಸೇತುವೆ ಮೇಲಿಂದ ಬಿದ್ದು, 10 ಮಂದಿ ಮೃತಪಟ್ಟಿರುವ ಘಟನೆ ಕ್ಯೂಬಾ ದೇಶದ ರಾಜಧಾನಿ ಹವಾನಾದಲ್ಲಿ ನಡೆದಿದೆ.

ಹವಾನಾದಿಂದ 40 ಕಿ.ಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್​ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ದುರಂತ ಸಂಭವಿಸಿದೆ. ಘಟನೆಯಲ್ಲಿ ಇನ್ನೂ 25 ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ರಾಷ್ಟ್ರೀಯ ರಸ್ತೆ ಸುರಕ್ಷತಾ ಆಯೋಗ ವರದಿ ಮಾಡಿದೆ.

ಇದನ್ನೂ ಓದಿ: ಸುಶಾಂತ್​ ಸಿಂಗ್​ ಸಂಬಂಧಿ ಮೇಲೆ ಗುಂಡಿನ ದಾಳಿ: ಮೂವರು ದುಷ್ಕರ್ಮಿಗಳಿಂದ ಕೃತ್ಯ!

ಗಾಯಾಳುಗಳನ್ನು ಹವಾನಾ ಮತ್ತು ನೆರೆಯ ಪ್ರಾಂತ್ಯವಾದ ಮಾಯಾಬೆಕ್​ನಲ್ಲಿನ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ಕ್ಯೂಬಾ ಅಧ್ಯಕ್ಷ ಮಿಗುಯೆಲ್ ಡಯಾಜ್-ಕ್ಯಾನೆಲ್, "ಅಮೂಲ್ಯವಾದ ಜೀವಗಳನ್ನು ಕಳೆದುಕೊಂಡಿದ್ದೇವೆ" ಎಂದು ಸಾವಿಗೆ ಸಂತಾಪ ಸೂಚಿಸಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.