ETV Bharat / headlines

ಕೊರೊನಾ ಮರಣ ಮೃದಂಗ: ಸಾವಿನ ಸಂಖ್ಯೆ 304ಕ್ಕೇರಿಕೆ, ಚೀನಾದ 14 ಸಾವಿರ ಜನರಲ್ಲಿ ವೈರಸ್​ ಪತ್ತೆ

author img

By

Published : Feb 2, 2020, 9:33 AM IST

ಕೊರೊನಾ ವೈರಸ್​ಗೆ ಬಲಿಯಾದವರ ಸಂಖ್ಯೆ 304ಕ್ಕೆ ಏರಿಕೆಯಾಗಿದ್ದು, ಸದ್ಯ ಚೀನಾದ ಗುಬೆ ಪ್ರಾಂತ್ಯದಲ್ಲಿ 45 ಮಂದಿ ಮತ್ತೆ ಮಹಾಮಾರಿ ವೈರಸ್​ಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.

Coronavirus death toll mounts to 304 in china
ಬಿಡದ ಕೊರೊನಾ ಕಾಟ: ಚೈನಾದಲ್ಲಿ ಸಾವಿನ ಸಂಖ್ಯೆ 304ಕ್ಕೆ ಏರಿಕ

ಹುಬೈ(ಚೀನಾ): ಚೀನಾದಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ಕೊರೊನಾ ವೈರಸ್​ಗೆ ಬಲಿಯಾದವರ ಸಂಖ್ಯೆ 304ಕ್ಕೆ ಏರಿಕೆಯಾಗಿದ್ದು, ಸದ್ಯ ಇಲ್ಲಿನ ಗುಬೆ ಪ್ರಾಂತ್ಯದಲ್ಲಿ ಮತ್ತೆ 45 ಮಂದಿ ಕರಾಳ ವೈರಸ್​ ಬಾಯಿಗೆ ತುತ್ತಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಿ ಎನ್‌ಹೆಚ್‌ಕೆ ವರದಿ ಮಾಡಿದೆ.

ಡಿಸೆಂಬರ್​ ತಿಂಗಳಲ್ಲಿ ಚೀನಾದ ವುಹಾನ್​ ನಗರದಲ್ಲಿ ಕಾಣಿಸಿಕೊಂಡ ಈ ವೈರಸ್​ ನಂತರ ಪ್ರಪಂಚದ ಹಲವು ಭಾಗಗಳಿಗೆ ಹರಡುತ್ತಿದೆ. ಚೀನಾದಲ್ಲಿ ಸದ್ಯ 14,000ಕ್ಕೂ ಹೆಚ್ಚು ಮಂದಿ ದೇಹದಲ್ಲಿ ಕೊರೊನಾ ವೈರಸ್ ಇರುವುದು ಖಚಿತವಾಗಿದೆ ಎಂದು ಹೇಳಲಾಗ್ತಿದೆ.

ನೋವೆಲ್​ ಕೊರೊನಾ ವೈರಸ್​ ಹರಡುವಿಕೆ ತಡೆಯುವ ಸಲುವಾಗಿ ಪ್ರವಾಸೋದ್ಯಮದ ಮೇಲೆ ನಿರ್ಬಂಧ ಹೇರಲಾಗಿದೆ. ಚೀನಾ ಮಾತ್ರವಲ್ಲದೇ ಏಷ್ಯಾದ ಖಂಡದ ಇನ್ನೂ ಏಳು ದೇಶಗಳು ಮತ್ತು ಆಸ್ಟ್ರೇಲಿಯಾ, ಫ್ರಾನ್ಸ್​​, ಅಮೆರಿಕ ದೇಶಗಲ್ಲೂ ಕೊರೊನಾ ವೈರಸ್​ ನಿರಂತರವಾಗಿ ಹರಡುತ್ತಿದೆ. ಈ ಹಿನ್ನಲೆ ಈ ಮಹಾಮಾರಿ ವೈರಸ್​ ನಿಯಂತ್ರಣಕ್ಕೆ ವೈದ್ಯರು ನಿರಂತರ ಶ್ರಮಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.