ETV Bharat / international

ಸಂಸದರ ಝೂಮ್ ಕಾನ್ಫರೆನ್ಸ್​ ಹ್ಯಾಕ್ ; ಅಶ್ಲೀಲ ಚಿತ್ರ ಪ್ರದರ್ಶನ!! - ಜನಾಂಗೀಯ ನಿಂದನೆ

ಝೂಮ್​ ಆ್ಯಪ್ ಬಳಕೆ ಸುರಕ್ಷತವಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಸಂಸದರ ಝೂಮ್​ ವರ್ಚ್ಯುವಲ್ ಕಾನ್ಫರೆನ್ಸ್​ ಹ್ಯಾಕ್​ ಮಾಡಲಾಗಿದೆ.

South Africa parliament video call hacked

author img

By

Published : May 7, 2020, 7:19 PM IST

ಜೋಹಾನ್ಸಬರ್ಗ್​ : ದಕ್ಷಿಣ ಆಫ್ರಿಕಾದ ಸಂಸತ್ ಸದಸ್ಯರು ನಡೆಸುತ್ತಿದ್ದ ವಿಡಿಯೋ ಕಾನ್ಫರೆನ್ಸ್​ ಹ್ಯಾಕ್​ ಮಾಡಿ, ಮಧ್ಯದಲ್ಲಿ ಅಶ್ಲೀಲ ಚಿತ್ರಗಳನ್ನು ಹರಿಬಿಟ್ಟಿದ್ದರಿಂದ ಭಾರಿ ಮುಜುಗರದ ಸನ್ನಿವೇಶ ಉಂಟಾಗಿದ್ದ ಬಗ್ಗೆ ವರದಿಯಾಗಿದೆ. ರಾಷ್ಟ್ರೀಯ ಸಂಸತ್ತಿನ ಸ್ಪೀಕರ್​ ಆಗಿರುವ ಮಹಿಳೆ ಥಂಡಿ ಮೊಡಿಸೆ ಅವರನ್ನು ಗುರಿಯಾಗಿಟ್ಟುಕೊಂಡು, ಲೈಂಗಿಕವಾಗಿ ಅವಮಾನಿಸುವ ಹಾಗೂ ಜನಾಂಗೀಯ ನಿಂದನೆಯ ಚಿತ್ರಗಳನ್ನು ಹ್ಯಾಕರ್​ಗಳು ಕಾನ್ಫರೆನ್ಸ್​ ಮಧ್ಯೆ ಹರಿಬಿಟ್ಟಿದ್ದಾರೆ.

ಝೂಮ್​ ಆ್ಯಪ್ ಮೂಲಕ ಕಾನ್ಫರೆನ್ಸ್​ ನಡೆಸುವುದು ಸೂಕ್ತವಲ್ಲ ಎಂದು ಥಂಡಿ ಮೊಡಿಸೆ ಮೊದಲೇ ಆತಂಕ ವ್ಯಕ್ತಪಡಿಸಿದ್ದರು. ಕೊನೆಗೂ ಝೂಮ್ ಆ್ಯಪ್​ ಕಾನ್ಫರೆನ್ಸ್​ ಹ್ಯಾಕ್​ ಆದ ನಂತರ ಬೇರೆ ಲಿಂಕ್​ ಮೂಲಕ ವರ್ಚ್ಯುವಲ್ ಸಭೆ ಮುಂದುವರಿಸಲಾಯಿತು. ಝೋಂಬ್ ಬಾಂಬಿಂಗ್​ ಅಥವಾ ಝೂಮ್​ ಹ್ಯಾಕಿಂಗ್ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.