ಜೋಹಾನ್ಸ್‌ಬರ್ಗ್ : ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯನ್ನು ಕೊನೆಗೊಳಿಸಲು ಹೋರಾಡಿದ್ದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಆರ್ಚ್‌ಬಿಷಪ್ ಡೆಸ್ಮಂಡ್ ಟುಟು (90) ಇಂದು ಇಹಲೋಕ ತ್ಯಜಿಸಿದ್ದಾರೆ.
ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರು ಡೆಸ್ಮಂಡ್ ಟುಟು ಸಾವನ್ನು ಖಚಿತಪಡಿಸಿದ್ದು, "ಇವರ ನಿಧನವು ವಿಮೋಚನೆಗೊಂಡ ದಕ್ಷಿಣ ಆಫ್ರಿಕಾವನ್ನು ನಮಗೆ ನೀಡಿದ ಅತ್ಯುತ್ತಮ ದಕ್ಷಿಣ ಆಫ್ರಿಕನ್ನರ ಪೀಳಿಗೆಗೆ ನಮ್ಮ ರಾಷ್ಟ್ರದ ವಿದಾಯದಲ್ಲಿ ಮತ್ತೊಂದು ಅಧ್ಯಾಯವಾಗಿದೆ" ಎಂದು ಹೇಳಿ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ ಮಗಳ ಅಂಗಾಂಗ ದಾನ : 9 ಮಂದಿಗೆ ಹೊಸ ಬಾಳು ನೀಡಿದ ಎರಡೂವರೆ ವರ್ಷದ ಬಾಲಕಿ
ದಕ್ಷಿಣ ಆಫ್ರಿಕಾದ ಕೆಲವೆಡೆ ಜನಾಂಗೀಯ ವರ್ಣಭೇದ ನೀತಿ ಇಂದಿಗೂ ಜೀವಂತವಾಗಿದೆ. ತಮ್ಮ ಇಳಿ ವಯಸ್ಸಿನವರೆಗೂ ದಣಿವರಿಯದೆ ಬಿಳಿ ಅಲ್ಪಸಂಖ್ಯಾತರ ಆಳ್ವಿಕೆ ವಿರುದ್ಧ ಹೋರಾಡಿದ ಇವರಿಗೆ 1984ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.