ETV Bharat / headlines

ಕೊರೊನಾ ನಡುವೆ ಬಿಸಿಲ ಬಿಸಿ..ಕಂಗೆಟ್ಟ ಜನಕ್ಕೆ ಟೆಂಟ್​ ತಂಪು!! - ವಿಜಯಪುರ ಮಹಾನಗರ ಪಾಲಿಕೆ ವಿನೂತನ ಪ್ರಯೋಗ

ಬೈಕ್ ಸವಾರರಿಗೆ ನೆರಳು ಒದಗಿಸಲು ಮಹಾನಗರ ಪಾಲಿಕೆ ಕಳೆದೆರಡು ವರ್ಷದಿಂದ ವಿನೂತನ ಪ್ರಯೋಗ ನಡೆಸುತ್ತಿದೆ. ಇದು ಬೈಕ್ ಸವಾರರಿಗೆ ಅರಳಿ‌ ಮರದ ನೆರಳಂತೆ ಅನುಭವ ನೀಡುತ್ತಿದೆ.

vijayapura
vijayapura
author img

By

Published : Apr 27, 2021, 3:43 PM IST

Updated : Apr 27, 2021, 8:54 PM IST

ವಿಜಯಪುರ: ಜಿಲ್ಲೆಯಲ್ಲಿ ಬಿಸಿಲಿನಿಂದಾಗಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಳಗಿನ ಜಾವ 10 ಗಂಟೆಯಾದರೆ ಸಾಕು ಮನೆಯಿಂದ ಜನರು ಹೊರ ಬರಲು ಪರದಾಡುವಷ್ಟು ಬಿಸಿಲು ಜಿಲ್ಲೆಯಲ್ಲಿ ಇದೆ. ಈಗಾಗಲೇ ಜಿಲ್ಲೆಯಲ್ಲಿ ಉಷ್ಣಾಂಶ 38 ರಿಂದ 40 ಡಿಗ್ರಿಗೆ ಬಂದು ತಲುಪುತ್ತಿದೆ.

ಇನ್ನು ನಗರದ ಪ್ರಮುಖ ಸಿಗ್ನಲ್​ಗಳಲ್ಲಿ ಬೈಕ್ ಸವಾರರು ಒಂದೆರಡು ನಿಮಿಷಗಳ ಕಾಲ ಸಿಗ್ನಲ್​ಗಳಲ್ಲಿ ಕಾಯಬೇಕಾದ ಅನಿವಾರ್ಯತೆ ಇದೆ. ಹೀಗಿರುವಾಗ ಬಿಸಿಲಿನಿಂದ ಜನರಿಗೆ ತೊಂದರೆ ಆಗುತ್ತದೆ ಎಂದು ಮನಗಂಡ ಮಹಾನಗರ ಪಾಲಿಕೆ ಅಧಿಕಾರಿಗಳು ನಗರದ ಪ್ರಮುಖ ಟ್ರಾಫಿಕ್ ಸಿಗ್ನಲ್​ಗಳಲ್ಲಿ ಎರಡೂವರೆ ತಿಂಗಳುಗಳ ಕಾಲ ಬಾಡಿಗೆ ಪಡೆದು ಟೆಂಟ್( ಪಿಂಕ್ ಹೊದಿಕೆ) ಹಾಕಿ ಬಿಸಿಲಿನಿಂದ ಜನರನ್ನು ರಕ್ಷಿಸಿ ಕೊಳ್ಳಲು ಸಹಾಯ ಮಾಡುತ್ತಿದೆ.

ನಗರದ ಕೇಂದ್ರೀಯ ಬಸ್ ನಿಲ್ದಾಣದ ಮುಂಭಾಗ, ಬಸವೇಶ್ವರ ವೃತ್ತ, ಗಾಂಧಿ ವೃತ್ತ, ವಾಟರ್ ಟ್ಯಾಂಕ್ ಹೀಗೆ ಹಲವು ಪ್ರಮುಖ ಟ್ರಾಫಿಕ್ ಸಿಗ್ನಲ್​ಗಳಲ್ಲಿ ಈ ರೀತಿಯ ಟೆಂಟ್ (ಹೊದಿಕೆ) ವ್ಯವಸ್ಥೆಯನ್ನು ಪಾಲಿಕೆ ಸಿಬ್ಬಂದಿ ಮಾಡಿದ್ದಾರೆ.

ಕೊರೊನಾ ನಡುವೆ ಬಿಸಿಲ ಬಿಸಿ..ಕಂಗೆಟ್ಟ ಜನಕ್ಕೆ ಟೆಂಟ್​ ತಂಪು!!

ಇನ್ನೂ ಎರಡೂವರೆ ತಿಂಗಳ ಈ ಟೆಂಟ್​ಗೆ ಬಾಡಿಗೆ ರೂಪದಲ್ಲಿ 5 ಲಕ್ಷ ರೂ. ಹಣವನ್ನು ಗುತ್ತಿಗೆದಾರರಿಗೆ ಸಂದಾಯ ಮಾಡುತ್ತಿದೆ. ಕಳೆದ ವರ್ಷ ಕೂಡಾ ಬೇಸಿಗೆ ಸಮಯದಲ್ಲಿ ‌ಈ ರೀತಿಯಾದ ಟೆಂಟ್( ಹೊದಿಕೆ) ವ್ಯವಸ್ಥೆ ಮಹಾನಗರ ಪಾಲಿಕೆ ಅಧಿಕಾರಿಗಳು ಮಾಡಿದ್ದರು. ಈ ಬಾರಿ ಮತ್ತೊಮ್ಮೆ ಬಿಸಿಲಿನ ತಾಪ ಜಿಲ್ಲೆಯಲ್ಲಿ ಹೆಚ್ಚಾದ ಹಿನ್ನೆಲೆ ಟೆಂಟ್ (ಹೊದಿಕೆ) ವ್ಯವಸ್ಥೆ ಮಾಡಿದ್ದಾರೆ. ಇನ್ನೂ ಮಹಾನಗರ ಪಾಲಿಕೆ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಒಂದೆಡೆ ಕೊರೊನಾ ಆತಂಕ ಇನ್ನೊಂದೆಡೆ ಬಿಸಿಲಿನ ತಾಪದಿಂದ ಜಿಲ್ಲೆಯ ಜನತೆಯನ್ನು ಬಸವಳಿಯುವಂತೆ ಮಾಡಿದೆ. ಇನ್ನೂ ಮಹಾನಗರ ಪಾಲಿಕೆ ಅಧಿಕಾರಿಗಳು ಸಿಗ್ನಲ್​ಗಳಲ್ಲಿ ಟೆಂಟ್ ಹಾಕಿರುವುದಕ್ಕೆ ನಗರದ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.

Last Updated : Apr 27, 2021, 8:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.