ನವದೆಹಲಿ: ಗಂಗಾ ನದಿಯ ದಡದಲ್ಲಿ ಸಮಾಧಿಯಾದ ಮೃತ ದೇಹಗಳ ಬಗ್ಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಮೋದಿಯವರ ವ್ಯವಸ್ಥೆಯೂ ಅದೇ ಸ್ಥಳದಲ್ಲಿ ಹೂತು ಹೋಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು. ಗಂಗಾ ನದಿಯ ದಡದಲ್ಲಿ ಗೋಚರಿಸುವ ಪ್ರತಿಯೊಂದು ಮೃತ ದೇಹಗಳ ಬಟ್ಟೆಗಳು ಸಹ ಮೋದಿ ವ್ಯವಸ್ಥೆಯನ್ನು ಅದೇ ಮಣ್ಣಿನಲ್ಲಿ ಹೂಳಲಾಗಿದೆ ಎಂದು ಹೇಳುತ್ತವೆ ಎಂದು ತೀವ್ರವಾಗಿ ಖಂಡಿಸಿದ್ದಾರೆ.
ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿನ ಗಂಗಾ ನದಿಯ ದಡದಲ್ಲಿ ಹಲವಾರು ಮೃತ ದೇಹಗಳನ್ನು ಹೂಳಲಾಗಿದೆ ಎಂದು ತಿಳಿದು ಬಂದ ನಂತರ ಪ್ರಧಾನಿ ವಿರುದ್ಧ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.