ETV Bharat / international

ಸಮುದ್ರದ ಅಲೆಗಳಿಗೆ ಕೊಚ್ಚಿ ದಡ ಸೇರಿದ 27 ಮೃತದೇಹಗಳು!

ಲಿಬಿಯಾದ ಕರಾವಳಿ ಪಟ್ಟಣವಾದ ಖೋಮ್ಸ್‌ನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಶನಿವಾರ ತಡರಾತ್ರಿ 37 ಶವಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದ್ದು, ಶೋಧ ಕಾರ್ಯ ಮುಂದುವರೆದಿದೆ.

Red Crescent: Bodies of 27 migrants wash ashore in Libya
ಸಮುದ್ರದ ಅಲೆಗಳಿಗೆ ಕೊಚ್ಚಿ ದಡ ಸೇರಿದ 27 ವಲಸಿಗರ ಮೃತದೇಹಗಳು
author img

By

Published : Dec 26, 2021, 9:43 PM IST

ಟ್ರಿಪೋಲಿ(ಲಿಬಿಯಾ): ಒಂದು ಮಗು, ಇಬ್ಬರು ಮಹಿಳೆಯರು ಸೇರಿದಂತೆ 27 ಯುರೋಪ್ ಮೂಲದ ವಲಸಿಗರ ಮೃತದೇಹಗಳ ಸಮುದ್ರದ ಅಲೆಗಳಿಗೆ ತೇಲಿಕೊಂಡು ದಡಕ್ಕೆ ತಲುಪಿರುವ ಘಟನೆ ಪಶ್ಚಿಮ ಲಿಬಿಯಾದಲ್ಲಿ ನಡೆದಿದೆ.

ರೆಡ್ ಕ್ರೆಸೆಂಟ್ ಈ ಮಾಹಿತಿ ನೀಡಿದ್ದು, ಲಿಬಿಯಾದ ಕರಾವಳಿ ಪಟ್ಟಣವಾದ ಖೋಮ್ಸ್‌ನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಶನಿವಾರ ತಡರಾತ್ರಿ ಶವಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಶೋಧ ಕಾರ್ಯ ಮುಂದುವರೆದಿದೆ.

ಮುಸ್ಲಿಂ ಸಂಘಟನೆಯಾದ ರೆಡ್​ ಕ್ರೆಸೆಂಟ್ ತನ್ನ ವೆಬ್​ಸೈಟ್​ನಲ್ಲಿ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದು, ಸಂಘಟನೆಯ ಕಾರ್ಯಕರ್ತರು ಚೀಲಗಳಲ್ಲಿ ಮೃತದೇಹಗಳನ್ನು ತುಂಬುತ್ತಿರುವುದು ಕಂಡುಬಂದಿದೆ. ಮೃತರು ಇತ್ತೀಚಿನ ಹಡಗು ದುರಂತಗಳಲ್ಲಿ ಸಾವನ್ನಪ್ಪಿದವರು ಎಂದು ಹೇಳಲಾಗುತ್ತಿದೆ.

ಲಿಬಿಯಾದ ರಾಜಧಾನಿ ಟ್ರಿಪೋಲಿಯಲ್ಲಿ ವಲಸಿಗರ ಮೇಲೆ ಅಲ್ಲಿನ ಅಧಿಕಾರಿಗಳು ದಮನಕಾರಿ ನೀತಿಗಳನ್ನು ಅನುಸರಿಸಿದ ಕಾರಣದಿಂದ ಅಲ್ಲಿಂದ ಬೇರೆಡೆ ತೆರಳಲು ಸಮುದ್ರಮಾರ್ಗವನ್ನು ಬಳಸುವ ವೇಳೆ ಅವಘಡಗಳು ಜರುಗಿವೆ ಎನ್ನಲಾಗ್ತಿದೆ.

ಹಡಗು ದುರಂತಗಳಲ್ಲಿ ಒಂದು ವರ್ಷದಲ್ಲಿ ಸುಮಾರು 1,500 ಮಂದಿ ವಲಸಿಗರು ನೀರಿನಲ್ಲಿ ಮೃತಪಟ್ಟಿದ್ದಾರೆ ಕೇಂದ್ರ ಮೆಡಿಟರೇನಿಯನ್ ಮಾರ್ಗದಲ್ಲಿ ಹೆಚ್ಚಾಗಿ ಈ ದುರಂತಗಳು ಸಂಭವಿಸಿವೆ ಎಂದು ವಿಶ್ವಸಂಸ್ಥೆಯ ವಲಸೆ ಸಂಸ್ಥೆ (UN migration agency) ಹೇಳಿಕೊಂಡಿದೆ.

ಉತ್ತರ ಆಫ್ರಿಕಾದ ರಾಷ್ಟ್ರಗಳಲ್ಲಿ ಡಿಸೆಂಬರ್​ನ ಆರಂಭದಲ್ಲಿಯೇ ಎರಡು ಪ್ರತ್ಯೇಕ ಹಡಗು ದುರಂತಗಳಲ್ಲಿ ಸುಮಾರು 160 ಮಂದಿ ನೀರುಪಾಲಾಗಿದ್ದರು ಎಂದು ಅಂತಾರಾಷ್ಟ್ರೀಯ ವಲಸೆ ಸಂಘಟನೆ (International Organization for Migration) ಮಾಹಿತಿ ನೀಡಿದೆ.

ಇದನ್ನೂ ಓದಿ: ತೀವ್ರ ಹಣಕಾಸಿನ ಮುಗ್ಗಟ್ಟಿನ ನಡುವೆ ರಾಡಾರ್​ ಖರೀದಿಸಿದ ತಾಲಿಬಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.