ಉಗಡೌಗೌ (ಬುರ್ಕಿನ ಫಾಸೊ): ಪಶ್ಚಿಮ ಆಫ್ರಿಕಾದ ಉತ್ತರ ಬುರ್ಕಿನ ಫಾಸೊದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 35 ಜನ ನಾಗರಿಕರು ಸಾವಿಗೀಡಾಗಿದ್ದು, ಸೇನಾ ಕಾರ್ಯಾಚರಣೆಯಲ್ಲಿ 80 ಜನ ಉಗ್ರಗಾಮಿಗಳು ಹತರಾಗಿದ್ದಾರೆ ಎಂದು ದೇಶದ ಅಧ್ಯಕ್ಷ ರೋಚ್ ಮಾರ್ಕ್ ಕಬೋರ್ ತಿಳಿಸಿದ್ದಾರೆ.
-
As many as 35 civilians were killed after terrorists attacked a town in northern Burkina Faso on Tuesday, country's President Roch Marc Kabore said, adding that the ensuing clashes with security forces left 80 terrorists dead
— ANI Digital (@ani_digital) December 25, 2019 " class="align-text-top noRightClick twitterSection" data="
Read @ANI story | https://t.co/AYbn7slmsA pic.twitter.com/p8AWqvdg4l
">As many as 35 civilians were killed after terrorists attacked a town in northern Burkina Faso on Tuesday, country's President Roch Marc Kabore said, adding that the ensuing clashes with security forces left 80 terrorists dead
— ANI Digital (@ani_digital) December 25, 2019
Read @ANI story | https://t.co/AYbn7slmsA pic.twitter.com/p8AWqvdg4lAs many as 35 civilians were killed after terrorists attacked a town in northern Burkina Faso on Tuesday, country's President Roch Marc Kabore said, adding that the ensuing clashes with security forces left 80 terrorists dead
— ANI Digital (@ani_digital) December 25, 2019
Read @ANI story | https://t.co/AYbn7slmsA pic.twitter.com/p8AWqvdg4l
ಸೌಮ್ ಪ್ರಾಂತ್ಯದ ಅರ್ಬಿಂದಾ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ. 'ಉಗ್ರಗಾಮಿಗಳ ಜೊತೆ ಕಾಳಗಕ್ಕಿಳಿದ ನಮ್ಮ ಸೈನಿಕರು 80 ಮಂದಿಯನ್ನು ಹತ್ಯೆ ಮಾಡಿದ್ದಲ್ಲದೆ, ಪ್ರಮುಖ ಮಿಲಿಟರಿ ಉಪಕರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅನಾಗರಿಕ ದಾಳಿಯಲ್ಲಿ ದೇಶದ 35 ಜನರು ಸಾವಿಗೀಡಾಗಿದ್ದು, ಹೆಚ್ಚಿನವರು ಮಹಿಳೆಯರಾಗಿದ್ದಾರೆ' ಎಂದು ರೋಚ್ ಮಾರ್ಕ್ ಕಬೋರ್ ಟ್ವೀಟ್ ಮಾಡಿದ್ದಾರೆ.
ಈ ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಸದ್ಯ ಬುರ್ಕಿನ ಫಾಸೊ ಅಧ್ಯಕ್ಷ ರೋಚ್ ಮಾರ್ಕ್ ಕಬೋರ್ ಎರಡು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದಾರೆ.