ETV Bharat / international

ಟೇಕ್​ಆಫ್ ಆಗಲು ತಯಾರಾಗಿದ್ದ ವಿಮಾನದ ರೆಕ್ಕೆ ಮೇಲೆ ಹಾರಿದ ಭೂಪ..! - ಅಜ್ಮಾನ್ ಏರ್

ರನ್​ವೇಯಲ್ಲಿ ಟೇಕಾಫ್ ಆಗಲು ತಯಾರಾಗಿದ್ದ ವಿಮಾನದ ರೆಕ್ಕೆಗೆ ವ್ಯಕ್ತಿವೋರ್ವ ಹಾರಿದ್ದು, ಬಳಿಕ ಕ್ಯಾಬಿನ್​ಗೆ ಪ್ರವೇಶಿಸಲು ಪ್ರಯತ್ನಿಸಿರುವ ಘಟನೆ ನೈಜೀರಿಯಾದಲ್ಲಿ ನಡೆದಿದೆ.

flight
author img

By

Published : Jul 21, 2019, 10:53 AM IST

ಅಬುಜಾ (ನೈಜೀರಿಯಾ): ಇಲ್ಲಿನ ಲಗೋಸ್ ನಗರದ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆಗುವ ತಯಾರಿಯಲ್ಲಿದ್ದ ವಿಮಾನದ ರೆಕ್ಕೆಯ ಮೇಲೆ ವ್ಯಕ್ತಿವೋರ್ವ ಹತ್ತಿದ್ದು, ಇದರಿಂದಾಗಿ ಪ್ರಯಾಣಿಕರ ಆತಂಕಕ್ಕೆ ಕಾರಣನಾಗಿದ್ದಾನೆ.

ಮುರ್ತಲಾ ಮೊಹಮ್ಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಅಜ್ಮಾನ್ ಏರ್ ಫ್ಲೈಟ್ ಟೇಕ್​ಆಫ್ ಆಗಲು ತಯಾರಾಗಿದ್ದಾಗ, ಈ ವ್ಯಕ್ತಿ ರೆಕ್ಕೆಯ ಮೂಲಕ ವಿಮಾನ ಹತ್ತಲು ಪ್ರಯತ್ನಿಸಿದ್ದಾನೆ.

"ವ್ಯಕ್ತಿವೋರ್ವ ರನ್​ವೇಯಲ್ಲಿದ್ದ ವಿಮಾನಕ್ಕೆ ಹತ್ತಲು ಪ್ರಯತ್ನಿಸುತ್ತಿದ್ದಾಗ ಪೈಲಟ್ ಇದನ್ನು ಗಮನಿಸಿ, ವಿಮಾನದ ಎಂಜಿನ್ ಆಫ್ ಮಾಡಿದ್ದಾರೆ. ಬಳಿಕ ಆ ವ್ಯಕ್ತಿ ಕ್ಯಾಬಿನ್ ಪ್ರವೇಶಿಸಲು ಪ್ರಯತ್ನಿಸಿದ್ದಾನೆ" ಎಂದು ಅಜ್ಮಾನ್ ಏರ್​ಲೈನ್ಸ್​​ ತಿಳಿಸಿದೆ.

ಬಳಿಕ ಆ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ನೈಜೀರಿಯಾದ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ಘಟನೆಯಿಂದ ನೈಜೀರಿಯಾದ ನೈಜರ್ ಡೆಲ್ಟಾದ ಪೋರ್ಟ್ ಹಾರ್ಕೋರ್ಟ್​ಗೆ ತೆರಳುತ್ತಿದ್ದ ಈ ವಿಮಾನದಲ್ಲಿ ವಿಳಂಬ ಸಂಭವಿಸಲಿಲ್ಲ. ಅದರೂ ಮತ್ತೊಂದು ಸುತ್ತಿನ ಪರಿಶೀಲನೆ ನಡೆಸಲಾಗುತ್ತದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.