ಜನಕ್‌ಪುರ(ನೇಪಾಳ): ನೇಪಾಳದಲ್ಲಿ ಉಂಟಾಗಿರುವ ಪ್ರವಾಹದ ಹಾಗೂ ಭೂ ಕುಸಿತದಿಂದಾಗಿ ಸಾವನ್ನಪ್ಪಿರುವವರ ಸಂಖ್ಯೆ 90 ಕ್ಕೆ ತಲುಪಿದ್ದು, 29 ಜನರು ನಾಪತ್ತೆಯಾಗಿದ್ದಾರೆ.
ಭಾರಿ ವರ್ಷಧಾರೆಯ ಪರಿಣಾಮ ಹಲವು ಗ್ರಾಮಗಳು ಸಂಪೂರ್ಣ ಜಲಾವೃತವಾಗಿದೆ. ಇನ್ನು ಈ ಕುರಿತು ಮಾಹಿತಿ ನೀಡಿರುವ ನೇಪಾಳ ಗೃಹ ಸಚಿವಾಲಯ ಈವರೆಗೆ 90 ಮಂದಿ ಸಾವಿಗೀಡಾಗಿದ್ದು, 29 ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ತಿಳಿಸಿದೆ.
ರಾಷ್ಟ್ರಾದ್ಯಂತ 3,366 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಪರಿಹಾರ ವಿತರಣೆ ಮತ್ತು ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ನೇಪಾಳದ ಪ್ರವಾಹ ಭಾರತಕ್ಕೂ ತಟ್ಟಿದ್ದು, ಬಿಹಾರದಲ್ಲೂ ನೆರೆ ಪರಿಸ್ಥಿತಿ ಉಂಟಾಗಿದೆ.