ETV Bharat / international

'ಒಮಿಕ್ರಾನ್​' ರೂಪಾಂತರಿ ವಿರುದ್ಧ ಈಗಿರುವ ಕೋವಿಡ್​ ಲಸಿಕೆಗಳು ಹೋರಾಡುವ ಸಾಧ್ಯತೆಯಿದೆ : ದಕ್ಷಿಣಾ ಆಫ್ರಿಕಾ

author img

By

Published : Nov 27, 2021, 3:53 PM IST

ಫೈಝರ್​, ಮಾಡರ್ನಾ, ಜಾನ್ಸನ್ ಮತ್ತು ಜಾನ್ಸನ್ ಮತ್ತು ಅಸ್ಟ್ರಾಜೆನೆಕಾ ಸೇರಿದಂತೆ ವಿಶ್ವದ ಪ್ರಮುಖ ಕೋವಿಡ್​ ಲಸಿಕಾ ತಯಾರಕರು ತಮ್ಮ ಲಸಿಕೆಗಳು ಒಮಿಕ್ರೋನ್ ವಿರುದ್ಧ ಹೋರಾಡುತ್ತವೆಯೇ ಇಲ್ಲವೇ ಎಂಬ ಬಗ್ಗೆ ತನಿಖೆ ಪ್ರಾರಂಭಿಸಿವೆ..

South Africa's health minister
ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವ ಜೋ ಫಾಹ್ಲಾ

ಕೇಪ್‌ಟೌನ್(ದಕ್ಷಿಣ ಆಫ್ರಿಕಾ) : ಹೊಸದಾಗಿ ಪತ್ತೆಯಾಗಿರುವ ಕೊರೊನಾ ವೈರಸ್​ನ 'ಒಮಿಕ್ರಾನ್​' ರೂಪಾಂತರದ ವಿರುದ್ಧ ಈಗಿರುವ ಕೋವಿಡ್​ ಲಸಿಕೆಗಳು ಪರಿಣಾಮಕಾರಿಯಾಗಿರುವ ಸಾಧ್ಯತೆಯಿದೆ ಎಂದು ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವರು ಹೇಳಿದ್ದಾರೆ.

B.1.1.529 ಎಂದು ಕರೆಯಲ್ಪಡುವ ಹೊಸ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದೆ. ವಿಶ್ವಸಂಸ್ಥೆ ಅದಕ್ಕೆ 'ಒಮಿಕ್ರೋನ್' ಎಂದು ಹೆಸರಿಟ್ಟಿದೆ. ಇದು ಮರುಸೋಂಕು, ಅಂದರೆ ಕೋವಿಡ್​ನಿಂದ ಗುಣಮುಖರಾದವರಿಗೂ ಮತ್ತೆ ಅಂಟುವ ಅಪಾಯವನ್ನು ಸೂಚಿಸುತ್ತವೆ.

ಇದನ್ನೂ ಓದಿ: ಕೊರೊನಾ ರೂಪಾಂತರಿ 'ಒಮಿಕ್ರೋನ್' ಆತಂಕ: ದಕ್ಷಿಣ ಆಫ್ರಿಕಾ ಸೇರಿ ಈ ದೇಶಗಳಿಗೆ ಪ್ರವೇಶ ನಿಷೇಧ

ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವ ಜೋ ಫಾಹ್ಲಾ ಅವರ ಪ್ರಕಾರ ಪ್ರಸ್ತುತ ಲಭ್ಯವಿರುವ ಲಸಿಕೆಗಳು ಇನ್ನೂ ತೀವ್ರವಾದ ಕೋವಿಡ್ ರೂಪಾಂತರದಿಂದ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿವೆ. ಅಲ್ಲದೇ ಅನುವಂಶಿಕ ಸಂಯೋಜನೆಯಿಂದಾಗಿ ಇದರ ಹರಡುವಿಕೆ ಪ್ರಮಾಣ ಹೆಚ್ಚಿರಬಹುದು.

ಫೈಝರ್​, ಮಾಡರ್ನಾ, ಜಾನ್ಸನ್ ಮತ್ತು ಜಾನ್ಸನ್ ಮತ್ತು ಅಸ್ಟ್ರಾಜೆನೆಕಾ ಸೇರಿದಂತೆ ವಿಶ್ವದ ಪ್ರಮುಖ ಕೋವಿಡ್​ ಲಸಿಕಾ ತಯಾರಕರು ತಮ್ಮ ಲಸಿಕೆಗಳು ಒಮಿಕ್ರೋನ್ ವಿರುದ್ಧ ಹೋರಾಡುತ್ತವೆಯೇ ಇಲ್ಲವೇ ಎಂಬ ಬಗ್ಗೆ ತನಿಖೆ ಪ್ರಾರಂಭಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.