ETV Bharat / international

ಆಹಾರಕ್ಕೂ ಪರಿತಪಿಸುವ ಸೂಡಾನ್​​ಗೆ ಅಬ್ದುಲ್ಲಾ ಹಮ್ಡೋಕ್​ ಹೊಸ ಪ್ರಧಾನಿ - ಸೂಡಾನ್​​ನ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿ

ಸೂಡಾನ್​ನಲ್ಲಿ ಸ್ಥಾಪಿತವಾಗಿರುವ ಹೊಸ ಸಾರ್ವಭೌಮತ್ವದ ಸಮಿತಿ ಅಧ್ಯಕ್ಷ ಅಬ್ದೆಲ್​​ ಫತ್ಹಾ ಅಲ್​​ ಬುರ್ಹಾನ್​ ಅವರ ಸಮ್ಮುಖದಲ್ಲಿ ಅಬ್ದುಲ್ಲಾ ಹಮ್ಡೋಕ್ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.

ಅಬ್ದಲ್ಲಾ ಹಮ್ಡೋಕ್
author img

By

Published : Aug 22, 2019, 10:33 AM IST

ಖರ್ಟೋಮ್(ಸುಡಾನ್)​​: ಭೀಕರ ಹಸಿವಿನಿಂದ ಬಳಲುತ್ತಿರುವ ಸೂಡಾನ್​ಗೆ ಹೊಸ ಪ್ರಧಾನಿ ಬಂದಿದ್ದಾರೆ. ಅಬ್ದುಲ್ಲಾ ಹಮ್ಡೋಕ್​​ ಬಡ ದೇಶದ ಪ್ರಧಾನಿಯಾಗಿ ಆಯ್ಕೆ ಆಗಿದ್ದಾರೆ. ಕಳೆದ ತಿಂಗಳಷ್ಟೇ ಸುಡಾನ್​​ನಲ್ಲಿ ನಾಗರಿಕ ಸರ್ಕಾರವೊಂದು ಅಧಿಕಾರಕ್ಕೆ ಬಂದಿತ್ತು.

ಹಮ್ಡೋಕ್​ ಅಧಿಕೃತವಾಗಿ ಅಂದರೆ ಸಂವಿಧಾನ ಬದ್ಧವಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

ಸೂಡಾನ್​ನಲ್ಲಿ ಸ್ಥಾಪಿತವಾಗಿರುವ ಹೊಸ ಸಾರ್ವಭೌಮತ್ವದ ಸಮಿತಿ ಅಧ್ಯಕ್ಷ ಅಬ್ದೆಲ್​​ ಫತ್ಹಾ ಅಲ್​​ ಬುರ್ಹಾನ್​ ಅವರ ಸಮ್ಮುಖದಲ್ಲಿ ಅಬ್ದುಲ್ಲಾ ಹಮ್ಡೋಕ್ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.

ಹಮ್ಡೋಕ್​ ಸಚಿವ ಸಂಪುಟದಲ್ಲಿ ಸುಮಾರು 20 ಸಚಿವರು ಇರಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹಮ್ಡೋಕ್​​​ ಖಾರ್ಟಮ್​​ ವಿವಿಯಿಂದ ಪದವಿ ಪಡೆದಿದ್ದು, ಮ್ಯಾಂಚೆಸ್ಟರ್​ ವಿವಿಯಿಂದ ಮಾಸ್ಟರ್​ ಹಾಗೂ ಪಿಎಚ್​ಡಿ ಪದವಿ ಪಡೆದಿದ್ದಾರೆ. 1980ರ ಅವಧಿಯಲ್ಲಿ ಅವರು ಸೂಡಾನ್​​ನ ಹಣಕಾಸು ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

Intro:Body:

ಆಹಾರಕ್ಕೂ ಪರಿತಪಿಸುವ ಸೂಡಾನ್​​ಗೆ ಅಬ್ದಲ್ಲಾ ಹಮ್ಡೋಕ್​ ಹೊಸ ಪ್ರಧಾನಿ 

ಖರ್ಟೋಮ್​​: ಭೀಕರ ಹಸಿವಿನಿಂದ ಬಳಲುತ್ತಿರುವ ಸೂಡಾನ್​ಗೆ ಹೊಸ ಪ್ರಧಾನಿ ಬಂದಿದ್ದಾರೆ.   ಅಬ್ದಲ್ಲಾ ಹಮ್ಡೋಕ್​​ ಬಡ ದೇಶದ ಪ್ರಧಾನಿಯಾಗಿ ಆಯ್ಕೆ ಆಗಿದ್ದಾರೆ.  ಕಳೆದ ತಿಂಗಳಷ್ಟೇ ಸುಡಾನ್​​ನಲ್ಲಿ ನಾಗರಿಕ ಸರ್ಕಾರವೊಂದು ಅಧಿಕಾರಕ್ಕೆ ಬಂದಿತ್ತು.  

ಹಮ್ಡೋಕ್​ ಅಧಿಕೃತವಾಗಿ ಅಂದರೆ ಸಂವಿಧಾನ ಬದ್ಧವಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. 

ಸೂಡಾನ್​ನಲ್ಲಿ ಸ್ಥಾಪಿತವಾಗಿರುವ ಹೊಸ ಸಾರ್ವಭೌಮತ್ವದ ಸಮಿತಿ ಅಧ್ಯಕ್ಷ ಅಬ್ದೆಲ್​​ ಫತ್ಹಾ ಅಲ್​​ ಬುರ್ಹಾನ್​ ಅವರ ಸಮ್ಮುಖದಲ್ಲಿ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.  

ಹಮ್ಡೋಕ್​ ಸಚಿವ ಸಂಪುಟದಲ್ಲಿ ಸುಮಾರು 20 ಸಚಿವರು ಇರಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.   ಹಮ್ಡೋಕ್​​​ ಖಾರ್ಟಮ್​​ ವಿವಿಯಿಂದ ಪದವಿ ಪಡೆದಿದ್ದು,   ಮ್ಯಾಂಚೆಸ್ಟರ್​ ವಿವಿಯಿಂದ ಮಾಸ್ಟರ್​ ಹಾಗೂ ಪಿಎಚ್​ಡಿ ಪದವಿ ಪಡೆದಿದ್ದಾರೆ.  1980 ರ ಅವಧಿಯಲ್ಲಿ ಅವರು ಸೂಡಾನ್​​ನ ಹಣಕಾಸು ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.