ETV Bharat / headlines

ಕೊರೊನಾ ಪಾಸಿಟಿವ್​ ಬರುವ ಮುನ್ನ ಶ್ರವಣ್ ರಾಥೋಡ್ ಕುಂಭ ಮೇಳದಲ್ಲಿ ಭಾಗಿ: ಸತ್ಯಾಂಶ ಬಿಚ್ಚಿಟ್ಟ ಮಗ

ಅಪ್ರತಿಮ ಸಂಗೀತ ಸಂಯೋಜಕ ಶ್ರವಣ್ ರಾಥೋಡ್ ಅವರ ನಿಧನದ ನಂತರ, ಅವರ ಮಗ ಸಂಜೀವ್ ರಾಥೋಡ್ ಅವರು ತಂದೆ ಬಗ್ಗೆ ಮಾತನಾಡಿದ್ದು, ತಮ್ಮ ತಂದೆ ಕೊರೊನಾ ದೃಢವಾಗುವ ಕೆಲವು ದಿನಗಳ ಮೊದಲು ಹರಿದ್ವಾರದಲ್ಲಿನ ಕುಂಭಮೇಳದಲ್ಲಿ ಭಾಗವಹಿಸಿದ್ದರು ಎಂದು ಬಹಿರಂಗಪಡಿಸಿದ್ದಾರೆ.

Shravan Rathod attended Kumbh Mela before testing COVID- 19 positive, reveals son

author img

By

Published : Apr 23, 2021, 6:00 PM IST

ಹೈದರಾಬಾದ್: ಜನಪ್ರಿಯ ಸಂಗೀತ ಸಂಯೋಜಕ ಶ್ರವಣ್ ಕುಮಾರ್ ರಾಥೋಡ್ ಗುರುವಾರ ನಿಧನರಾದರು. ಶ್ರವಣ್ ಅವರು ವೈರಸ್‌ಗೆ ತುತ್ತಾಗುವ ಕೆಲವು ದಿನಗಳ ಮೊದಲು ಕುಂಭಮೇಳದಿಂದ ಹಿಂದಿರುಗಿದ್ದರು.

ಈ ಸಂಬಂಧ ಮಾಹಿತಿ ನೀಡಿರುವ ಅವರ ಮಗ ಸಂಜೀವ್ ರಾಥೋಡ್, ಕೊರೊನಾ ಪಾಸಿಟಿವ್ ದೃಢವಾಗುವ ಕೆಲವು ದಿನಗಳ ಮೊದಲು ತಂದೆ ಮತ್ತು ತಾಯಿ ಹರಿದ್ವಾರದಲ್ಲಿ ಕುಂಭ ಮೇಳದಲ್ಲಿ ಭಾಗವಹಿಸಿದ್ದರು ಎಂದಿದ್ದಾರೆ.

ನಮ್ಮ ಕುಟುಂಬವು ಇಂತಹ ಕಠಿಣ ಸಮಯ ಎದುರಿಸಬೇಕಾಗುತ್ತದೆ ಎಂದು ನಾವು ಎಂದೂ ಯೋಚಿಸಿರಲಿಲ್ಲ, ನನ್ನ ತಂದೆ ತೀರಿಕೊಂಡರು. ನನಗೂ ಈಗ ಕೊರೊನಾ ಪಾಸಿಟಿವ್​ ಆಗಿದೆ. ಹಾಗೆ ನನ್ನ ತಾಯಿಗೂ ಹಾಗೆ ನನ್ನ ಸಹೋದರನಿಗೂ ಕೊರೊನಾ ದೃಢಪಟ್ಟಿದೆ ಎಂದು ನೋವು ತೋಡಿಕೊಂಡಿದ್ದಾರೆ. ನದೀಮ್-ಶ್ರವಣ್ ಅವರು ತೊಂಬತ್ತರ ದಶಕದ ಆರಂಭದಲ್ಲಿ ಅದ್ಭುತವಾದ ಸಂಗೀತವನ್ನು ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.