ರಬತ್ (ಮೊರೊಕ್ಕೊ): ಮೊರಕ್ಕೊದ ನೂತನ ಪ್ರಧಾನಿಯಾಗಿ ಲಿಬರಲ್ ನ್ಯಾಷನಲ್ ರ್ಯಾಲಿ ಆಫ್ ಇಂಡಿಪೆಂಡೆಂಟ್ಸ್ ಪಾರ್ಟಿಯ ಅಜೀಜ್ ಅಖನೌಚ್ ಅವರನ್ನು ನೇಮಿಸಿ ರಾಜ ಆರನೇ ಮೊಹಮ್ಮದ್ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಹೊಸ ಸರ್ಕಾರವನ್ನು ರಚಿಸುವಂತೆ ಸೂಚಿಸಿದ್ದಾರೆ.
ಉತ್ತರ ಆಫ್ರಿಕಾದ ಸಂಸತ್ ಚುನಾವಣೆಯ ಎರಡು ದಿನಗಳ ಬಳಿಕ ಅಖನೌಚ್ಅನ್ನು ಪ್ರಧಾನಿಯಾಗಿ ನೇಮಿಸಲಾಯಿತು. ಈ ಹಿಂದೆ ಇಸ್ಲಾಮಿಸ್ಟ್ ಜಸ್ಟೀಸ್ ಆ್ಯಂಡ್ ಡೆವಲಪ್‌ಮೆಂಟ್ ಪಾರ್ಟಿ (ಪಿಜೆಡಿ) ಯ ಸಾದ್ ಎಡ್ಡಿನ್ ಇಲ್ ಒಥ್ಮಣಿ ಪ್ರಧಾನಿಯಾಗಿದ್ದರು.
ಇದನ್ನೂ ಓದಿ: ಉರ್ದು ಭಾಷಿತ ತಾಲಿಬಾನ್‌ಗಳಿಂದ ಕಾಬೂಲ್‌ನಲ್ಲಿ ಭಾರತದೊಂದಿಗೆ ಸಂಪರ್ಕದ ಮಾಹಿತಿಯ ಜಾಲಾಟ!
ಸರ್ಕಾರವನ್ನು ರಚಿಸುವ ಸಲುವಾಗಿ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸುವುದಾಗಿ ನೂತನ ಪ್ರಧಾನಿ ಹೇಳಿದ್ದಾರೆ. ಈ ಸರ್ಕಾರದಲ್ಲಿ ಪಿಜೆಡಿ ಇರುವುದಿಲ್ಲ. ಚುನಾವಣೆಯಲ್ಲಿ ಸೋತ ಬಳಿಕ ಅದು ಪ್ರತಿಪಕ್ಷವಾಗಿ ಉಳಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಜಿ ಕೃಷಿ ಸಚಿವರಾಗಿದ್ದ ಅಖನೌಚ್ ಮೊರಕ್ಕೊದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಕಳೆದ ಬುಧವಾರ ಮೊರಕ್ಕೊ ಚುನಾವಣೆ ನಡೆದಿತ್ತು.