ಅಬುಜಾ: ನೈಜೀರಿಯಾದ ಈಶಾನ್ಯ ರಾಜ್ಯವಾದ ಬೊರ್ನೊದಲ್ಲಿ ಎರಡು ಕಾರು ಸ್ಫೋಟಗೊಂಡು ಕನಿಷ್ಠ ನಾಲ್ಕು ಜನ ಮೃತಪಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಇಂಟರ್ನ್ಯಾಷನಲ್ ರೆಡ್‌ಕ್ರಾಸ್‌ನ ನೈಜೀರಿಯಾ ನಿಯೋಗ ತಿಳಿಸಿದೆ.
ರಾಜಧಾನಿ ಮೈದುಗುರಿಯಿಂದ ಪೂರ್ವಕ್ಕೆ 90 ಕಿ.ಮೀ ದೂರದಲ್ಲಿರುವ ಡಿಕ್ವಾ ಎಂಬ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ ಎಂದು ರೆಡ್‌ಕ್ರಾಸ್‌ನ ವಕ್ತಾರ ಅಲಿಯು ದಾವೋಬೆ ಹೇಳಿದ್ದಾರೆ.
ಸುಧಾರಿತ ಸ್ಫೋಟಕ ಸಾಧನಗಳಲ್ಲಿ ವೊ ವಾಹನಗಳು ಸ್ಫೋಟಗೊಂಡಿವೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.
ಜರ್ಮನಿಯ ಬಾಲ್ಟಿಕ್ ಸಮುದ್ರದಲ್ಲಿ ನಾಜಿಗಳ ರಹಸ್ಯ ಕೋಡಿಂಗ್ ಯಂತ್ರ ಪತ್ತೆ
ಗಂಭೀರವಾಗಿ ಗಾಯಗೊಂಡ ಐದು ಮಂದಿಯನ್ನು ಈಗ ಐಸಿಆರ್ಸಿ ಶಸ್ತ್ರಚಿಕಿತ್ಸಾ ತಂಡವು ಮೈದುಗುರಿಯ ರಾಜ್ಯ ವಿಶೇಷ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದೆ. ಇನ್ನೊಬ್ಬರನ್ನು ಮೈದುಗುರಿ ಬೋಧನಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ರೆಡ್ ಕ್ರಾಸ್ ವಕ್ತಾರರು ತಿಳಿಸಿದ್ದಾರೆ.
ಇದುವರೆಗೂ ಯಾವುದೇ ಸಂಘಟನೆಯು ಸ್ಫೋಟದ ಜವಾಬ್ದಾರಿ ವಹಿಸಿಕೊಂಡಿಲ್ಲ.