ಬಮಾಕೊ (ಮಾಲಿ): ಮಾಲಿ ದೇಶದ ಮೇಲೆ ಏರ್ ಸ್ಟ್ರೈಕ್ ನಡೆಸಿದ್ದು, ಅಲ್ ಖೈದಾ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಸುಮಾರು 50 ಉಗ್ರರು ಬಲಿಯಾಗಿದ್ದಾರೆ ಎಂದು ಫ್ರಾನ್ಸ್ ಸರ್ಕಾರ ತಿಳಿಸಿದೆ.
ಬುರ್ಕಿನಾ ಫಾಸೊ ಮತ್ತು ನೈಜರ್ ಗಡಿ ಪ್ರದೇಶದ ಮೋಟಾರ್ಸೈಕಲ್ ಕಾರವಾನ್ ಸಂಚರಿಸುತ್ತಿದ್ದದ್ದನ್ನು ಡ್ರೋನ್ ಮೂಲಕ ಪತ್ತೆ ಹಚ್ಚಲಾಗಿದ್ದು, ಬಳಿಕ ದಾಳಿ ನಡೆಸಲಾಗಿದೆ. 30 ಕಾರವಾನ್ಗಳು ನಾಶವಾಗಿದ್ದು, 50 ಉಗ್ರರು ಸಾವನ್ನಪ್ಪಿದ್ದಾರೆ. ಈ ಮೂಲಕ ಉಗ್ರರ ದೊಡ್ಡ ಸಂಚು ವಿಫಲವಾಗಿದೆ ಎಂದು ಫ್ರೆಂಚ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಮಾಹಿತಿ ನೀಡಿದ್ದಾರೆ.
ಅಲ್ಲದೇ ನಾಲ್ವರು ಉಗ್ರರನ್ನು ಸೆರೆಹಿಡಿಯಲಾಗಿದೆ ಎಂದು ಫ್ರಾನ್ಸ್ ಮಿಲಿಟರಿ ವಕ್ತಾರ ಕರ್ನಲ್ ಫ್ರೆಡೆರಿಕ್ ಬಾರ್ಬ್ರಿ ಹೇಳಿದ್ದಾರೆ.